ಕೇರಳದ ಪಾಲಕ್ಕಾಡ್ನಲ್ಲಿ ಆಹಾರ ಅರಸಿ ಬಂದಿದ್ದ ಗರ್ಭಿಣಿ ಆನೆಗೆ ಅನಾನಸ್ನಲ್ಲಿ ಸಿಡಿಮದ್ದು ಇಟ್ಟು ನೀಡಲಾಗಿತ್ತು. ಅದನ್ನು ತಿಂದ ಆನೆ ನರಳಾಡಿ ಸಾವನ್ನಪ್ಪಿತ್ತು. ಈ ಘಟನೆ ಬೆಳಕಿ ಬರುತ್ತಿದ್ದಂತೆಯೇ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಮನುಷ್ಯತ್ವ ಸತ್ತಿದೆ ಎಂದು ಹಲವಾರು ಸೆಲೆಬ್ರಿಟಿಗಳು ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸ್ಯಾಂಡಲ್ವುಡ್ ತಾರೆಯರೂ ಹೊರತಾಗಿಲ್ಲ. ಐಂದ್ರಿತಾ ರೇ, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಹಾಗೂ ನಿಖಿಲ್ ಕುಮಾರ್ ಸ್ವಾಮಿ ಸಹ ಗರ್ಭಿಣಿ ಆನೆಯ ಸಾವಿಗೆ ಮರುಗಿದ್ದಾರೆ.
ಅಭಿಷೇಕ್ ಅಂಬರೀಷ್, ಹಸಿವನ್ನು ನೀಗಿಸಿಕೊಳ್ಳಲು ಬಂದಿದ್ದ ಜೀವಿಯ ಪ್ರಾಣವನ್ನು ತೆಗೆದಂತಹ ಘಟನೆ ಮತ್ತೊಮ್ಮೆ ಮರುಕಳಿಸದಿರಲಿ ಹಾಗೂ ನಂಬಿಕೆ ಬಲಿಯಾಗದಿರಲಿ. ಮಾನವೀಯತೆ ಮರೆಯಾಗದಿರಲಿ. ಆನೆಯನ್ನು ಪೂಜಿಸಿದರೆ ಸಾಲದು ಅದನ್ನು ದಯೆಯಿಂದ ಕಾಣಬೇಕು ಎಂದು ಮನವಿ ಮಾಡಿದ್ದಾರೆ.
View this post on Instagram
ಮನುಷ್ಯ ಅಂದರೆ ಮಾನವೀಯತೆ ಆದರೆ ಪ್ರಾಣಿಗಳೊಂದಿಗೆ ಮನುಷ್ಯನ ಈ ಮಟ್ಟದ ಮೃಗೀಯ ವರ್ತನೆ ನಿಜಕ್ಕೂ ಖೇದಕರ ವಿಚಾರ..
ಮಗಳ ಮೊದಲ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಲೂಸ್ ಮಾದ ಯೋಗಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ