HOME » NEWS » Entertainment » NIKHIL HOUSE CONSTRUCTION NIKHIL BHUMI PUJA NIKHIL AND REVATI DONE BHUMI PUJA TO CONSTRUCT NEW HOME RMD

ನೆಚ್ಚಿನ್​ ಫಾರ್ಮ್​ಹೌಸ್​ನಲ್ಲೇ ಮನೆ ಕಟ್ಟಲು ಭೂಮಿಪೂಜೆ ಮಾಡಿದ ನಿಖಿಲ್​-ರೇವತಿ

ಗೌರಿ ಗಣೇಶ ಹಬ್ಬದಂದು ನಿಖಿಲ್​ ಹಾಗೂ ರೇವತಿ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದು ನಿಖಿಲ್​ ಅವರ ಕನಸಿನ ಮನೆ ಆಗಿದ್ದು, ತುಂಬಾನೇ ಸುಂದರವಾಗಿ ನಿರ್ಮಾಣ ಮಾಡಲು ಚಿಂತಿಸಿದ್ದಾರೆ. 

news18-kannada
Updated:August 24, 2020, 11:47 AM IST
ನೆಚ್ಚಿನ್​ ಫಾರ್ಮ್​ಹೌಸ್​ನಲ್ಲೇ ಮನೆ ಕಟ್ಟಲು ಭೂಮಿಪೂಜೆ ಮಾಡಿದ ನಿಖಿಲ್​-ರೇವತಿ
ಭೂಮಿ ಪೂಜೆ ನೆರವೇರಿಸಿದ ನಿಖಿಲ್​-ರೇವತಿ
  • Share this:
ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಮಾಜಿ ಮುಖ್ಯಮಂತ್ರಿ ಎಚ್​.ಡಿ.  ಕುಮಾರಸ್ವಾಮಿ ಯೋಜನೆ ಹಾಕಿಕೊಂಡಿದ್ದರು. ರಾಮನಗರದಲ್ಲಿರುವ ವಿಶಾಲ ಪ್ರದೇಶದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಇನ್ನು, ಕೊರೋನಾ ಕಾರಣ ಹನಿಮೂನ್​ಗೂ ಎಲ್ಲಿಗೂ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಇಬ್ಬರೂ ಫಾರ್ಮ್​ ಹೌಸ್​ನಲ್ಲೇ ಕಾಲ ಕಳೆಯುತ್ತಿದ್ದಾರೆ. ವಿಶೇಷ ಎಂದರೆ, ಈಗ ಫಾರ್ಮ್​​ ಹೌಸ್​ನಲ್ಲೇ ಒಂದು ಮನೆ ನಿರ್ಮಾಣ ಮಾಡಲು ನಿಖಿಲ್​ ನಿರ್ಧರಿಸಿದ್ದು, ಇದಕ್ಕಾಗಿ ಭೂಮಿ ಕೂಜ ನೆರವೇರಿಸಿದ್ದಾರೆ.

ಗೌರಿ ಗಣೇಶ ಹಬ್ಬದಂದು ನಿಖಿಲ್​ ಹಾಗೂ ರೇವತಿ ಹೊಸ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಇದು ನಿಖಿಲ್​ ಅವರ ಕನಸಿನ ಮನೆ ಆಗಿದ್ದು, ತುಂಬಾನೇ ಸುಂದರವಾಗಿ ನಿರ್ಮಾಣ ಮಾಡಲು ಚಿಂತಿಸಿದ್ದಾರೆ.  ವಿಶೇಷ ಎಂದರೆ ರೇವತಿಗೆ ಆರ್ಕಿಟೆಕ್ಟ್​ ಗೊತ್ತಿದೆ. ಹೀಗಾಗಿ, ಮನೆ ಹೇಗೆ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆ ಅವರೇ ನಕ್ಷೆ ಸಿದ್ಧಪಡಿಸಿದ್ದಾರಂತೆ.

ಇದನ್ನೂ ಓದಿ: ಈಡೇರಿದ ಅಭಿಮಾನಿಗಳ ಪ್ರಾರ್ಥನೆ; ಎಸ್​ಪಿ ಬಾಲಸುಬ್ರಹ್ಮಣ್ಯಂಗೆ ಕೊರೋನಾ ನೆಗೆಟಿವ್

ಲೋಕಸಭೆ ಚುನಾವಣೆ ಸೋಲಿನ ನಂತರ ನಿಖಿಲ್​ ಫಾರ್ಮ್​ ಹೌಸ್​ನಲ್ಲೇ ಉಳಿದುಕೊಳ್ಳಲು ಆರಂಭಿಸಿದ್ದರು. ಅಲ್ಲಿಯೇ ಕಾರ್ಯಕರ್ತರನ್ನು ಕರೆಸಿ ಮಾತುಕತೆ ನಡೆಸಿದ್ದರು. ಹೀಗಾಗಿ ಮೊದಲಿನಿಂದಲೂ ಅವರು ಫಾರ್ಮ್​ಹೌಸ್​ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಹೀಗಾಗಿ ಅಲ್ಲಿ ಹೊಸ ಮನೆ ನಿರ್ಮಾಣ ಮಾಡಬೇಕು ಎಂಬುದು ಅವರ ಆಸೆ.

ರಾಜಕೀಯಕ್ಕೆ ಕಾಲಿಡಲು ಚಿಂತನಡೆ ನಡೆಸಿದ್ದ ನಿಖಿಲ್​ಗೆ ಆರಂಭದಲ್ಲೇ ಸೋಲುಂಟಾಗಿತ್ತು. ಇದಾದ ನಂತರ ನಿಖಿಲ್​ ಎಲ್ಲಿಯೂ ಚುನಾವಣೆಗೆ ಇಳಿದಿಲ್ಲ. ಆದರೆ, ಪಕ್ಷ ಸಂಘಟನೆಯಲ್ಲಿ ಅವರು ಸಕ್ರಿಯರಾಗಿದ್ದಾರೆ. ಇನ್ನು, ನಾಲ್ಕು ಚಿತ್ರಗಳು ಅವರ ಕೈಯಲ್ಲಿವೆ. ಕೊರೋನಾದಿಂದಾಗಿ ಸಿನಿಮಾ ಶೂಟಿಂಗ್​ ವಿಳಂಬವಾಗುತ್ತಿದೆ.
Published by: Rajesh Duggumane
First published: August 24, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories