ಬಿಡುಗಡೆ ಆಯ್ತು 'ನಿಖಿಲ್ ಎಲ್ಲಿದ್ದೀಯಪ್ಪಾ' ಫಸ್ಟ್​ಲುಕ್ ಫೋಸ್ಟರ್: ಹೀರೋ ಯಾರು?

'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರಾದ ರಾಮಮೂರ್ತಿ ನಿರ್ಮಿಸಲಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

zahir | news18
Updated:May 18, 2019, 7:16 AM IST
ಬಿಡುಗಡೆ ಆಯ್ತು 'ನಿಖಿಲ್ ಎಲ್ಲಿದ್ದೀಯಪ್ಪಾ' ಫಸ್ಟ್​ಲುಕ್ ಫೋಸ್ಟರ್: ಹೀರೋ ಯಾರು?
ನಿಖಿಲ್​ ಎಲ್ಲಿದ್ದೀಯಪ್ಪಾ
zahir | news18
Updated: May 18, 2019, 7:16 AM IST
ಸ್ಯಾಂಡಲ್​ವುಡ್​ನಲ್ಲಿ ಚುನಾವಣಾ ಡೈಲಾಗ್​ಗಳು ಟೈಟಲ್​ಗಳಾಗಿ ರಿಜಿಸ್ಟರ್ ಆಗುತ್ತಿವೆ. ಇದರ ಬೆನ್ನಲ್ಲೇ ಚಿತ್ರತಂಡವೊಂದು ಒಂದೆಜ್ಜೆ ಮುಂದೆ ಹೋಗಿ 'ನಿಖಿಲ್ ಎಲ್ಲಿದ್ದೀಯಪ್ಪಾ' ಚಿತ್ರದ ಫಸ್ಟ್​ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಇಂಡಿಯಾ ಗೇಟ್‌ ಮುಂಭಾಗದಲ್ಲಿ ವ್ಯಕ್ತಿಯೋರ್ವ ನಡೆದು ಬರುತ್ತಿರುವ ಚಿತ್ರವನ್ನು ಹೊಂದಿರುವ ಪೋಸ್ಟರ್​​ನ ಮೇಲ್ಭಾಗದಲ್ಲಿ ಸಂಸತ್‌ ಭವನದ ಫೋಟೋವನ್ನು ಅಳವಡಿಸಿ ರಾಜಕೀಯ ಟಚ್​ ನೀಡಿದೆ.

'ನಿಖಿಲ್ ಎಲ್ಲಿದ್ದೀಯಪ್ಪಾ'  ಫಸ್ಟ್​ಲುಕ್  ಬಿಡುಗಡೆಯಾದ ಬೆನ್ನಲ್ಲೇ ಭಾರೀ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಯಾರಗಲಿದ್ದಾರೆ ನಾಯಕ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಕೃಷ್ಣೇಗೌಡ ಎಂಬವರು ವಹಿಸಿಕೊಂಡಿದ್ದು, ಇನ್ನು ಅಶೋಕ್‌ ಕೆ.ಕಡಬ ಎಂಬ ನಿರ್ದೇಶಕರು 'ನಿಖಿಲ್ ಎಲ್ಲಿದ್ದೀಯಪ್ಪಾ'ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಎ.ಟಿ.ರವೀಶ್‌ ಅವರ ಸಂಗೀತವು ಚಿತ್ರದಲ್ಲಿರಲಿದ್ದು, ಸಿ.ಡಿ.ರಾಜು ಅವರು ಛಾಯಾಗ್ರಹಣ ಮಾಡಲಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಭಾರೀ ಸದ್ದು ಮಾಡಿದ 'ಜೋಡೆತ್ತು' ಡೈಲಾಗ್ ಈಗಾಗಲೇ ಫಿಲ್ಮ್ ಚೇಂಬರ್​ನಲ್ಲಿ ನೋಂದಣಿ ಮಾಡಲಾಗಿದೆ. 'ಮೆಜೆಸ್ಟಿಕ್' ಚಿತ್ರದ ನಿರ್ಮಾಪಕರಾದ ರಾಮಮೂರ್ತಿ ನಿರ್ಮಿಸಲಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಇನ್ನು ಚುನಾವಣೆ ವೇಳೆಯೇ ಟ್ರೋಲ್​ ಮೂಲಕ ಕೇಳಿ ಬಂದ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂಬ ಸಂಭಾಷಣೆ  ಭಾರೀ ವೈರಲ್ ಆಗಿತ್ತು. ಅಲ್ಲದೆ ಈ ಡೈಲಾಗ್​ನ್ನು ಶೀರ್ಷಿಕೆ ಮಾಡಲು ಹಲವು ನಿರ್ಮಾಪಕರು ಕಸರತ್ತು ನಡೆಸಿದ್ದರು.

ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ನಾಯಕನಾಗಿಸಿ 'ನಿಖಿಲ್ ಎಲ್ಲದ್ದೀಯಪ್ಪಾ' ಚಿತ್ರ ನಿರ್ಮಿಸುವುದಾಗಿ ತಿಳಿಸಿದ ಜೆಡಿಎಸ್​ ಮುಖಂಡ ಸಿಎಸ್​ ಪುಟ್ಟರಾಜು ಸಂಚಲನ ಸೃಷ್ಟಿಸಿದ್ದರು. ಇದಕ್ಕೆ ನಟ ನಿಖಿಲ್ ಸಹ ಒಪ್ಪಿಗೆ ಸೂಚಿಸಿದ್ದರು.

ಆದರೆ ಇದೀಗ 'ನಿಖಿಲ್ ಎಲ್ಲದ್ದೀಯಪ್ಪಾ' ಎಂಬ ಪೋಸ್ಟರ್ ನಿರ್ಮಾಪಕ ಕೃಷ್ಣೇಗೌಡರ ಹೆಸರಿನಲ್ಲಿ ಮೂಡಿ ಬಂದಿದ್ದು, ಹೀರೋ ಯಾರಾಗಲಿದ್ದಾರೆಂಬ ಕುತೂಹಲ ಮಾತ್ರ ಉಳಿದಿದೆ. ಇನ್ನು ಎ.ಗಣೇಶ್‌ ಎಂಬವರು ಸಹ 'ಎಲ್ಲಿದ್ದೀಯಪ್ಪಾ' ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿಕೊಂಡಿದ್ದಾರಂತೆ.

'ನಿಖಿಲ್ ಎಲ್ಲಿದ್ದೀಯಪ್ಪಾ' ಚಿತ್ರದ ಪೋಸ್ಟರ್​ ಗಮನಿಸಿದಾಗ ಇದೊಂದು ರಾಜಕೀಯ ಡ್ರಾಮಾ ಕಥೆಯನ್ನು ಒಳಗೊಂಡಿರುವ ಚಿತ್ರವಾಗಿರಲಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ಚಿತ್ರಕಥೆಯ ಕೆಲಸವನ್ನು ಸಿನಿಮಾ ತಂಡ ಆರಂಭಿಸಿದ್ದು, ಶೀಘ್ರದಲ್ಲೇ ಹಳ್ಳಿಯಿಂದ ದಿಲ್ಲಿಗೆ ಹೋಗುವ ನಾಯಕ ಯಾರೆಂಬುದನ್ನು ತಿಳಿಸಲಿದೆ.

ಇದನ್ನೂ ಓದಿ: ಈ ಬಾರಿ ವಿಶ್ವಕಪ್​ನಲ್ಲಿ ಸಿಡಿಯಲಿದೆ 500 ರನ್?

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ