ಮೆಗಾ ಕುಟುಂಬದ ಕುಡಿ ನಿಹಾರಿಕಾ ಕೋನಿದೇಲ ಅವರ ನಿಶ್ಚಿತಾರ್ಥ ಲಾಕ್ಡೌನ್ನಲ್ಲೇ ಆಗಿದ್ದು ಗೊತ್ತೇ ಇದೆ. ಕೊರೋನಾ ಕಾರಣದಿಂದಾಗಿ ಕೇವಲ ಕುಟುಂಬದ ಮಟ್ಟಿಗೆಯಾದರೂ ಅದ್ಧೂರಿಯಾಗಿ ನಿಹಾರಿಕಾ ನಿಶ್ಚಿತಾರ್ಥ ಮಾಡಲಾಗಿತ್ತು. ಚೈತನ್ಯ ಜೊನ್ನಲಗಡ್ಡ ಜೊತೆ ನಿಹಾರಿಕಾ ಈಗ ಸಪ್ತಪದಿ ತುಳಿಯೋಕೆ ಸಿದ್ಧರಾಗಿದ್ದಾರೆ. ಇವರ ಮದುವೆಗೆ ಈಗ ದಿನಗಣನೆ ಆರಂಭವಾಗಿದೆ. ಈ ಜೋಡಿಯ ವಿವಾಹಕ್ಕೆ ಈಗ ದಿನಾಂಕ ನಿಗದಿಯಾಗಿದೆ. ನಿಹಾರಿಕಾ ಹಾಗೂ ಚೈತನ್ಯ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅವರ ಈ ಮದುವೆಗೆ ಈಗಾಗಲೇ ಮನೆಯಲ್ಲಿ ಸಿದ್ಧತಾಕಾರ್ಯ ಆರಂಭವಾಗಿದೆ. ನಿಹಾರಿಕಾ ಹಾಗೂ ಚೈತನ್ಯ ಅವರ ಮದುವೆ ಮುಂದಿನ ತಿಂಗಳು ಅಂದರೆ ಡಿಸೆಂಬರ್ 9ಕ್ಕೆ ನಡೆಸಲು ಗುರು ಹಿರಿಯರು ನಿರ್ಧರಿಸಿದ್ದಾರಂತೆ. ಅಂತೆಯೇ ವಿವಾಹವನ್ನು ಹುಡುಗ ಹಾಗೂ ಹುಡುಗಿಯ ಆಸೆಯಂತೆ ಪ್ಯಾಲೆಸ್ನಲ್ಲಿ ಮಾಡಲು ಮನೆಯವರು ಒಪ್ಪಿದ್ದಾರಂತೆ.
ಟಾಲಿವುಡ್ನಲ್ಲಿ ಈಗ ಸಾಲು ಸಾಲು ಮದುವೆಗಳು ನಡೆಯುತ್ತಿವೆ. ಲಾಕ್ಡೌನ್ನಲ್ಲೇ ನಟ ನಿತಿನ್ ಬಹುಕಾಲ ದ ಗೆಳತಿ ಜೊತೆ ನವ ದಾಂಪತ್ಯಕ್ಕೆ ಕಾಲಿಟ್ಟರು. ಅದರ ಬೆನ್ನಲ್ಲೇ ರಾಣಾ ದಗ್ಗು ಬಾಟಿ ಹಾಗೂ ಮಿಹಿಕಾ ಬಜಾಜ್ ಸಹ ವಿವಾಹವಾದರು. ಈಗ ನಿಹಾರಿಕಾ ಹಾಗೂ ಚೈತನ್ಯ ಅವರ ಸರದಿ.
ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಅವರ ವಿವಾಹವನ್ನು ರಾಜಸ್ತಾನದ ಉದಯಪುರದ ಪ್ಯಾಲೆಸ್ನಲ್ಲಿ ಮಾಡಲು ನಿರ್ಧರಿಸಲಾಗಿದೆಯಂತೆ. ಅದ್ಧೂರಿಯಾಗಿ ಮೆಗಾ ಬ್ರದರ್ ನಾಗಬಾಬು ಅವರ ಮಗಳ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಡಿ. 9ರಂದು ರಾತ್ರಿ 7 ಗಂಟೆ 15 ನಿಮಿಷಕ್ಕೆ ನಿಹಾರಿಕಾ ಹಾಗೂ ಚೈತನ್ಯ ಅವರ ಮದುವೆ ನಡೆಯಲಿದೆ. ಇನ್ನು ಚೈತನ್ಯ ಹಾಗೂ ನಿಹಾರಿಕಾ ಈ ಸಲ ದೀಪಾವಳಿ ಹಬ್ಬವನ್ನು ಒಟ್ಟಿಗೆ ಆಚರಿಸಿಕೊಂಡಿದ್ದಾರೆ.
ನಿಹಾರಿಕಾ ಕೋನಿದೇಲ ಈಗಾಗಲೇ ಟಾಲಿವುಡ್ಗೆ ಕಾಲಿಟ್ಟಿದ್ದು, ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ವೀರ ವನಿತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಅನ್ನೋ ಸುದ್ದಿ ಈ ಹಿಂದೆ ಟಾಲಿವುಡ್ ಅಂಗಳದಲ್ಲಿ ಕೇಳಿ ಬಂದಿತ್ತು. ವಿವಾಹವಾದ ನಂತರ ಈ ನಟಿ ತಮ್ಮ ಬಣ್ಣದ ಬದುಕಿಗೆ ಗುಡ್ ಬೈ ಹೇಳುತ್ತಾರಾ ಅಥವಾ ಸಿನಿಮಾಗಳಲ್ಲಿ ನಟಿಸುತ್ತಾರಾ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಇದನ್ನು ಓದಿ: ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ವಿಡಿಯೋ ನೋಡಿ ಕಣ್ಣೀರಿಟ್ಟ ಪೂರಿ ಜಗನ್ನಾಥ್..!
ಇನ್ನು ನಿಹಾರಿಕಾ ಅವರ ನಿಶ್ಚಿತಾರ್ಥಕ್ಕೆ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಗೈರಾಗಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೇ ಪವನ್ ಕಲ್ಯಾಣ್ ನಟ ನಿತಿನ್ ಅವರ ನಿಶ್ಚಿತಾರ್ಥ ಹಾಗೂ ಮದುವೆಗೆ ಹಾಜರಾಗಿದ್ದರು. ಇದರಿಂದ ನೆಟ್ಟಿಗರು ಮೆಗಾ ಬ್ರದರ್ಸ್ ನಡುವೆ ಏನೋ ಮನಸ್ತಾಪವಾಗಿರಬೇಕೆಂದು ಮಾತನಾಡಿಕೊಳ್ಳಲಾರಂಭಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ