Niharika Konidela Wedding: ಮೆಗಾ ಕುಟುಂಬದ ಮಗಳು ನಿಹಾರಿಕಾ -ಚೈತನ್ಯ ಮದುವೆಗೆ ದಿನ ಗಣನೆ ಆರಂಭ: ಇಲ್ಲಿದೆ ಲಗ್ನಪತ್ರಿಕೆಯ ಪ್ರತಿ..!

ಡಿ.9ರಂದು ಮದುವೆ ಉದಯಪುರದಲ್ಲಿ ನಡೆದ ನಂತರ, ಡಿ11ಕ್ಕೆ ಹೈದರಾಬಾದಿನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಮದುಮಗಳು ನಿಹಾರಿಕಾ ಅವರ ಅಣ್ಣ ವರುಣ್​ ತೇಜ್​ ವಹಿಸಿಕೊಂಡಿದ್ದಾರಂತೆ. ಹೈದರಾಬಾದಿನ ಜೆಆರ್​ಸಿ ಹಾಲ್​ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ನಿಹಾರಿಕಾ-ಚೈತನ್ಯ ವಿವಾಹ

ನಿಹಾರಿಕಾ-ಚೈತನ್ಯ ವಿವಾಹ

  • Share this:
ಮೆಗಾಸ್ಟಾರ್​ ಕುಟುಂಬದ ಕುಡಿ ನಿಹಾರಿಕಾ ಕೋನಿದೇಲ ಅವರ ವಿವಾಹಕ್ಕೆ ದಿನ ಗಣನೆ ಆರಂಭವಾಗಿದೆ. ಇನ್ನೇನು 7 ದಿನಗಳಲ್ಲಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿಹಾರಿಕಾ ಹಾಗೂ ಚೈತನ್ಯ ಜೊನ್ನಲಗಡ್ಡ ಪ್ರೀತಿಸಿ, ಹಿರಿಯ ಆರ್ಶೀವಾದ ಪಡೆದು ವಿವಾಹವಾಗುತ್ತಿದ್ದಾರೆ. ಲಾಕ್​ಡೌನ್​ನಲ್ಲೇ ಈ ಜೋಡಿಯ ನಿಶ್ವಿತಾರ್ಥ ಮಾಡಲಾಗಿತ್ತು. ಕೊರೋನಾ ಲಾಕ್​ಡೌನ್​ನಿಂದಾಗಿ ಕೇಲವ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಿ, ಸರಳವಾಗಿ ಈ ಜೋಡಿಯ ನಿಶ್ಚಿತಾರ್ಥ ಮಾಡಲಾಗಿತ್ತು. ಇವರ ನಿಶ್ಚಿತಾರ್ಥದ ಚಿತ್ರಗಳು ಎಲ್ಲೆಡೆ ವೈರಲ್ ಆಗಿದ್ದವು. ಇನ್ನು, ನಿಹಾರಿಕಾ ಹಾಗೂ ಚೈತನ್ಯ ಕೋನಿದೇಲ ಡೆಸ್ಟಿನೇಷನ್​ ವೆಡ್ಡಿಂಗ್ ಮಾಡಿಕೊಳ್ಳಲು ಪ್ಲಾನ್​ ಮಾಡಿಕೊಂಡಿದ್ದಾರೆ. ಇವರ ಮದುವೆ ಇದೇ ತಿಂಗಳು 9ರಂದು ರಾಜಸ್ತಾನದ ಉದಯಪುರದಲ್ಲಿ ಇವರ ಮದುವೆ ನಡೆಯಲಿದೆ. ರಾತ್ರಿ 7 ಗಂಟೆ 15 ನಿಮಿಷಕ್ಕೆ ನಿಹಾರಿಕಾ ಅವರ ಮದುವೆ ಮುಹೂರ್ತನಿಗದಿಯಾಗಿದೆ. ಅದಕ್ಕಾಗಿ ಈಗಾಗಲೇ ಉದಯಪುರದಲ್ಲಿ ಪ್ಯಾಲೆಸ್​ ಸಹ ಬುಕ್​ ಮಾಡಲಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೆ ನಿಹಾರಿಕಾ ಮದುವೆಯಾಗಲಿರುವ ಪ್ಯಾಲೆಸ್​ಗೆ ಭೇಟಿ ನೀಡಿದ್ದರು. 

ಡಿ.9ರಂದು ಮದುವೆ ಉದಯಪುರದಲ್ಲಿ ನಡೆದ ನಂತರ, ಡಿ11ಕ್ಕೆ ಹೈದರಾಬಾದಿನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಮದುಮಗಳು ನಿಹಾರಿಕಾ ಅವರ ಅಣ್ಣ ವರುಣ್​ ತೇಜ್​ ವಹಿಸಿಕೊಂಡಿದ್ದಾರಂತೆ. ಹೈದರಾಬಾದಿನ ಜೆಆರ್​ಸಿ ಹಾಲ್​ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.











ಇನ್ನು ನಿಹಾರಿಕಾ ಕೆಲವೇ ನಿಮಿಷಗಳ ಹಿಂದೆಯಷ್ಟೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಮದುವೆ ಕೌಂಟ್​ಡೌನ್​ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. ವಿವಾಹಕ್ಕೆ 7 ದಿನಗಳು ಬಾಕಿ ಇವೆ ಎಂದು ಚೈತನ್ಯ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.




niharika konidela and chaitanya jonnalagadda marriage count down started and here is the wedding card
ನಿಹಾರಿಕಾ-ಚೈತನ್ಯ ವಿವಾಹದ ಲಗ್ನಪತ್ರಿಕೆ


ಒಂದು ತಿಂಗಳ ಹಿಂದಿನಿಂದಲೇ ನಾಗಬಾಬು ಅವರ ಮನೆಯಲ್ಲಿ ಮದುವೆಗೆ ಸಂಬಂಧಿಸಿದ ಕೆಲಸಗಳು ಆಂರಭವಾಗಿವೆ. ಜೊತೆಗೆ ಅರಿಶಿಣ ಶಾಸ್ತ್ರಕ್ಕೆ ಬೇಕಾದ ಎಲ್ಲ ತಯಾರಿ ಸಹ ನಡೆದಿದೆ. ಇನ್ನು ನಿಹಾರಿಕಾ ಹಾಗೂ ಚೈತನ್ಯ ಅವರ ಮದುವೆಯ ಲಗ್ನಪತ್ರಿಕೆ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗಾಗಲೇ ಸೆಲೆಬ್ರಿಟಿಗಳು ಹಾಗೂ ಆಪ್ತರಿಗೆ ವಿವಾಹಕ್ಕೆ ಆಹ್ವಾನ ನೀಡಲಾಗುತ್ತಿದೆ.
Published by:Anitha E
First published: