HOME » NEWS » Entertainment » NIDHI PARMAR HIRANANDANI SAAND KI AANKH PRODUCER DONATES 40 LITERS OF BREAST MILK TO OTHER BABIES DURING LOCKDOWN RMD

ಲಾಕ್​ಡೌನ್​​ನಲ್ಲಿ 40 ಲೀಟರ್​ ಎದೆ ಹಾಲು ದಾನ ಮಾಡಿದ ಬಾಲಿವು​ಡ್​ ನಿರ್ಮಾಪಕಿ ನಿಧಿ ಪರ್ಮಾರ್ ಹಿರಾನಂದಾನಿ

ಫೆಬ್ರವರಿ ತಿಂಗಳಲ್ಲಿ ನಿಧಿಗೆ ಮಗುವಾಗಿತ್ತು. ಈ ವೇಳೆ ಮಗುವಿಗ ಹಾಲುಣಿಸಿದ ನಂತರ ಸಾಕಷ್ಟು ಹಾಲು ಹೆಚ್ಚು ಉಳಿದಿತ್ತಂತೆ. ಅದನ್ನು ದಾನ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

news18-kannada
Updated:November 19, 2020, 1:14 PM IST
ಲಾಕ್​ಡೌನ್​​ನಲ್ಲಿ 40 ಲೀಟರ್​ ಎದೆ ಹಾಲು ದಾನ ಮಾಡಿದ ಬಾಲಿವು​ಡ್​ ನಿರ್ಮಾಪಕಿ ನಿಧಿ ಪರ್ಮಾರ್ ಹಿರಾನಂದಾನಿ
Nidhi Parmar Hiranandani
  • Share this:
ಲಾಕ್​ಡೌನ್​​ ಅವಧಿಯಲ್ಲಿ ಅನೇಕ ಬಾಲಿವುಡ್​ ನಟ-ನಟಿಯರು ತಮಗೆ ಆದಂತಹ ಸಹಾಯ ಮಾಡಿದ್ದಾರೆ. ಕೆಲವರು ಬಡವರಿಗೆ ಹಣ ನೀಡಿದರೆ, ಇನ್ನೂ ಕೆಲವರು ಊಟ ನೀಡಿದ್ದಾರೆ. ಆದರೆ, ನಿರ್ಮಾಪಕಿ ನಿಧಿ ಪರ್ಮಾರ್ ಹಿರಾನಂದಾನಿ ಮಾಡಿದ ಸಹಾಯ ಮಾತ್ರ ತುಂಬಾನೇ ಭಿನ್ನವಾಗಿದೆ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇವರು ಬರೋಬ್ಬರಿ 40 ಲೀಟರ್​ ಎದೆಹಾಲನ್ನು ಮಕ್ಕಳಿಗಾಗಿ ದಾನ ಮಾಡಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ನಿಧಿಗೆ ಮಗುವಾಗಿತ್ತು. ಈ ವೇಳೆ ಮಗುವಿಗ ಹಾಲುಣಿಸಿದ ನಂತರ ಸಾಕಷ್ಟು ಹಾಲು ಹೆಚ್ಚು ಉಳಿದಿತ್ತಂತೆ. ಅದನ್ನು ದಾನ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಮಗುವಿಗೆ ನಿತ್ಯ ಎದೆ ಹಾಲು ಉಣಿಸಿದ ನಂತರವೂ ಹೆಚ್ಚು ಹಾಲು ಉಳಿಯುತ್ತಿತ್ತು. ಸರಿಯಾಗಿ ಶೇಖರಣೆ ಮಾಡಿದರೆ ನಾಲ್ಕೈದು ತಿಂಗಳ ಎದೆ ಹಾಲನ್ನು ಶೇಖರಿಸಿಡಬಹುದು ಎನ್ನುವ ಮಾಹಿತಿ ಕೂಡ ನನಗೆ ಸಿಕ್ಕಿತ್ತು. ಹೀಗಾಗಿ, ನಾನು ಎದೆಹಾಲು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದೆ ಎಂದಿದ್ದಾರೆ.

ಈ ವೇಳೆ ಅವರ ಆಪ್ತರೊಬ್ಬರು ಆಸ್ಪತ್ರೆಯೊಂದರ ಹೆಸರನ್ನು ನೀಡಿದ್ದರಂತೆ. ಹೀಗಾಗಿ ಫ್ರಿಜ್​​ನಲ್ಲಿ ಶೇಖರಿಸಿಟ್ಟ ಎದೆ ಹಾಲನ್ನು ಅವರು ಆಸ್ಪತ್ರೆಗೆ ನೀಡಿದ್ದಾರೆ. ಈ ಆಸ್ಪತ್ರೆಯವರು ಅಗತ್ಯವಿರುವ ಮಕ್ಕಳಿಗೆ ನೀಡುವ ಭರವಸೆಯನ್ನು ನೀಡಿದ್ದಾರಂತೆ.
ಲಾಕ್​ಡೌನ್​ ಅವಧಿಯಲ್ಲಿ ಅವರು ಒಟ್ಟೂ 40 ಲೀಟರ್​ ಹಾಲನ್ನು ಆಸ್ಪತ್ರೆಗೆ ನೀಡಿದ್ದಾರಂತೆ. ಅಲ್ಲದೆ, ಸಾಕಷ್ಟು ಮಕ್ಕಳಿಗೆ ಸಹಾಯ ಮಾಡಿದೆ ಎನ್ನುವ ಸಾರ್ಥಕ ಭಾವನೆ ಅವರದ್ದು.
Published by: Rajesh Duggumane
First published: November 19, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories