ವಿವಾಹ ವಾರ್ಷಿಕೋತ್ಸವಕ್ಕೆ ಹೆಂಡತಿ ಪ್ರಿಯಾಂಕಾಗೆ ಸರ್​ಪ್ರೈಸ್​ ನೀಡಲು ತಲೆ ಕೆಡೆಸಿಕೊಂಡಿದ್ದರಂತೆ ನಿಕ್​

ಡಿಸೆಂಬರ್​ 1ರಂದು ರಾಜಸ್ಥಾನದ ಜೈಪುರದ ಅರಮನೆಯಲ್ಲಿ ಪ್ರಿಯಾಂಕ ಹಿಂದು ಸಂಪ್ರದಾಯದಂತೆ ನಿಕ್​ ಜೊತೆ ಸಪ್ತಪದಿ ತುಳಿದಿದ್ದರು. ಇದಾದ ಬಳಿಕ ಅಮೆರಿಕದಲ್ಲಿ ಕ್ರಿಶ್ಚಿಯನ್​ ಸಂಪ್ರದಾಯದಂತೆ ಉಂಗುರ ಬದಲಾಯಿಸಿಕೊಂಡಿದ್ದರು.

Seema.R | news18-kannada
Updated:November 8, 2019, 5:43 PM IST
ವಿವಾಹ ವಾರ್ಷಿಕೋತ್ಸವಕ್ಕೆ ಹೆಂಡತಿ ಪ್ರಿಯಾಂಕಾಗೆ ಸರ್​ಪ್ರೈಸ್​ ನೀಡಲು ತಲೆ ಕೆಡೆಸಿಕೊಂಡಿದ್ದರಂತೆ ನಿಕ್​
ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ
Seema.R | news18-kannada
Updated: November 8, 2019, 5:43 PM IST
ಬಾಲಿವುಡ್​ ಸುಂದರಿ, ಹಾಲಿವುಡ್​ ಸೊಸೆಯಾಗಿರುವ ನಟಿ ಪ್ರಿಯಾಂಕಾ ನಿಕ್​ ಕೈ ಹಿಡಿದು ಒಂದು ವರ್ಷ ಕಳೆಯುತ್ತ ಬಂದಿದೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ನಿಕ್​ ನೀಡುವ ಸರ್​ಪ್ರೈಸ್​ಗೆ ಪ್ರಿಯಾಂಕ ಕಾದುಕುಳಿತಿದ್ದು, ಹೇಗೆ ತಮ್ಮ ಈ ಕ್ಷಣ ಆಚರಿಸುವುದು ಎಂಬ ಗೊಂದಲದಲ್ಲಿ ಪಾಪ್​ ಸಿಂಗರ್​ ನಿಕ್​ ಇದ್ದರಂತೆ.

ಡಿಸೆಂಬರ್​ 1ರಂದು ರಾಜಸ್ಥಾನದ ಜೈಪುರದ ಅರಮನೆಯಲ್ಲಿ ಪ್ರಿಯಾಂಕ ಹಿಂದು ಸಂಪ್ರದಾಯದಂತೆ ನಿಕ್​ ಜೊತೆ ಸಪ್ತಪದಿ ತುಳಿದಿದ್ದರು. ಇದಾದ ಬಳಿಕ ಅಮೆರಿಕದಲ್ಲಿ ಕ್ರಿಶ್ಚಿಯನ್​ ಸಂಪ್ರದಾಯದಂತೆ ಉಂಗುರ ಬದಲಾಯಿಸಿಕೊಂಡಿದ್ದರು.
 
Loading...View this post on Instagram
 
Where to next baby? #travelbug or #lovebug 💋😍🐞

A post shared by Priyanka Chopra Jonas (@priyankachopra) on

ಸದ್ಯದಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಬರುತ್ತಿದ್ದು, ಈ ಕುರಿತು ನಿಕ್​ ಮಾತನಾಡಿದ್ದಾರೆ. ನಾನು ಕೊಡುವ ಸರ್​ಪ್ರೈಸ್​ಗಾಗಿ ಪ್ರಿಯಾಂಕ ಕಾದು ಕುಳಿತಿದ್ದಾರೆ. ಅವಳಿಗೆ ಅಚ್ಚರಿ ಮೂಡಿಸಲು ನಾನು ಕೂಡ ಕಾತುರನಾಗಿದ್ದೇನೆ. ಯಾವ ರೀತಿ, ಏನು ಉಡುಗೊರೆ ನೀಡುತ್ತೇನೆ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. 
First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...