• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Priyanka Chopra: ಪ್ರಿಯಾಂಕಾಗೆ ನಿಕ್ ಜೋನಸ್ ಕೊಟ್ಟಿರುವ ಗಿಫ್ಟ್ ಏನು ಗೊತ್ತಾ? ತಿಳಿದ್ರೆ ನಿಮಗೂ ಖುಷಿ ಆಗುತ್ತೆ

Priyanka Chopra: ಪ್ರಿಯಾಂಕಾಗೆ ನಿಕ್ ಜೋನಸ್ ಕೊಟ್ಟಿರುವ ಗಿಫ್ಟ್ ಏನು ಗೊತ್ತಾ? ತಿಳಿದ್ರೆ ನಿಮಗೂ ಖುಷಿ ಆಗುತ್ತೆ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್

ಕಳೆದ ವಾರವಷ್ಟೆ 'ಅಮ್ಮಂದಿರ ದಿನ' ವನ್ನು ವಿಶ್ವದಾದ್ಯಂತ ಆಚರಿಸಿದ್ದನ್ನು ಮತ್ತು ಅನೇಕ ಅಮ್ಮಂದಿರಿಗೆ ತಮ್ಮ ಮಕ್ಕಳು ವಿಶಿಷ್ಟವಾದ ಉಡುಗೊರೆಗಳನ್ನು ನೀಡಿರುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಮಡದಿಗೆ 'ಅಮ್ಮಂದಿರ ದಿನ' ದಂದು ಒಂದು ಉಡುಗೊರೆಯನ್ನು ನೀಡಿದ್ದಾನೆ ಎಂದು ತಾನೇ ಖುದ್ದಾಗಿ ಹೇಳಿಕೊಂಡಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ಕಳೆದ ವಾರವಷ್ಟೆ 'ಅಮ್ಮಂದಿರ ದಿನ' (Mother's Day) ವನ್ನು ವಿಶ್ವದಾದ್ಯಂತ ಆಚರಿಸಿದ್ದನ್ನು ಮತ್ತು ಅನೇಕ ಅಮ್ಮಂದಿರಿಗೆ ತಮ್ಮ ಮಕ್ಕಳು (Children) ವಿಶಿಷ್ಟವಾದ ಉಡುಗೊರೆಗಳನ್ನು (Gift) ನೀಡಿರುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಮಡದಿಗೆ 'ಅಮ್ಮಂದಿರ ದಿನ' ದಂದು ಒಂದು ಉಡುಗೊರೆಯನ್ನು ನೀಡಿದ್ದಾರೆ ಎಂದು ತಾನೇ ಖುದ್ದಾಗಿ ಹೇಳಿಕೊಂಡಿದ್ದಾರೆ ನೋಡಿ. ಇಲ್ಲಿ ನಾವು ಮಾತಾಡುತ್ತಿರುವುದು ಯಾರ ಬಗ್ಗೆ ಎಂದು ನಿಮಗೆ ಅರ್ಥವಾಗದೆ ಇರಬಹುದು. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಪತಿ ನಿಕ್ ಜೋನಸ್ (Nick Jonas) ತಮ್ಮ ಮುಂಬರುವ ಕಾರ್ಯಕ್ರಮವಾದ ‘ಡ್ಯಾನ್ಸಿಂಗ್ ವಿತ್ ಮೈ ಸೆಲ್ಫ್’ ಅನ್ನು ಪ್ರಚಾರ ಮಾಡಲು ಜಿಮ್ಮಿ ಫಾಲನ್ ಅವರ ‘ಟುನೈಟ್ ಶೋ’ ಗೆ ಭೇಟಿ ನೀಡಿದರು.


ಪ್ರಿಯಾಂಕಾ ಚೋಪ್ರಾ ಅವರಿಗೆ ನಿಕ್ ಕೊಟ್ಟ ಗಿಫ್ಟ್
ಅಲ್ಲಿ ನಿಕ್ ಅವರು ತಮ್ಮ ಪತ್ನಿ ಪ್ರಿಯಾಂಕಾ ಚೋಪ್ರಾ ಅವರಿಗಾಗಿ ಒಂದು ಗಿಡವನ್ನು ಅಮ್ಮಂದಿರ ದಿನದಂದು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದರು. ನಿಕ್ ಮತ್ತು ಅವರ ಪತ್ನಿ ಪ್ರಿಯಾಂಕಾ ಚೋಪ್ರಾ ಅವರಿಗೆ ಇತ್ತೀಚೆಗೆ ಹೆಣ್ಣು ಮಗುವೊಂದು ಜನಿಸಿತು. ಆ ಮಗು ಅಕಾಲಿಕವಾಗಿ ಜನ್ಮತಾಳಿದ್ದರಿಂದ ಅದು ಎನ್ಐಸಿಯುನಲ್ಲಿ ಸುಮಾರು 100ಕ್ಕೂ ಹೆಚ್ಚು ದಿನಗಳ ಕಾಲ ಉಳಿಯಬೇಕಾಯಿತು. ಈ ತಿಂಗಳ ಆರಂಭದಲ್ಲಿ ತಾಯಂದಿರ ದಿನದಂದು ಆ ಮಗುವನ್ನು ತಮ್ಮ ಮನೆಗೆ ಕರೆತಂದರು.


ಸರಳವಾಗಿ ತಾಯಂದಿರ ದಿನ ಆಚರಿಸಿದ ಪ್ರಿಯಾಂಕಾ
ನಿಕ್ ಅವರು ಪ್ರಿಯಾಂಕಾ ಅವರ ಮೊದಲ ‘ತಾಯಂದಿರ ದಿನ’ ವನ್ನು ಮನೆಯಲ್ಲಿಯೇ ಸರಳವಾಗಿಯೇ ಆಚರಿಸಿದರು ಮತ್ತು ಅವರಿಗೆ ಸಿಟ್ರಸ್ ಗಿಡವನ್ನು ನೀಡಿದರು, ಅದನ್ನು ಅವರು ಶೀಘ್ರದಲ್ಲಿಯೇ ಒಂದು ಸ್ಥಳದಲ್ಲಿ ನೆಡುತ್ತಾರೆ ಎಂದು ನಿಕ್ ಹೇಳಿದರು.


 ಇದನ್ನೂ ಓದಿ:  Sanjjanaa Galrani: ಮಗುವಿಗೆ ಜನ್ಮ ನೀಡುವ ಮುನ್ನ ಸಂಜನಾ ಫೋಟೋ ಶೂಟ್​ - ಗ್ರೀನ್​ ಗೌನ್​ನಲ್ಲಿ ಫುಲ್​ ಮಿಂಚಿಂಗ್​


ಜಿಮ್ಮಿ ಅವರು ನಿಕ್ ಅವರಿಗೆ ತಂದೆಯಾದದ್ದಕ್ಕಾಗಿ ಅಭಿನಂದಿಸಿದರು ಮತ್ತು 'ಅಪ್ಪ' ಆಗಿರುವುದು ನಿಮಗೆ ಹೇಗೆ ಅನ್ನಿಸುತ್ತಿದೆ ಎಂದು ಕೇಳಿದರು.


ಅದಕ್ಕೆ ನಿಕ್ ಅವರು "ಹೌದು, ಇದು ತುಂಬಾ ಖುಷಿಯ ವಿಷಯ, ಏಕೆಂದರೆ ನಮ್ಮ ಪುಟ್ಟ ಮಗಳು ನಮ್ಮ ಮನೆಗೆ ಬಂದಳು. ಇದಕ್ಕಿಂತ ಬೇರೆ ಉಡುಗೊರೆ ಏನಿದೆ ಹೇಳಿ" ಎಂದು ಉತ್ತರಿಸಿದರು. ತನ್ನ ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಜನರು ಅವನಿಗೆ ಸಲಹೆಗಳನ್ನು ನೀಡುತ್ತಿದ್ದಾರೆಯೇ ಎಂದು ಜಿಮ್ಮಿ ಅವರನ್ನು ಕೇಳಿದರು. ಆಗ ಅದಕ್ಕೆ ನಿಕ್ ಅವರು "ನನಗೆ ತಿಳಿದಿರುವ ಪ್ರತಿಯೊಬ್ಬರೂ ನವಜಾತ ಶಿಶುಗಳ ಆರೈಕೆ ತಜ್ಞರು, ಈ ಎಲ್ಲಾ ಪಿಎಚ್‌ಡಿ ಗಳನ್ನು ಅವರು ಹೊಂದಿದ್ದಾರೆಂದು ನನಗೆ ತಿಳಿದಿರಲಿಲ್ಲ" ಎಂದು ತಮಾಷೆಯಾಗಿ ಹೇಳಿದರು.


ಮಗುವಿನ ಬಗ್ಗೆ ನಿಕ್ ಹೇಳಿದ್ದೇನು?
ಮಗುವಿನ ಆಗಮನದ ಬಗ್ಗೆ ನಿಕ್ ಅವರ ಸಹೋದರರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ಜಿಮ್ಮಿ ಕೇಳಿದಾಗ, ಅವರು "ಅದ್ಭುತವಾಗಿತ್ತು.. ಅವರು ತಮ್ಮದೇ ಆದ ಮಕ್ಕಳನ್ನು ಹೊಂದಿದ್ದಾರೆ, ಇಬ್ಬರು ಹಿರಿಯರು ಮತ್ತು ಫ್ರಾಂಕ್ಲಿನ್ ಕಿರಿಯವನು, ಅವನಿಗೆ ಈಗ 21 ವರ್ಷ. ಅವನು ಎಲ್ಲರ ಅಚ್ಚುಮೆಚ್ಚಿನ ಚಿಕ್ಕಪ್ಪ. ಬಹುಶಃ ಅವನು ಅವರ ವಯಸ್ಸಿಗೆ ಹತ್ತಿರವಾಗಿದ್ದಾನೆ” ಎಂದು ಹೇಳಿದರು.


ಅಲ್ಲದೆ ಇದೇ ಶೋದಲ್ಲಿ ನಿಕ್ ಬಾಲಿವುಡ್ ಸಂಗೀತದ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಮತ್ತು ಡ್ಯಾನ್ಸ್ ಮಾಡುವುದರ ಬಗ್ಗೆ ತಮ್ಮ ಮನ ಬಿಚ್ಚಿ ಏನೆಲ್ಲಾ ಹೇಳಿಕೊಂಡಿದ್ದಾರೆ ನೋಡಿ.


 ಇದನ್ನೂ ಓದಿ:  Jenu Goodu: ಸಕಲೇಶಪುರಕ್ಕೆ ತಲುಪಿದ ದಿಯಾ ಬಾಯ್ ಫ್ರೆಂಡ್ ಕ್ರಿಶ್? ಇದೇನಿದು ಬಿಗ್ ಟ್ವಿಸ್ಟ್


"ನನ್ನ ಪತ್ನಿ ಪ್ರಿಯಾಂಕಾ ಭಾರತೀಯಳು, ನಾವು ಸಾಕಷ್ಟು ಬಾರಿ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತೇವೆ, ಏಕೆಂದರೆ ಈ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ತುಂಬಾನೇ ಸುಲಭ ಎಂದು ನಾನು ಕಂಡು ಕೊಂಡಿದ್ದೇನೆ. ನಾನು ಕೇವಲ ನನ್ನ ತೋಳುಗಳನ್ನು ಅಲುಗಾಡಿಸುತ್ತೇನೆ. ನಾನು ಎಲ್ಲೇ ಕುಳಿತಿರಲಿ ಅಥವಾ ನಿಂತಿರಲಿ, ಯಾವಾಗಲೂ ಹೀಗೆ ಮಾಡುತ್ತಿರುತ್ತೇನೆ" ಎಂದು ನಿಕ್ ಹೇಳಿದರು. ಇಷ್ಟೇ ಅಲ್ಲದೆ ಇದೇ ಶೋ ದಲ್ಲಿ ನಿಕ್ ಅವರು ಜಿಮ್ಮಿಗೆ ಈ ಡ್ಯಾನ್ಸ್ ಸ್ಟೆಪ್ಸ್ ಕಲಿಸಿ ಕೊಟ್ಟಿದ್ದಾರೆ. ನಿಕ್ ಅವರ ‘ಡ್ಯಾನ್ಸಿಂಗ್ ವಿತ್ ಮೈ ಸೆಲ್ಫ್’ ಮೇ 31 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಶಕೀರಾ ಕೂಡ ನಟಿಸಿದ್ದಾರೆ.

Published by:Ashwini Prabhu
First published: