ಈ ಬಾಲಿವುಡ್ ಮತ್ತು ಹಾಲಿವುಡ್ ಎರಡರಲ್ಲೂ ಸುದ್ದಿಯಲ್ಲಿರೋ ಕಪಲ್ ಎಂದರೆ ಅದು ಹಾಲಿವುಡ್ ನಾಯಕ ಮತ್ತು ಗಾಯಕರಾದ ನಿಕ್ ಜೋನಸ್ (Nick Jones) ಮತ್ತು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಬ್ಬರದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇವರಿಬ್ಬರು ಸದಾ ಒಂದಲ್ಲ ಒಂದು ಕಾರಣಕ್ಕೆ (Reason) ಸುದ್ದಿಯಲ್ಲಿರುತ್ತಾರೆ ನೋಡಿ. ಸೆಪ್ಟೆಂಬರ್ 16 ರಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ (Celebration) ನಿಕ್ ಜೋನಸ್ ಬರ್ತಡೆ ಆಚರಣೆಯ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹಂಚಿಕೊಂಡಿದ್ದಾರೆ.
ಅವರ ಪ್ರೀತಿಯ ಪತ್ನಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ "ವಿಶ್ವದ ನೆಚ್ಚಿನ ಸ್ಥಳ" ಸ್ಕಾಟ್ಸ್ ಡೇಲ್ ನ್ಯಾಷನಲ್ ಗಾಲ್ಫ್ ಕ್ಲಬ್ನಲ್ಲಿ ಹುಟ್ಟುಹಬ್ಬದ ಔತಣಕೂಟವನ್ನು ಆಯೋಜಿಸಿದ್ದರು. ನಿಕ್ನ ಪೋಷಕರು ಅವನ ಸಹೋದರರಾದ ಜೋ ಫ್ರಾಂಕಿ ಮತ್ತು ಕೆವಿನ್ ಮತ್ತು ನಿಕ್ ನ ಸ್ನೇಹಿತರು ಸಹ ಈ ಪಾರ್ಟಿಯಲ್ಲಿ ಹಾಜರಿದ್ದರು.
ನಿಕ್ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಗೊತ್ತೇ?
ವೀಡಿಯೋವನ್ನು ನೋಡಿದಾಗ ಇವರ ಹುಟ್ಟುಹಬ್ಬವು ಗಾಲ್ಫ್ ಆಟ ಆಡುವುದರ ಮೂಲಕ ಶುರುವಾಯಿತು ಮತ್ತು ರಾತ್ರಿ ಸಮಯದಲ್ಲಿ ಅದ್ದೂರಿ ಪಾರ್ಟಿಯೊಂದಿಗೆ ಕೊನೆಗೊಂಡಿತು ಎಂದು ತಿಳಿದು ಬರುತ್ತದೆ. ವೀಡಿಯೋದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಸೂಟ್ ನಲ್ಲಿ ಸುಂದರವಾಗಿ ಕಾಣುವ ಹುಟ್ಟುಹಬ್ಬದ ಹುಡುಗನನ್ನು ಹೊರತುಪಡಿಸಿ ಎಲ್ಲರೂ ಬಿಳಿ ಉಡುಪಿನಲ್ಲಿರುವುದನ್ನು ಇಲ್ಲಿ ನೋಡಬಹುದು. ಅಲ್ಲದೆ ನಿಕ್ ಅವರ ತಂದೆ ಕೆವಿನ್ ಜೋನಸ್ ಸೀನಿಯರ್ ಅವರು ತಮ್ಮ ಮಗನ ಬಾಲ್ಯದ ಕೆಲವು ಫೋಟೋಗಳನ್ನು ಹಿಂದೆ ಪ್ರೊಜೆಕ್ಟರ್ ನಲ್ಲಿ ತೋರಿಸುವುದನ್ನು ಸಹ ನಾವು ನೋಡಬಹುದು. ಪ್ರಿಯಾಂಕಾ ತನ್ನ ಅತ್ತೆ ಡೆನಿಸ್ ಮಿಲ್ಲರ್ ಮತ್ತು ಜೋನಸ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡದ್ದನ್ನು ಸಹ ಇಲ್ಲಿ ನೋಡಬಹುದು.
ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದ ತಿಳಿಸಿದ ನಿಕ್
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಹಂಚಿಕೊಂಡ ನಿಕ್ ಜೋನಸ್ ಹುಟ್ಟುಹಬ್ಬದ ವಿಶೇಷವಾದ ದಿನವನ್ನು ವಿಶೇಷವಾಗಿ ಮಾಡಿದ್ದಕ್ಕಾಗಿ ತಮ್ಮ ಪತ್ನಿ ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. "ವಿಶ್ವದ ಸ್ಕಾಟ್ಸ್ ಡೇಲ್ ನ್ಯಾಷನಲ್ ಗಾಲ್ಫ್ ಕ್ಲಬ್ ನಲ್ಲಿ, ನನ್ನ ನೆಚ್ಚಿನ ಸ್ಥಳದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನನ್ನ 30ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇನೆ. ಪ್ರತಿ ಕ್ಷಣವನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಮತ್ತು ನನ್ನನ್ನು ತುಂಬಾ ಪ್ರೀತಿಸುವಂತೆ ಮಾಡಿದ್ದಕ್ಕಾಗಿ ಪ್ರಿಯಾಂಕಾ ನಿನಗೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮಗಳ ಜೊತೆ ಪ್ರಿಯಾಂಕಾ ಫುಲ್ ಹ್ಯಾಪಿ! ಮಾಲ್ತಿ ಮೇರಿಯ ಮತ್ತೊಂದು ಫೋಟೋ ಹಂಚಿಕೊಂಡ ದೇಸಿ ಗರ್ಲ್!!
ಇದೇ ರೀತಿಯ ವೀಡಿಯೋ ಹಂಚಿಕೊಂಡಿರುವ ಪ್ರಿಯಾಂಕಾ
ಪ್ರಿಯಾಂಕಾ ಸಹ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇದೇ ರೀತಿಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ವಿಭಿನ್ನ ಶೀರ್ಷಿಕೆಯೊಂದಿಗೆ ಅದನ್ನು ಫೋಸ್ಟ್ ಮಾಡಿದ್ದಾರೆ. ಅವರು "ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಯಾವಾಗಲೂ ನಿಮ್ಮ ಜೀವನದಲ್ಲಿ ಸಂತೋಷವಾಗಿರಿ ಮತ್ತು ನಿಮ್ಮ ಮುಖದಲ್ಲಿ ಸದಾ ನಗುವಿರಲಿ ಎಂದು ಬರೆದಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ನಿಕ್. ಈ ದಿನ ನನ್ನ ಗಂಡನ 30ನೇ ಹುಟ್ಟುಹಬ್ಬವನ್ನು ಆಚರಿಸಲು ಬಯಸುವುದರೊಂದಿಗೆ ಹುಟ್ಟುಹಬ್ಬ ಆಚರಿಸಲಾಯಿತು. ನಿಕ್ ಅವರ ಸ್ನೇಹಿತರು ಮತ್ತು ಕುಟುಂಬದಿಂದಾಗಿ ತುಂಬಾನೇ ಸಂತೋಷದಿಂದ ಸಮಯವನ್ನು ಕಳೆದೆವು" ಎಂದು ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: ಲಾಸ್ ಏಂಜಲೀಸ್ನಲ್ಲಿರೋ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ?
ತನ್ನ ಪೋಸ್ಟ್ ನ ಶೀರ್ಷಿಕೆಯಲ್ಲಿ ಪ್ರಿಯಾಂಕಾ ಸ್ಕಾಟ್ಸ್ ಡೇಲ್ ನ್ಯಾಷನಲ್ ಗೋಲ್ಡ್ ಕ್ಲಬ್ನ ಸಿಬ್ಬಂದಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ.
ತನ್ನ ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ
ಇದಷ್ಟೇ ಅಲ್ಲದೆ, ಪ್ರಿಯಾಂಕಾ ತನ್ನ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರ ಫೋಟೋವೊಂದನ್ನು ಸಹ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ನಾವು ಬೇಗನೆ ಬರುತ್ತೇವೆ" ಎಂದು ಶೀರ್ಷಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ