ನಮ್ಮೂರಿಗೆ ಬಂದ್ಮೇಲೆ ಕನ್ನಡ ಮಾತಾಡಿಸದೆ ಬುಟ್ ಬಿಡ್ತೀವಾ: ರಾಕಿಂಗ್ ಸ್ಟಾರ್ ಯಶ್

Dear comrade: ಹಾಗೆಯೇ ಆಂಧ್ರಕ್ಕೆ ಬಂದರೆ ನಾನು ತೆಲುಗಿನಲ್ಲಿ ಮಾತನಾಡುತ್ತೇನೆ ಎಂದ ರಾಕಿಂಗ್ ಸ್ಟಾರ್, ನಿಮ್ಮೂರಲ್ಲಿ ನಾವು ನಿಮ್ಮ ಭಾಷೆಯನ್ನು ಗೌರವಿಸುತ್ತೇವೆ. ಈಗ ನೀವು ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು ಅಂದಿರುವುದು ನನಗೆ ಇಷ್ಟವಾಯಿತು.

zahir | news18
Updated:July 13, 2019, 8:24 PM IST
ನಮ್ಮೂರಿಗೆ ಬಂದ್ಮೇಲೆ ಕನ್ನಡ ಮಾತಾಡಿಸದೆ ಬುಟ್ ಬಿಡ್ತೀವಾ: ರಾಕಿಂಗ್ ಸ್ಟಾರ್ ಯಶ್
Yash
zahir | news18
Updated: July 13, 2019, 8:24 PM IST
ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರುವ 'ಡಿಯರ್ ಕಾಮ್ರೇಡ್'​ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡ ಗೀತೆಗಳ ಆಡಿಯೋ ಲಾಂಚ್ ಮಾಡಿದ್ದು ಸ್ಯಾಂಡಲ್​ವುಡ್​ ರಾಕಿಂಗ್ ಸ್ಟಾರ್ ಯಶ್. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಮ್ಯೂಸಿಕ್ ಫೆಸ್ಟಿವಲ್​ನಲ್ಲಿ ವಿಶೇಷ ಅತಿಥಿಯಾಗಿ ರಾಕಿ ಭಾಯ್ ಭಾಗವಹಿಸಿದ್ದರು.

ಇದೇ ವೇಳೆ 'ಡಿಯರ್ ಕಾಮ್ರೇಡ್' ನಾಯಕ ಟಾಲಿವುಡ್ ನಟ​ ವಿಜಯ್ ದೇವರಕೊಂಡ ಜತೆ ವೇದಿಕೆ ಹಂಚಿಕೊಂಡ ಯಶ್ ತಮ್ಮ ಭಾಷಾ ಪ್ರೇಮ ಸಾರಿದರು. 'ಅರ್ಜುನ್ ರೆಡ್ಡಿ' ನಾಯಕನಿಗೆ ಕನ್ನಡ ಬರುತ್ತಾ ಎಂಬ ಪ್ರಶ್ನೆಯೊಂದಿಗೆ ಮಾತು ಆರಂಭಿಸಿದ್ದರು ಯಶ್. ಇದೇ ವೇಳೆ ನೆರೆದಿದ್ದ ಪ್ರೇಕ್ಷಕರಿಂದ ಹರ್ಷೋದ್ಘಾರ ಕೇಳಿ ಬಂತು. ಈ ಸಂದರ್ಭದಲ್ಲಿ ನಮ್ಮೂರಿಗೆ ಬಂದು ಕನ್ನಡ ಮಾತನಾಡಿಸದೆ ಬುಟ್ ಬಿಡ್ತೀವಾ  ಎಂದು ಶಿವಣ್ಣನ ಸ್ಟೈಲ್​ನಲ್ಲಿ ಯಶ್ ಡೈಲಾಗ್ ಹೊಡೆದರು. ಇದಕ್ಕೆ ಸ್ವಲ್ಪ ಸ್ವಲ್ಪ ಬರುತ್ತೆ ಎಂದು ಟಾಲಿವುಡ್ ರೌಡಿ ವಿಜಯ್ ಉತ್ತರ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಇದೇ ವೇಳೆ ಡಬ್ಬಿಂಗ್ ಬಗ್ಗೆಯು ಮಾತನಾಡಿದ ಯಶ್, ಕಾಲ ಬದಲಾಗುತ್ತಿದೆ. 'ಕೆ.ಜಿ.ಎಫ್' ಚಿತ್ರವನ್ನು ಆಂಧ್ರ, ತೆಲಂಗಾಣದ ಪ್ರೇಕ್ಷಕರು ಸ್ವೀಕರಿಸಿದ್ದರು. ಪ್ರಪಂಚ ತುಂಬಾ ಚಿಕ್ಕದಾಗುತ್ತಿದೆ. ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು. ಹಾಗಾಗಿ ಎಲ್ಲರೂ ವಿಶ್ವಮಾನವರಾಗೋಣ. ನಮ್ಮ ಭಾಷೆಯನ್ನು ಗೌರವಿಸೋಣ, ಅವರ ಭಾಷೆಗೂ ಗೌರವ ನೀಡೋಣ ಎಂದರು.

ಹಾಗೆಯೇ ಆಂಧ್ರಕ್ಕೆ ಬಂದರೆ ನಾನು ತೆಲುಗಿನಲ್ಲಿ ಮಾತನಾಡುತ್ತೇನೆ ಎಂದ ರಾಕಿಂಗ್ ಸ್ಟಾರ್, ನಿಮ್ಮೂರಲ್ಲಿ ನಾವು ನಿಮ್ಮ ಭಾಷೆಯನ್ನು ಗೌರವಿಸುತ್ತೇವೆ. ಈಗ ನೀವು ಸ್ವಲ್ಪ ಸ್ವಲ್ಪ ಕನ್ನಡ ಗೊತ್ತು ಅಂದಿರುವುದು ನನಗೆ ಇಷ್ಟವಾಯಿತು. ಅದೇ ರೀತಿ ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಕನ್ನಡದಲ್ಲೇ ಮಾತನಾಡಬೇಕೆಂದು ಕೇಳಿಕೊಂಡರು. ಇದಕ್ಕೆ ವಿಜಯ್ ದೇವಕೊಂಡ ಸಹ ಸಮ್ಮತಿ ಸೂಚಿಸಿದರು.ಇನ್ನು 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ವಿಜಯ್​ಗೆ ನಾಯಕಿಯಾಗಿ ಕರುನಾಡ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಈಗಾಗಲೇ ಚಿತ್ರದ ಕೆಲ ಸೀನ್​ಗಳು ಪ್ರೇಕ್ಷಕರನ್ನು ಮೋಡಿ ಮಾಡಿದೆ. ಹಾಗೆಯೇ ಚಿತ್ರದ ಲಿರಿಕಲ್ ವಿಡಿಯೋಗೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಾಡುಗಳನ್ನು ಕನ್ನಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...