Ranbir Kapoor-Alia Bhatt ಹನಿಮೂನ್​ಗೆ ಹೋಗ್ತಿಲ್ವಂತೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ

ಅಭಿಮಾನಿಗಳಿಗೆ ಕಾಡುತ್ತಿರುವ ಮುಂದಿನ ಪ್ರಶ್ನೆ ಎಂದರೆ ಇವರಿಬ್ಬರು ಹನಿಮೂನ್‌(Honeymoon)ಗೆ ಯಾವ ದೇಶಕ್ಕೆ ಹೋಗುತ್ತಾರೆ ಎನ್ನುವುದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆಲಿಯಾ ಭಟ್​, ರಣಬೀರ್​ ಕಪೂರ್​

ಆಲಿಯಾ ಭಟ್​, ರಣಬೀರ್​ ಕಪೂರ್​

  • Share this:
ಬಾಲಿವುಡ್​(Bollywood) ನಟ ರಣಬೀರ್ ಕಪೂರ್(Ranbir Kapoor) ಮತ್ತು ನಟಿ ಆಲಿಯಾ ಭಟ್(Alia Bhatt) ಇತ್ತೀಚೆಗೆ ಸತಿ-ಪತಿಗಳಾಗಿದ್ದು, ಇವರ ಅಭಿಮಾನಿಗಳಿಗೆ ಈ ತಾರಾ ಜೋಡಿಯ ಮದುವೆ(Wedding)ಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವುದೇ ಒಂದು ವಿಶಿಷ್ಟವಾದ ಕುತೂಹಲ ಎಂದು ಹೇಳಬಹುದು. ಈ ಮದುವೆಯಲ್ಲಿ ಆಲಿಯಾ ಧರಿಸಿದ್ದ ಸೀರೆ(Saree), ಒಡವೆ(Jewels), ಕೈ ಮೇಲೆ ಹಾಕಿಕೊಂಡ ಮೆಹಂದಿ ಮತ್ತು ನಟ ರಣಬೀರ್ ಅವರು ಧರಿಸಿದ್ದ ಉಡುಗೆ, ಸಿಂಪಲ್ ಮೇಕಪ್(Simple Makeup) ಎಲ್ಲವನ್ನೂ ಫೋಟೋಗಳಲ್ಲಿ ನೋಡಿ ಆನಂದ ಪಟ್ಟ ಅಭಿಮಾನಿಗಳಿಗೆ ಕಾಡುತ್ತಿರುವ ಮುಂದಿನ ಪ್ರಶ್ನೆ ಎಂದರೆ ಇವರಿಬ್ಬರು ಹನಿಮೂನ್‌(Honeymoon)ಗೆ ಯಾವ ದೇಶಕ್ಕೆ ಹೋಗುತ್ತಾರೆ ಎನ್ನುವುದು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮದುವೆಯ ಫೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್​!

ಜನಪ್ರಿಯ ಸ್ಟಾರ್ ಜೋಡಿ ಎಂದೇ ಖ್ಯಾತಿಯಾಗಿರುವ ಆಲಿಯಾ ಮತ್ತು ರಣಬೀರ್ ಗುರುವಾರದಂದು ತಮ್ಮ ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮುಂಬೈನಲ್ಲಿರುವ ರಣಬೀರ್ ಅವರ ಮನೆಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಇವರ ವಿವಾಹಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಾಲಿವುಡ್ ನಟ, ನಟಿಯರು ಮತ್ತು ಸೆಲೆಬ್ರಿಟಿಗಳು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ.

ಹನಿಮೂನ್​ಗೆ ಹೋಗಲ್ವಂತೆ ರಣಬೀರ್​-ಆಲಿಯಾ ಭಟ್​!

ಕೆಲವು ಮಾಧ್ಯಮ ವರದಿಗಳ ಪ್ರಕಾರ ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಗಾಗಿ ರಣಬೀರ್ ಶೀಘ್ರದಲ್ಲಿಯೇ ಚಿತ್ರತಂಡವನ್ನು ಸೇರಲಿದ್ದು, ಹನಿಮೂನ್‌ಗೆ ಸಮಯವಿಲ್ಲ ಎಂದು ಹೇಳಲಾಗುತ್ತಿದೆ. ಒಂದು ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಆಲಿಯಾ ಮತ್ತು ರಣಬೀರ್ ಇಬ್ಬರೂ ತಮ್ಮ ತಮ್ಮ ಕೆಲಸಗಳಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಚಿತ್ರೀಕರಣವನ್ನು ಆಲಿಯಾ ಪುನಾರಂಭಿಸಿದರೆ, ರಣಬೀರ್ ಹಿಮಾಚಲ ಪ್ರದೇಶದಲ್ಲಿ 'ಅನಿಮಲ್' ಚಿತ್ರದ ಮೊದಲ ಶೆಡ್ಯೂಲ್ ಅನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Alia Bhatt ಮದುವೆಗೆ ಎಲ್ರೂ ವಿಶ್ ಮಾಡಿದ್ರು, ಆದ್ರೆ ಅವನೊಬ್ಬನ ಹಾರೈಕೆ ಮುಂದೆ ಇನ್ಯಾವ್ದೂ ಇಲ್ಲ ಬಿಡಿ!

'ಅನಿಮಲ್​' ಸಿನಿಮಾದಲ್ಲಿ ರಣಬೀರ್ ಬ್ಯುಸಿ!

'ಅನಿಮಲ್' ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಹೆಚ್ಚು ಮಾಡಿಕೊಂಡಿರುವ ರಣಬೀರ್ ಅವರು ಲವ್ ರಂಜನ್ ಅವರ ರೋಮ್‌ಕಾಮ್ ಚಿತ್ರದ ಏಪ್ರಿಲ್ ಶೆಡ್ಯೂಲ್ ನಂತರ ಮತ್ತೆ ತೆಳ್ಳಗಾಗಬೇಕಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಅವರು 'ಅನಿಮಲ್' ನ ಎರಡನೇ ಶೆಡ್ಯೂಲ್‌ಗಾಗಿ ಮತ್ತೆ ಅವರು ಫಿಟ್ ಆಗಿ ಕಾಣಿಸಿಕೊಳ್ಳಬೇಕಾಗುತ್ತದೆ.

ಶೂಟಿಂಗ್​ಗಾಗಿ ಸ್ಪೇನ್​ಹೆ ತೆರಳಲಿರುವ ರಣಬೀರ್!

ನಟ ರಣಬೀರ್ ಅವರು ಏಪ್ರಿಲ್ 22 ರಂದು ಮನಾಲಿಗೆ ಎರಡು ದಿನಗಳ ಚಿತ್ರೀಕರಣಕ್ಕಾಗಿ ಹೊರಡಲಿದ್ದಾರೆ ಎಂದು ವರದಿಯಾಗಿದೆ, ನಂತರ ಅವರು ಮುಂಬೈನಲ್ಲಿ ಒಂದು ವಾರದ ಚಿತ್ರೀಕರಣದಲ್ಲಿ ಬ್ಯುಸಿ ಇರಲಿದ್ದಾರೆ. ಮೇ ತಿಂಗಳಲ್ಲಿ, ಅವರು ಸ್ಪೇನ್ ಮತ್ತು ಮುಂಬೈನಲ್ಲಿ ಒಂದು ತಿಂಗಳ ಕಾಲ ವೇಳಾಪಟ್ಟಿಯನ್ನು ಹೊಂದಿದ್ದಾರೆ, ಅದಕ್ಕಾಗಿ ಅವರು ತಮ್ಮ ದೇಹವನ್ನು ತೆಳ್ಳಗೆ ಮಾಡಿಕೊಳ್ಳಬೇಕಾಗುತ್ತದೆ. ಲವ್ ರಂಜನ್ ಅವರ ಚಿತ್ರವನ್ನು ಪೂರ್ಣಗೊಳಿಸಿದ ನಂತರ, ರಣಬೀರ್ 2022 ರ ಅಂತ್ಯದ ವೇಳೆಗೆ 'ಅನಿಮಲ್' ಅನ್ನು ಮುಗಿಸಲಿದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಮೆಹಂದಿ ಕಾರ್ಯಕ್ರಮದಲ್ಲಿ ಹಾಜರಿದ್ರು ರಿಷಿ ಕಪೂರ್​! ಇದು ಹೇಗೆ ಸಾಧ್ಯ ಅಂತೀರಾ? ಫೋಟೋ ನೋಡಿ

ಈ ಮಧ್ಯೆ, ಮೇ ತಿಂಗಳಲ್ಲಿ ಆಲಿಯಾ ತನ್ನ ಹಾಲಿವುಡ್ ಚಿತ್ರದ ಚಿತ್ರೀಕರಣವನ್ನು ಸಹ ಪ್ರಾರಂಭಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ನಟಿ ತನ್ನ ಚಿತ್ರದ ಚಿತ್ರೀಕರಣಕ್ಕಾಗಿ ಅಮೆರಿಕಕ್ಕೆ ಹೊರಡಲಿದ್ದಾರೆ. ಗಲ್ ಗಡೋಟ್ ಅವರೊಂದಿಗೆ ನೆಟ್‌ಫ್ಲಿಕ್ಸ್‌ನ 'ಹಾರ್ಟ್ ಆಫ್ ಸ್ಟೋನ್' ಚಿತ್ರದ ಮೂಲಕ ಆಲಿಯಾ ಹಾಲಿವುಡ್‌ನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ಮಾರ್ಚ್‌ನಲ್ಲಿ ಘೋಷಿಸಲಾಗಿತ್ತು.
Published by:Vasudeva M
First published: