Riya Kapoor Wedding: ರಿಯಾ ಕಪೂರ್ ಮದುವೆಯಾಯ್ತು, ಮದುವೆಯ ಸಂಭ್ರಮ ಹೇಗಿತ್ತು? ಅನಿಲ್ ಕಪೂರ್ ಮಗಳ ಮದುವೆಯಲ್ಲಿ ಯಾರೆಲ್ಲಾ ಬಂದಿದ್ರು?

Bollywood Wedding: ಈ ಖಾಸಗಿ ವಿವಾಹದಲ್ಲಿ ರಿಯಾ ಸಹೋದರಿ ನಟಿ ಸೋನಂ ಕಪೂರ್ ಅಹುಜಾ, ಅವರ ಪತಿ ಆನಂದ್ ಅಹುಜಾ, ಸಹೋದರ ಅರ್ಜುನ್ ಕಪೂರ್ ಸೇರಿದಂತೆ ಕೆಲವರು ಮಾತ್ರ ಭಾಗವಹಿಸಿದ್ದರು.

ಪತಿ ಕರಣ್ ಜೊತೆ ರಿಯಾ ಕಪೂರ್

ಪತಿ ಕರಣ್ ಜೊತೆ ರಿಯಾ ಕಪೂರ್

  • Share this:
Riya Kapoor Wedding: ರಿಯಾ ಕಪೂರ್ ಮದುವೆಯ ಸಂಭ್ರಮ ಹೇಗಿತ್ತು? ಅನಿಲ್ ಕಪೂರ್ ಮಗಳ ಮದುವೆಯಲ್ಲಿ ಯಾರೆಲ್ಲಾ ಬಂದಿದ್ರು?ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಪುತ್ರಿ ಹಾಗೂ ನಟಿ ಸೋನಂ ಕಪೂರ್ ಸಹೋದರಿ ರಿಯಾ ಕಪೂರ್ ಶನಿವಾರ ರಾತ್ರಿ ತನ್ನ ದೀರ್ಘಕಾಲದ ಗೆಳೆಯ ಕರಣ್ ಬೂಲಾನಿಯ ಅವರನ್ನು ವರಿಸಿದ್ದಾರೆ. ಇವರಿಬ್ಬರು ತಮ್ಮ ಕುಟುಂಬ ಸದಸ್ಯರನ್ನು ಮಾತ್ರ ಒಳಗೊಂಡ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದು, ಕುಟುಂಬದ ಸದಸ್ಯರು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿಲ್ಲ. ಆದರೆ ಅನಿಲ್ ಕಪೂರ್ ಮಾಧ್ಯಮದವರಿಗೆ ಮದುವೆಯ ವಿಧಿ ವಿಧಾನಗಳ ನಂತರ ಸಿಹಿತಿಂಡಿಗಳನ್ನು ಹಂಚುತ್ತಿರುವುದು ಕಂಡುಬಂದಿದೆ.

ಮದುವೆಯಾದ ನಂತರ, ಹೊಸ ಜೋಡಿಗಳು ಅನಿಲ್ ಕಪೂರ್ ನಿವಾಸದಿಂದ ನಿರ್ಗಮಿಸುತ್ತಿರುವ ಫೋಟೋ ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಖಾಸಗಿ ಸಮಾರಂಭದಲ್ಲಿ ಮದುವೆಯಾದ ಜೋಡಿಗಳು ಮದುವೆಯ ನಂತರ ಸಹ ಮಾಧ್ಯಮಗಳಿಗೆ ಫೋಸ್ ಕೊಡದೆ ಹಾಗೆಯೆ ತೆರಳಿದ್ದು ಹಲವಾರು ಕೂತುಹಲಗಳನ್ನು ಕೆರಳಿಸಿದೆ.

ಅದೆಷ್ಟೇ ಖಾಸಗಿಯಾಗಿ ವರಿಸಿದರೂ ಸಹ paparazziಗಳು ಇವರನ್ನು ಬಿಟ್ಟಿಲ್ಲ. ಕಾರಿನಲ್ಲಿ ಹೊರಡುವಾಗ ರಿಯಾ ಮತ್ತು ಕರಣ್ ಫೋಟೋವನ್ನು ಪಾಪರಾಜಿಗಳು ಕ್ಲಿಕ್ ಮಾಡಿದ್ದಾರೆ. ಫೋಟೋದಲ್ಲಿ ರಿಯಾ ಕೆಂಪು ಬಣ್ಣದ ಉಡುಗೆ ಧರಿಸಿದ್ದರೆ, ಕರಣ್ ಚಿನ್ನದ ಶೇರ್ವಾನಿ ಧರಿಸಿದ್ದರು. ಈ ಚಿತ್ರದಲ್ಲಿ ಸಿಂಧೂರ ಧರಿಸಿದ್ದ ರಿಯಾ ಬಹಳ ಸುಂದರವಾಗಿ ಕಾಣುತ್ತಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋಗೆ ನಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ರಿಯಾ ಸಿಂಧೂರ ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಸಹ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಧ್ರುವ ಸರ್ಜಾ ಹೊಸಾ ಸಿನಿಮಾ ಫಸ್ಟ್ ಲುಕ್ ರಿಲೀಸ್, ಹೇಗಿದ್ದಾನೆ ನೋಡಿ 'ಮಾರ್ಟಿನ್'

ಈ ಖಾಸಗಿ ವಿವಾಹದಲ್ಲಿ ರಿಯಾ ಸಹೋದರಿ ನಟಿ ಸೋನಂ ಕಪೂರ್ ಅಹುಜಾ, ಅವರ ಪತಿ ಆನಂದ್ ಅಹುಜಾ, ಸಹೋದರ ಅರ್ಜುನ್ ಕಪೂರ್, ಅಂಶುಲಾ ಕಪೂರ್, ಶನಾಯ, ಖುಷಿ, ಬೋನಿ ಕಪೂರ್, ಸಂಜಯ್ ಮತ್ತು ಮಹೀಪ್ ಕಪೂರ್, ಮಸಬಾ ಗುಪ್ತಾ ಸೇರಿದಂತೆ ಕೆಲ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಇನ್ನು ರಿಯಾ ಸಹೋದರಿ ನಟಿ ಜಾನ್ವಿ ಕಪೂರ್ ಕೆಲಸದ ಹಿನ್ನೆಲೆ ದೆಹಲಿಯಲ್ಲಿದ್ದ ಕಾರಣ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಸಮಾರಂಭದ ನಂತರ ಪಾಪರಾಜಿಗಳಿಗೆ ಸಿಹಿ ಹಂಚುವಾಗ, ಅನಿಲ್ ಕಪೂರ್ ತಮ್ಮ ಕಿರಿಯ ಮಗಳ ಹೊಸ ಜೀವನಕ್ಕೆ ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ.
ಅನಿಲ್ ಕಪೂರ್, ನೀವು ಹೃದಯಪೂರ್ವಕವಾಗಿ ರಿಯಾ ಹೊಸ ಜೀವಕ್ಕೆ ಆಶೀರ್ವಾದ ಮಾಡಿ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು. ನೀವು ಸೋನಂ ಕಪೂರ್​ಗೆ ಆಶೀರ್ವಾದ ಮಾಡಿದ ಹಾಗೆ ದಯವಿಟ್ಟು ರಿಯಾಳಿಗೂ ಮಾಡಿ ಎಂದು ಕೇಳಿಕೊಂಡಿದ್ದಾರೆ.

ಇನ್ನು ರಿಯಾ ಕಪೂರ್ ಈಗಾಗಲೇ ಬಾಲಿವುಡ್​ನಲ್ಲಿ ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2010ರಲ್ಲಿ ಸಹೋದರಿ ಸೋನಂ ಅಭಿನಯದ ಆಯೇಷಾ ಮತ್ತು ಖೂಬ್ಸೂರತ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದರೆ. ಅಲ್ಲದೇ 2018ರಲ್ಲಿ ಬಿಡುಗಡೆಯಾದ ಸೋನಂ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ವೀರೆ ದಿ ವೆಡ್ಡಿಂಗ್ ಚಿತ್ರದಲ್ಲಿ ಸಹ ಸಹ ನಿರ್ಮಾಪಕರಾಗಿದ್ದರು. ಕೇವಲ ಚಿತ್ರಗಳಲ್ಲದೇ ರಿಯಾ ತನ್ನ ಸಹೋದರಿ ಸೋನಂ ಜೊತೆ ಸೇರಿ ರೇಸನ್ (Rheson ) ಎನ್ನುವ ಬಟ್ಟೆಯ ಬ್ರ್ಯಾಂಡ್ ಆರಂಭಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: