ಹೊಸ ವರ್ಷಕ್ಕೆ ಹೊಸ ಪಾರ್ಟಿ ಸಾಂಗ್!; ‘ಮಾರಮ್ಮನ ಡಿಸ್ಕೋ‘ ಎನ್ನಲ್ಲಿದ್ದಾರೆ ರ‍್ಯಾಪರ್ ಆಲ್​​ ಓಕೆ

ವಿಶೇಷವೆಂದರೆ ಈ ಹಾಡನ್ನು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಈ ಹಾಡು ಮೂಡಿ ಬರಲಿದೆ. ಈ ಸಾಂಗ್​ನಲ್ಲಿ ಹ್ಯಾಸ ನಟ ಟೆನಿಕ್​ ಕೃಷ್ಣ ಕೂಡ ಅಭಿನಯಿಸಿದ್ದು,  ಆಲ್​​ ಓಕೆ​ ‘ಎಂಡಿ‘ ಹಾಡನ್ನು ಹಾಡಿದ್ದಾರೆ.

news18-kannada
Updated:December 3, 2019, 7:38 AM IST
ಹೊಸ ವರ್ಷಕ್ಕೆ ಹೊಸ ಪಾರ್ಟಿ ಸಾಂಗ್!; ‘ಮಾರಮ್ಮನ ಡಿಸ್ಕೋ‘ ಎನ್ನಲ್ಲಿದ್ದಾರೆ ರ‍್ಯಾಪರ್ ಆಲ್​​ ಓಕೆ
ರ‍್ಯಾಪರ್ ಆಲ್​​ ಓಕೆ, ನಟಿ ತಾನ್ಯ ಹೋಪ್​
  • Share this:
ಹೊಸ ವರ್ಷಕ್ಕೆ ಕನ್ನಡದ ರ‍್ಯಾಪರ್​ ಅಲೋಕ್​ ಬಾಬು ಹೊಸ ಹಾಡೊಂದನ್ನು ಸಿದ್ಧಪಡಿಸಿದ್ದು, ನ್ಯೂ ಇಯರ್​ ದಿನ ಈ ಹಾಡನ್ನು ಬಿಡುಗಡೆ ಮಾಡಲಿದ್ದಾರೆ.

ರ‍್ಯಾಪರ್ ಆಲ್​​ ಓಕೆ​ ರೆಡಿ ಮಾಡಿರುವ ಹಾಡಿಗೆ ‘ಎಂಡಿ‘ ಎಂದು ಹೆಸರಿಟ್ಟಿದ್ದಾರೆ. ‘ಎಂಡಿ‘ ಎಂದರೆ ಏನು? ಎಂದು ಕೇಳಿದರೆ, ‘ಮಾರಮ್ಮನ ಡಿಸ್ಕೋ‘ ಎಂದು ಹೇಳುತ್ತಿದ್ದಾರೆ ಯಾರ್ಪರ್​ ಅಲೋಕ್​. ಈ ಸಾಂಗ್​ಗೆ ಬಸಣ್ಣಿ ಖ್ಯಾತಿಯ ನಟಿ ತಾನ್ಯ ಹೋಪ್​ ಹೆಜ್ಜೆ ಹಾಕಲಿದ್ದಾರೆ.

ವಿಶೇಷವೆಂದರೆ ಈ ಹಾಡನ್ನು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಈ ಹಾಡು ಮೂಡಿ ಬರಲಿದೆ. ಈ ಸಾಂಗ್​ನಲ್ಲಿ ಹ್ಯಾಸ ನಟ ಟೆನಿಕ್​ ಕೃಷ್ಣ ಕೂಡ ಅಭಿನಯಿಸಿದ್ದು,  ಆಲ್​​ ಓಕೆ​ ‘ಎಂಡಿ‘ ಹಾಡನ್ನು ಹಾಡಿದ್ದಾರೆ.

ಹೊಸ ವರ್ಷಕ್ಕೆ ತಕ್ಕಂತ ಪಾರ್ಟಿ ಸಾಂಗ್​ ಇದಾಗಿದೆ. ರೆಟ್ರೋ ಸ್ಟೈಲಿನಲ್ಲಿ ಈ ಹಾಡು ಇರಲಿದೆ. ಈಗಾಗಲೇ ಹಾಡಿನ ರಿಹರ್ಸಲ್​ ನಡೆಯುತ್ತಿದ್ದು, ನಟಿ ತಾನ್ಯ ಹೋಪ್​ ಈ ಹಾಡಿಗೆ ಹೆಜ್ಜೆ ಹಾಕುವ ಭರದಲ್ಲಿದ್ದಾರಂತೆ.

ರ‍್ಯಾಪರ್ ಆಲ್​​ ಓಕೆ ಈ ಹಿಂದೆ ‘ಯಾಕಿಂಗೆ‘, ‘ಡೋಂಟ್​​ ವರಿ‘ ಮಾತ್ರವಲ್ಲದೆ, ತಿಥಿ ಖ್ಯಾತಿಯ ಗಡ್ಡಪ್ಪ ಜೊತೆಗೆ ‘ಕೆಎ 01‘ ಹೆಸರಿನ ಆಲ್ಬಂ ಮಾಡಿದ್ದರು. ಕನ್ನಡದಲ್ಲಿ ‘ಪಟಾಕಿ‘, ‘ಮಂದಹಾಸ‘, ‘ಗಜ ಕೇಸರಿ‘ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೂಡ  ಬಣ್ಣ ಹಚ್ಚಿದ್ದಾರೆ. ಇದೀಗ ಹೊಸ ವರ್ಷಕ್ಕೆ ಹೊಸ ಪಾರ್ಟಿ ಸಾಂಗ್​ ಪರಿಚಯಿಸಲು ಸಿದ್ಧರಾಗಿದ್ದಾರೆ.

ಇದನ್ನೂ ಓದು: Vespa SXL 150: ಬಿಎಸ್6 ಮಾದರಿಯ ಸ್ಕೂಟರ್ ಪರಿಚಯಿಸಿದ ವೆಸ್ಪಾ; ಇದರ ಬೆಲೆಯೆಷ್ಟು ಗೊತ್ತಾ?

ಇದನ್ನೂ ಓದು: ಪುಸ್ತಕದ ಮೇಲೆ ನಿಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಖ್ಯಾತ ನಟಿ!ಇದನ್ನೂ ಓದು: ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!? 
First published:December 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ