Roberrt: ಶಂಕರ್ ಮಹದೇವನ್ ಕಂಠಸಿರಿಯ ಜೈ ಶ್ರೀರಾಮ್​ ಹಾಡಿಗೆ ಅರ್ಧ ಗಂಟೆಯಲ್ಲೇ ಸಿಕ್ತು ಲಕ್ಷಕ್ಕೂ ಅಧಿಕ ವೀಕ್ಷಣೆ..!

Roberrt Jai Sriram Special Song: ಖ್ಯಾತ ಗಾಯಕ ಶಂಕರ್​ ಮಹದೇವನ್​ ಅವರ ಕಂಠಸಿರಿಯಲ್ಲಿ ಜೈ ಶ್ರೀರಾಮ್​ ಹಾಡಿನ ಹೊಸ ಅವರತಣಿಕೆ ಮೂಡಿ ಬಂದಿದೆ. ಈ ಹಾಡು ಬಿಡುಗಡೆಯಾಗಿ ಅರ್ಧ ಗಂಟೆ ಕಳೆಯುವಷ್ಟರಲ್ಲೇ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.

Anitha E | news18-kannada
Updated:April 2, 2020, 12:06 PM IST
Roberrt: ಶಂಕರ್ ಮಹದೇವನ್ ಕಂಠಸಿರಿಯ ಜೈ ಶ್ರೀರಾಮ್​ ಹಾಡಿಗೆ ಅರ್ಧ ಗಂಟೆಯಲ್ಲೇ ಸಿಕ್ತು ಲಕ್ಷಕ್ಕೂ ಅಧಿಕ ವೀಕ್ಷಣೆ..!
ದರ್ಶನ್​ ಅಭಿನಯದ 53ನೇ ಸಿನಿಮಾ ರಾಬರ್ಟ್​ನಿಂದ ಎರಡನೇ ಹಾಡು ಬಿಡುಗಡೆಯಾಗಿದೆ.
  • Share this:
ದರ್ಶನ್ ​ಅಭಿನಯದ 53ನೇ ಸಿನಿಮಾ ರಾಬರ್ಟ್​. ಲಾಕ್​ಡೌನ್​ನಲ್ಲಿ ಮನೆಯಲ್ಲೇ ಬಂಧಿಯಾಗಿರುವ ಕನ್ನಡ ಪ್ರೇಕ್ಷಕರಿಗೆ ರಾಮನವಮಿಯಂದು ಉಡುಗೊರೆ ನೀಡಿದೆ. ಈ ಹಿಂದೆಯೇ ಚಿತ್ರತಂಡ ಹೇಳಿದಂತೆ ಜೈ ಶ್ರೀರಾಮ್​... ಹೊಸ ವರ್ಷನ್​ ಹಾಡನ್ನು ಬಿಡುಗಡೆ ಮಾಡಿದೆ. 

ಇದರಲ್ಲಿ ವಿಶೇಷ ಅಂದರೆ ಖ್ಯಾತ ಗಾಯಕ ಶಂಕರ್​ ಮಹದೇವನ್​ ಅವರ ಕಂಠಸಿರಿಯಲ್ಲಿ ಜೈ ಶ್ರೀರಾಮ್​ ಹಾಡಿನ ಹೊಸ ಅವರತಣಿಕೆ ಮೂಡಿ ಬಂದಿದೆ. ಈ ಹಾಡು ಬಿಡುಗಡೆಯಾಗಿ ಅರ್ಧ ಗಂಟೆ ಕಳೆಯುವಷ್ಟರಲ್ಲೇ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.



ಈ ಹಿಂದೆಯೇ ಈ ಹಾಡಿನ ಲಿರಿಕಲ್​ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಅರ್ಜುನ್​ ಜನ್ಯ ಸಂಗೀತ ನೀಡಿರುವ ಜೈ ಶ್ರೀರಾಮ್​ ಹಾಡನ್ನು ದಿವ್ಯ ಕುಮಾರ್​​ ಅವರು ಹಾಡಿದ್ದರು.

ಇದನ್ನೂ ಓದಿ: ಒಡಿಸ್ಸಿ ನೃತ್ಯ ಮಾಡಿದ ಸಾರಾ ಅಲಿ ಖಾನ್​ ವಿಡಿಯೋ ವೈರಲ್​..!

ಆದರೆ ರಾಮನವಮಿಯಂದು ಪ್ರೇಕ್ಷಕರಿಗೆ ವಿಶೇಷವಾಗಿ ಶುಭ ಕೋರುವ ಸಲುವಾಗಿ ಚಿತ್ರತಂಡ ಈ ಹಾಡನ್ನು ಮತ್ತೆ ಶಂಕರ್​ ಮಹದೇವನ್​ ಅವರಿಂದ ಹಾಡಿಸಿ, ಹೊಸ ವರ್ಷನ್​ ಅನ್ನು ಬಿಡುಗಡೆ ಮಾಡಿದೆ.

ಎಲ್ಲರಿಗೂ ರಾಮನವಮಿ ಹಬ್ಬದ ಶುಭಾಶಯಗಳು... https://t.co/po2EeOII41


ಶಂಕರ್​ ಮಹದೇವನ್ ಅವರು ಹಾಡಿರುವ ನ್ಯೂ ವರ್ಷನ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹಳೇ ಹಾಡಿಗಿಂತ ಇದೇ ಚೆನ್ನಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಅದರಲ್ಲೂ ಈ ಲಿರಿಕಲ್​ ವಿಡಿಯೋದಲ್ಲಿ ಮತ್ತಷ್ಟು ಹೊಸ ಮೇಕಿಂಗ್​ ವಿಡಿಯೋ ತುಣುಕುಗಳು  ನೋಡಲು ಸಿಗಲಿವೆ.

 
Prakash Rai: 500 ಕುಟುಂಬಗಳ ತುತ್ತಿನ ಬುತ್ತಿ ತುಂಬಿಸುತ್ತಿರುವ ಪ್ರಕಾಶ್​ ರೈ..!

First published: April 2, 2020, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading