ರಾಕಿಂಗ್ ಸ್ಟಾರ್ ಯಶ್ (rocking star Yash) ಅಭಿನಯದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ಚಾಪ್ಟರ್ 1ಕ್ಕಿಂತ ಹೆಚ್ಚಾಗಿ ಚಾಪ್ಟರ್ 2 (KGF Chapter 2) ಸದ್ದು ಮಾಡಿದೆ. ಸರಣಿ ದಾಖಲೆಗಳನ್ನು ಮಾಡುವ ಮೂಲಕ, ಈಗಾಗಲೇ ಇದ್ದ ದಾಖಲೆಗಳನ್ನು ಪುಡಿ ಮಾಡಿದ ಸ್ಯಾಂಡಲ್ವುಡ್ (Sandalwood) ಹೆಮ್ಮೆಯ ಚಿತ್ರ ಕೆಜಿಎಫ್ ಎನ್ನಬಹುದು. ಇದೀಗ ಎಲ್ಲಡೆ ಕೆಜಿಎಫ್ 3 ಕುರಿತ ಚರ್ಚೆಗಳು ಆರಂಭವಾಗಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಕೆಜಿಎಫ್ 3 ಕುರಿತು ಹೇಳಿಕೆಯನ್ನು ನೀಡಿ 2024ರಲ್ಲಿ ಚಿತ್ರ ಬಿಡಿಗಡೆಯಾಗಲಿದೆ ಎಂದಿದ್ದರು. ಆದರೆ ಈಗೊಂದು ಸುದ್ದಿ ಬಂದಿದ್ದು, ಕೆಜಿಎಫ್ 3 ಶೂಟಿಂಗ್ ಸಧ್ಯಕ್ಕಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ.
ಹೌದು, ಅಕ್ಟೋಬರ್ನಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್-2 ನೋಡಿ ಫುಲ್ ಖುಷ್ ಆಗಿದ್ದ ಅಭಿಮಾನಿಗಳು ಕೆಜಿಎಫ್-3ಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ಅರೇ ಏನಪ್ಪಾ ಇದು ಅಂತ ಅಶ್ಚರ್ಯವಾಗಬೇಡಿ. ಈ ಬಗ್ಗೆ ಕಾರ್ತಿಕ್ ಗೌಡ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು. ನಾವು ಈಗ ಅನೇಕ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೀವಿ. ಹೊಂಬಾಳೆ ಫಿಲ್ಮ್ಸ್ ಸದ್ಯದಲ್ಲೇ ಕೆಜಿಎಫ್-3 ಪ್ರಾರಂಭ ಮಾಡುವುದಿಲ್ಲ. ನಾವು ಕೆಜಿಎಫ್-3 ಪ್ರಾರಂಭ ಮಾಡಿದಾಗ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
The news doing the rounds are all speculation. With a lot of exciting projects ahead of us , we @hombalefilms will not be starting #KGF3 anytime soon. We will let you know with a bang when we start the work towards it.
— Karthik Gowda (@Karthik1423) May 14, 2022
ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ನಾಗಿಣಿ 2 ನಟ ನಿನಾದ್ - ಸೂಪರ್ ಜೋಡಿ ಎಂದ ಅಭಿಮಾನಿಗಳು
ಕೆಜಿಎಫ್ 2 ಸೃಷ್ಟಿಸಿದ ಅಲೆ ಇನ್ನೂ ಮುಗಿದಿಲ್ಲ. 2022 ರ ಭಾರತದ ಅತಿದೊಡ್ಡ ಚಿತ್ರ ಯಾವುದು ಎಂದರೆ ಯಾರಾದರೂ ನಿಸ್ಸಂಶಯವಾಗಿ ಕೆಜಿಎಫ್ 2 ಎಂದು ಹೇಳುತ್ತಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಸುಳ್ಳಲ್ಲ, ಅದ್ಭುತ ಪ್ರತಿಕ್ರಿಯೆ ಪಡೆದಿದೆ.
ಯಶ್ ಅಭಿಮಾನಿಗಳು ಹಬ್ಬದಂತೆ ಆಚರಣೆ ಮಾಡಿ ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ತೆರೆಕಂಡು ದಾಖಲೆ ಬರೆದಿರುವ ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಒಂದು ದಾಖಲೆ ಎನ್ನಬಹುದು.
ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಿಂದಿಯಲ್ಲಿ ಸಿನಿಮಾ ಬರೋಬ್ಬರಿ 420 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸಹ ಹೇಳಲಾಗುತ್ತಿದೆ.
ಇದನ್ನೂ ಓದಿ: ತಮಿಳು ಧಾರಾವಾಹಿಯಲ್ಲಿ ನಾಯಕಿಯಾಗಿ ಅಗ್ನಿಸಾಕ್ಷಿಯ ತನು
ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ 2ನೇ ಸಿನಿಮಾವಾಗಿ ಹೊರಹೊಮ್ಮಿದೆ ಕೆಜಿಎಫ್-2. ಬಾಹುಬಲಿ-2 ದಾಖಲೆ ಮುರಿಯುವ ಸನಿಹದಲ್ಲಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಸ್ಯಾಂಡಲ್ವುಡ್ ಚಿತ್ರವೊಂದು ಈ ಮಟ್ಟಿಗೆ ಹೆಸರು ಮಾಡುತ್ತಿರುವುದು ನಿಜಕ್ಕೂ ಸಂತೋಷದ ವಿಚಾರವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ