HOME » NEWS » Entertainment » NEW TWIST IN SUSHANT SINGH RAJPUT SUICIDE CASE INVESTIGATION RMD

Sushant Singh: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ; ಪೊಲೀಸರ ತನಿಖೆಗೆ ಸಿಕ್ತು ಹೊಸ ಟ್ವಿಸ್ಟ್!

ಬಾಲಿವುಡ್​ನ ಪ್ರಭಾವಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಯಶ್​ ರಾಜ್​ ಫಿಲ್ಮ್ಸ್​​ನ ಕಾಸ್ಟಿಂಗ್​ ನಿರ್ದೇಶಕ ಶಾನೂ ಶರ್ಮಾರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಸುಶಾಂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗ ಅವರನ್ನು ಮತ್ತೊಮ್ಮೆ ವಿಚಾರಣೆ ಮಾಡಲಾಗುತ್ತಿದೆ.

news18-kannada
Updated:July 2, 2020, 2:00 PM IST
Sushant Singh: ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ; ಪೊಲೀಸರ ತನಿಖೆಗೆ ಸಿಕ್ತು ಹೊಸ ಟ್ವಿಸ್ಟ್!
ಸಂಜಯ್​ ಲೀಲಾ ಬನ್ಸಾಲಿ-ಸುಶಾಂತ್​ ಸಿಂಗ್​
  • Share this:
ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡು ಎರಡು ವಾರಗಳೇ ಕಳೆದಿವೆ. ಅವರ ಆತ್ಮಹತ್ಯೆಗೆ ಬಾಲಿವುಡ್​ ದಿಗ್ಗಜರು ನೇರ ಕಾರಣ ಎಂದು ಕೆಲವರು ದೂರಿದ್ದರು. ಇನ್ನೂ ಕೆಲವರು ಇದು ಕೊಲೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ತನಿಖೆಗೆ ಹೊಸ ಟ್ವಿಸ್ಟ್​ ಒಂದು ಸಿಕ್ಕಿದೆ!

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ಎರಡು ಮೂರು ದಿನಗಳ ಕಾಲ ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿಯನ್ನು ಪ್ರಶ್ನೆ ಮಾಡಲಿದ್ದಾರೆ. ಈಗಾಗಲೇ ಸಂಜಯ್​ ಲೀಲಾ ಬನ್ಸಾಲಿಗೆ ಸಮನ್ಸ್​ ಕೂಡ ಕಳುಹಿಸಲಾಗಿದೆಯಂತೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.  ಸುಶಾಂತ್​ ಸಿಂಗ್​ಗೆ ಸಿಕ್ಕ ಸಿನಿಮಾ ಕೈ ತಪ್ಪಲು ಸಂಜಯ್​ ಲೀಲಾ ಬನ್ಸಾಲಿ ಕೂಡ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಬಾಲಿವುಡ್​ನ ಪ್ರಭಾವಿ ವ್ಯಕ್ತಿ ಎಂದೇ ಗುರುತಿಸಿಕೊಂಡ ಯಶ್​ ರಾಜ್​ ಫಿಲ್ಮ್ಸ್​​ನ ಕಾಸ್ಟಿಂಗ್​ ನಿರ್ದೇಶಕ ಶಾನೂ ಶರ್ಮಾರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಸುಶಾಂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗ ಅವರನ್ನು ಮತ್ತೊಮ್ಮೆ ವಿಚಾರಣೆ ಮಾಡಲಾಗುತ್ತಿದೆ.

ಮುಂಬೈ ಪೊಲೀಸರ ಎದುರು  ಕಂಗನಾ ರಣಾವತ್​ ಮತ್ತು ಶೇಖರ್​ ಕಪೂರ್​ ಕೂಡ ಶೀಘ್ರವೇ ತಮ್ಮ ಹೇಳಿಕೆಯನ್ನು ದಾಖಲು ಮಾಡಲಿದ್ದಾರೆ. ರಜಪೂತ್​ ಸಾವಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಸುಶಾಂತ್​ ಸಾವಿಗೆ ಇವರು ಬೇಸರ ವ್ಯಕ್ತಪಡಿಸಿದ್ದರು.
First published: July 2, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories