ಶಿವಣ್ಣ-ಸುದೀಪ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ ಈ ಟಿಕ್ ಟಿಕ್​... ಹಾಡು!

news18
Updated:July 23, 2018, 2:36 PM IST
ಶಿವಣ್ಣ-ಸುದೀಪ್​ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದೆ ಈ ಟಿಕ್ ಟಿಕ್​... ಹಾಡು!
news18
Updated: July 23, 2018, 2:36 PM IST
ಆನಂದ್ ಸಾಲುಂಡಿ, ನ್ಯೂಸ್​ 18 ಕನ್ನಡ 

`ದಿ ವಿಲನ್' ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾ. ಹೀಗಾಗಿ ಈ ಸಿನಿಮಾ ಕಡೆಯಿಂದ ಏನೇ ವಿಷಯ ಹೊರ ಬಿದ್ದರೂ, ಸಿನಿಮಾ ರಸಿಕರ ಪಾಲಿಗದು ಚಳಿಗಾಲಕ್ಕೆ ಸಿಕ್ಕ ಸಿಕ್ಕ ಬಿಸಿ ಬಿಸಿ ಬೋಂಡ ಇದ್ದಂತೆ. ಈಗ 'ಟಿಕ್ ಟಿಕ್....' ಅನ್ನೋ ಹಾಡು ಬಿಡುಗಡೆಯಾಗಿದೆ.  ಜೋಗಿ ಪ್ರೇಮ್ ಅವರೇ ಸಾಹಿತ್ಯ ಬರೆದಿರೋ ಈ ಹೈ ಎನರ್ಜಿಕ್ ಹಾಡು, ಶಿವಣ್ಣ-ಸುದೀಪ್ ಅಭಿಮಾನಿಗಳನ್ನ ಹುಚ್ಚೆಬ್ಬಿಸುತ್ತಾ ಇದೆ.

ಹೀರೋಯಿಸಂ ಅನ್ನು ವಿಜೃಂಭಿಸುವುದರಲ್ಲಿ ಜೋಗಿ ಪ್ರೇಮ್ ನಿಸ್ಸೀಮರು. 'ಟಿಕ್ ಟಿಕ್...' ಹಾಡಿನಲ್ಲೂ ಅಷ್ಟೇ ಪದಗಳಲ್ಲೇ ಸಾಮ್ರಾಜ್ಯ ಕಟ್ಟಿಬಿಟ್ಟಿದ್ದಾರೆ. ಮೊದಲಿಗೆ ಸುದೀಪ್ ಅವರ ಪಾತ್ರ ಪ್ರೇಮ್ ಅವರ ಪದಕೋಟೆಯಲ್ಲಿ ರಾರಾಜಿಸುತ್ತದೆ. 'ಕೆಂಚನಳ್ಳಿ ಕೆಂಚ ಕಣಣ್ಣೋ...' ಅನ್ನೋ ಪಕ್ಕಾ ದೇಸಿಯ ಸಾಲುಗಳನ್ನ ಸುದೀಪ್‍ಗಾಗಿ ಪೋಣಿಸಲಾಗಿದೆ.

'ಧಗ ಧಗ ಧಗ...! ರಾಜರ ಹಿರಿಮಗ...!' ಈ ಸಾಲು ಶಿವಣ್ಣನಿಗಾಗಿಯೇ ಬರೆದಂತಿದ್ದು, ಈ ಹಾಡು ಸಹ ಅಬ್ಬರಿಸುತ್ತಿದೆ. ನಿನ್ನೆ  ಮೊನ್ನೆ ಬಂದವರೆಲ್ಲ ನಂಬರ್ ಒನ್ ಅಂತಾರಲ್ಲೋ ಅನ್ನೋ ಕಾಂಟ್ರವರ್ಸಿಯಲ್ ಲೈನ್ ಸಹ ಶಿವಣ್ಣನಿಗಾಗಿಯೇ ಸೇರಿಸಲಾಗಿದ್ದು, ಟಿಕ್ ಟಿಕ್ ಟಿಕ್ ಈ ಸಾಲುಗಳನ್ನ ಕೇಳುತ್ತಿದ್ದರೆ ಶಿವಭಕ್ತರಿಗೆ ಕಿಕ್ಕೋ ಕಿಕ್ಕು.ಜೋಗಿ ಪ್ರೇಮ್ ಇಬ್ಬರೂ ನಟರ ಅಭಿಮಾನಿಗಳನ್ನ ಮೆಚ್ಚಿಸೋ ಪ್ರಯತ್ನ ಮಾಡಿದ್ದು, ಅದಕ್ಕೆ ತಕ್ಕಂತೆ ಅವ್ರವ್ರ ಇಮೇಜ್‍ಗೆ ತಕ್ಕಂತೆ ಲಿರಿಕ್ ಬರೆದಿದ್ದಾರೆ.. ಇನ್ನು ಪಕ್ಕಾ ರಾ ಲಿರಿಕ್‍ಗೆ ಅಷ್ಟೇ ಖಡಕ್ ವಾಯ್ಸ್ ಮೂಲಕ ಕೈಲಾಸ್ ಖೇರ್ ಎನರ್ಜಿ ತುಂಬಿದ್ದಾರೆ...

`ದಿ ವಿಲನ್' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಿಕೊಳ್ತಾ ಇದ್ದು, ವರಮಹಾಲಕ್ಷ್ಮೀ ಹಬ್ಬದ ದಿನ ಕನ್ನಡ ಚಿತ್ರರಂಗದ ಪಾಲಿಗೆ ಮಹಾಹಬ್ಬವಾಗಿ ಬದಲಾದರೆ ಅದು ಅತಿಶಯವೇನಲ್ಲ.
Loading...

 
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ