ಯುವ ಪ್ರತಿಭೆಗಳ ಜೊತೆ 'ವೀಕೆಂಡ್'ನಲ್ಲಿ 'ಅನಂತ' ಮಸ್ತಿ..!

'ವರ್ಕ್ ಹಾರ್ಡ್ ಪಾರ್ಟಿ ಹಾರ್ಡ್' ಎನ್ನುವ ಸಂಸ್ಕೃತಿ ಸಿಲಿಕಾನ್​ ಸಿಟಿ ಬೆಂಗಳೂರಿಗೆ ಕಾಲಿಟ್ಟಿದ್ದೇ ಇಟ್ಟಿದ್ದು, ವೀಕೆಂಡ್​​​ ಯುವಕ-ಯುವತಿಯರ ಹಾಟ್​​ ಫೇವರಿಟ್​​ ಡೇ ಆಗಿಬಿಟ್ಟಿದೆ . ಈ ವೀಕೆಂಡ್ ಬರೀ ಮೋಜು ಮಸ್ತಿಗಷ್ಟೇ ಅಲ್ಲ.. ಬದುಕನ್ನೇ ಬದಲಿಸಬಲ್ಲಂತಹ ಘಟನೆಗಳಿಗೂ ಸಾಕ್ಷಿಯಾದ ಅನೇಕ ಉದಾಹರಣೆಗಳು ಕಣ್ಣಮುಂದಿವೆ.

Latha CG | news18
Updated:March 17, 2019, 3:02 PM IST
ಯುವ ಪ್ರತಿಭೆಗಳ ಜೊತೆ 'ವೀಕೆಂಡ್'ನಲ್ಲಿ 'ಅನಂತ' ಮಸ್ತಿ..!
ವೀಕೆಂಡ್​ ಚಿತ್ರದ ಪೋಸ್ಟರ್​
Latha CG | news18
Updated: March 17, 2019, 3:02 PM IST
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್​​ನಲ್ಲಿ ಹೊಸ ಪ್ರತಿಭೆಗಳು ಸಖತ್​ ಸೌಂಡ್​ ಮಾಡುತ್ತಿದೆ. ಒಂದಕ್ಕಿಂತ ಒಂದು ವಿಭಿನ್ನ, ಚಂದಕ್ಕಿಂತ ಚಂದದ ಚಿತ್ರಗಳನ್ನು ಕನ್ನಡ ಸಿನಿ ರಸಿಕರಿಗೆ ಉಣಬಡಿಸುತ್ತಿವೆ. ಈ ಸಾಲಿಗೆ ಸೇರುವಂತಹ ಹೊಸ ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೇ ಸಿದ್ಧವಾಗಿದೆ. ಈ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯೂ ಅನುಮತಿ ನೀಡಿದೆ. ಚಿತ್ರ ನೋಡಿದ ಸೆನ್ಸಾರ್‌ ಮಂಡಳಿ ಯಾವುದೇ ಕಟ್ಸ್‌, ಮ್ಯೂಟ್‌ ಇಲ್ಲದೆ ಯು/ಎ ಪ್ರಮಾಣ ಪತ್ರ ಕೊಟ್ಟಿದೆ.

ವೀಕೆಂಡ್​ ಧಮಾಕಾ..!

'ವರ್ಕ್ ಹಾರ್ಡ್ ಪಾರ್ಟಿ ಹಾರ್ಡ್' ಎನ್ನುವ ಸಂಸ್ಕೃತಿ ಸಿಲಿಕಾನ್​ ಸಿಟಿ ಬೆಂಗಳೂರಿಗೆ ಕಾಲಿಟ್ಟಿದ್ದೇ ಇಟ್ಟಿದ್ದು, ವೀಕೆಂಡ್​​​ ಯುವಕ-ಯುವತಿಯರ ಹಾಟ್​​ ಫೇವರಿಟ್​​ ಡೇ ಆಗಿಬಿಟ್ಟಿದೆ . ಈ ವೀಕೆಂಡ್ ಬರೀ ಮೋಜು ಮಸ್ತಿಗಷ್ಟೇ ಅಲ್ಲ.. ಬದುಕನ್ನೇ ಬದಲಿಸಬಲ್ಲಂತಹ ಘಟನೆಗಳಿಗೂ ಸಾಕ್ಷಿಯಾದ ಅನೇಕ ಉದಾಹರಣೆಗಳು ಕಣ್ಣಮುಂದಿವೆ.

ಪೈಲ್ವಾನ್ ನಿರ್ದೇಶಕರಿಗೆ ಹೊಸ ಚಾಲೆಂಜ್​ ಹಾಕಿದ ಕಿಚ್ಚ ಸುದೀಪ್..!

ಇಂತಹ ವಿಭಿನ್ನ ಕಥಾ ಹಂದರವನ್ನು ಇಟ್ಟುಕೊಂಡು ನಿರ್ದೇಶಕ ಶೃಂಗೇರಿ ಸುರೇಶ್​​ 'ವೀಕೆಂಡ್​​' ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಫ್ಯಾಮಿಲಿ ಡ್ರಾಮಾ ಹಾಗೂ ಸಸ್ಪೆನ್ಸ್​​​ ಥ್ರಿಲ್ಲರ್​​ ಕಥಾ ಹಂದರದ ವಿಶೇಷ ಕಾಂಬಿನೇಷನ್​ ಆಗಿದೆ. ಮಯೂರ ಮೋಷನ್​ ಪಿಕ್ಚರ್ಸ್​​​ ಬ್ಯಾನರ್​​​ನಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಮಂಜುನಾಥ್.ಡಿ. ನಿರ್ಮಿಸಿದ್ದಾರೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ಅನಂತ್​ನಾಗ್​ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್ ನಾಯಕನಾಗಿ​​​, ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮತ್ತೊಂದು ಯುವ ಪ್ರತಿಭೆ, ಶ್ರೀಲಂಕಾ ಮೂಲದ ಮನೋಜ್​ ಎಸ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ​
Loading...

First published:March 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626