ಧನುಷ್ ಹೊಸಾ ಹಾಡು 'ಕೊಲವೆರಿ ಡಿ' ರೀತಿಯಲ್ಲೇ ಸಖತ್ ವೈರಲ್ ಆಗ್ತಿದೆ...ನೀವು ನೋಡಿದ್ದೀರಾ?

ಅಕ್ಷಯ್ ಮತ್ತು ಧನುಷ್ ಅವರ ಡ್ಯಾನ್ಸ್ ಮಾತ್ರ ನೋಡಲೇ ಬೇಕಾದದ್ದು ಆಗಿದೆ. ಡೋಲ್ ಬೀಟ್‌ಗಳನ್ನು ಹೊರತುಪಡಿಸಿದರೆ, ಇದು ತುಂಬಾ ದೇಸಿ ಭಾವನೆ ನೀಡುತ್ತದೆ. ಈ ಹಾಡಿನ ಸಂಗೀತ ನಿರ್ದೇಶವನ್ನು ಎ. ಆರ್. ರೆಹಮಾನ್ ಮಾಡಿದ್ದಾರೆ.

ಹಾಡಿನಲ್ಲಿ ಧನುಷ್-ಅಕ್ಷಯ್ ಡ್ಯಾನ್ಸ್

ಹಾಡಿನಲ್ಲಿ ಧನುಷ್-ಅಕ್ಷಯ್ ಡ್ಯಾನ್ಸ್

  • Share this:
ಬಹು ನಿರೀಕ್ಷಿತ ಹಿಂದಿ ಚಲನಚಿತ್ರ ಎಂದರೆ ಸದ್ಯಕ್ಕೆ ಅದು ತಮಿಳು ನಟ ಧನುಷ್ (Dhanush), ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಮತ್ತು ನಟ ಅಕ್ಷಯ್ ಕುಮಾರ್ (Akshay Kumar) ಅಭಿನಯದ ‘ಅತ್ರಂಗಿ ರೇ’ (Atrangi Re) ಚಿತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಮೂವರು ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳು ಈ ಚಿತ್ರ ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು. ಈ ಚಿತ್ರವು ಇದೇ ಡಿಸೆಂಬರ್ 24ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ (Disney Plus Hotstar) ಪ್ರದರ್ಶನಗೊಳ್ಳಲಿದೆ ಎಂದು ಚಿತ್ರತಂಡವು ಈಗಾಗಲೇ ಹೇಳಿಕೊಂಡಿದೆ. ಇತ್ತೀಚೆಗೆ ಈ ಚಿತ್ರದ ಮತ್ತೊಂದು ಹಾಡು ‘ಲಿಟಲ್ ಲಿಟಲ್’ (Little Little) ಅನ್ನು ಬಿಡುಗಡೆ ಮಾಡಿದ್ದಾರೆ. ಏನಪ್ಪಾ ಈ ಹಾಡಿನ ವಿಶೇಷತೆ ಅಂತೀರಾ? ವಿಶೇಷತೆ ಇರದೇ ಇದ್ದರೆ ನಾವು ಅದರ ಬಗ್ಗೆ ಇಲ್ಲಿ ಮಾತಾಡುತ್ತೇವೆಯೇ? ಈ ಹಾಡು ಇಡೀ ವಿಶ್ವಾದ್ಯಂತ ಫೇಮಸ್ ಆದ ತಮಿಳು ಹಾಡು 'ಕೊಲವೆರಿ ಡಿ' (Kolaveri D) ಹಾಡನ್ನು ನೆನಪಿಸುವಂತಿದೆ ಎಂದು ಹೇಳಲಾಗುತ್ತಿದೆ.

ಈ ‘ಲಿಟಲ್ ಲಿಟಲ್’ ಎಂಬ ಶೀರ್ಷಿಕೆಯ ಹಾಡು ‘ಅತ್ರಂಗಿ ರೇ’ ಚಿತ್ರ ತಂಡವು ಬಿಡುಗಡೆ ಮಾಡಿದೆ, ಇದು "ವೈ ದಿಸ್ ಕೊಲವೆರಿ ಡಿ" ವೈಬ್ ಹೊಂದಿದೆ ಎಂದು ಹೇಳಲಾಗುತ್ತಿದೆ. ನಟಿ ಸಾರಾ ಅಲಿ ಖಾನ್ ಈ ಚಿತ್ರದಲ್ಲಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಾಗ ಧನುಷ್ ಹೇಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ ನೀವು ನೋಡಲೇ ಬೇಕು. ಇಷ್ಟೇ ಅಲ್ಲದೆ ಇದರ ಸಾಹಿತ್ಯವು ನಮಗೆ ದೇಜಾವು ಸಾಹಿತ್ಯದ ನೆನಪು ಮಾಡಿಸಿದರೂ ಸಹ ಈ ಹಾಡಿಗೆ ಬೇರೆಯದ್ದೇ ಮೂಲ ರಾಗವಿದೆ ಎಂದು ಹೇಳಲಾಗುತ್ತಿದೆ.

ಟರ್ನಿಂಗ್ ಪಾಯಿಂಟ್​ನಲ್ಲಿ ಬರುತ್ತೆ ಈ ಹಾಡು

ಈ ಹಾಡು ಚಲನಚಿತ್ರದ ಯಾವ ಸಂದರ್ಭದಲ್ಲಿ ಬರುತ್ತದೆ ಎಂದು ಸುಳಿವು ನೀಡಿದ್ದು, ಅಲ್ಲಿ ವಿಶುವಿನ ಪಾತ್ರದಲ್ಲಿ ಕಾಣಿಸಿಕೊಂಡ ಧನುಷ್ ಅವಳ ನಿಜವಾದ ಆಸೆಗಳನ್ನು ತಿಳಿದಿದ್ದರೂ ಸಹ ರಿಂಕುವಿನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಾರಾ ಅಲಿ ಖಾನ್‌ರನ್ನು ಪ್ರೀತಿಸಲು ಪ್ರಾರಂಭಿಸಿರುತ್ತಾರೆ. ಹಾಡಿನ ವಿಡಿಯೋ ನೀವೂ ನೋಡಿ:ಈ ವಿಡಿಯೋದಲ್ಲಿ ರಿಂಕು ಗಮನ ಸೆಳೆಯಲು ಮತ್ತು ಮನವೊಲಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ. ನಟ ಅಕ್ಷಯ್ ಕುಮಾರ್  ಸಹ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಮತ್ತು ಧನುಷ್ ಅವರ ಡ್ಯಾನ್ಸ್ ಮಾತ್ರ ನೋಡಲೇ ಬೇಕಾದದ್ದು ಆಗಿದೆ. ಡೋಲ್ ಬೀಟ್‌ಗಳನ್ನು ಹೊರತುಪಡಿಸಿದರೆ, ಇದು ತುಂಬಾ ದೇಸಿ ಭಾವನೆ ನೀಡುತ್ತದೆ. ಈ ಹಾಡಿನ ಸಂಗೀತ ನಿರ್ದೇಶವನ್ನು ಎ. ಆರ್. ರೆಹಮಾನ್ ಮಾಡಿದ್ದಾರೆ.

ಇದನ್ನೂ ಓದಿ: Atrangi Re Trailer: ಒಬ್ಬ ಸಾಲಲ್ಲ, ಇಬ್ಬರೂ ಬೇಕು ಎನ್ನುತ್ತಿರುವ Sara Ali Khan, ಬಾಲಿವುಡ್​​ನಲ್ಲಿ Dhanush ಮೋಡಿ!

ತ್ರಿಕೋನ ಪ್ರೇಮ ಕತೆಯಲ್ಲಿ ಟ್ವಿಸ್ಟ್

ಈ ಚಿತ್ರದ ಕಥೆಯು ಒಬ್ಬ ತಮಿಳು ಹುಡುಗ ಬಿಹಾರದ ಹುಡುಗಿಯನ್ನು ಭೇಟಿ ಮಾಡುತ್ತಾನೆ, ಮುಂದಿನದು ಯುಗ ಯುಗಗಳ ಪ್ರೇಮಕಥೆ ಆಗಿದ್ದು, ವಿಭಿನ್ನ ಕಾಲಘಟ್ಟಗಳಲ್ಲಿ ಸಮಾನಾಂತರವಾಗಿ ನಡೆಯುವ 2 ಪ್ರೇಮ ಕಥೆಗಳನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. ಆನಂದ್ ಎಲ್ ರೈ (Anand L Rai) ನಿರ್ದೇಶನದ ಈ ಚಿತ್ರದ ಮೊದಲ ಹಾಡು ‘ಚಕ ಚಕ್’ ಕಳೆದ ತಿಂಗಳು ಬಿಡುಗಡೆಯಾಗಿತ್ತು ಮತ್ತು ಅದರಲ್ಲಿ ನಟಿ ಸಾರಾ ಅದ್ಭುತವಾಗಿ ಡ್ಯಾನ್ಸ್‌ ಮಾಡಿದ್ದರು.
Published by:Soumya KN
First published: