ಡಿ.13 ರಿಂದ ಜೀ ಕನ್ನಡದಲ್ಲಿ `ಪುಟ್ಟಕ್ಕನ ಮಕ್ಕಳು’ ಟೆಲಿಕಾಸ್ಟ್​​: ಇನ್ಮುಂದೆ ಕಿರುತೆರೆಯಲ್ಲಿ ಪುಟ್ಮಲ್ಲಿ ಕಮಾಲ್​!

ಡಿಸೆಂಬರ್ 13 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ 'ಪುಟ್ಟಕ್ಕನ ಮಕ್ಕಳು' ಪ್ರಸಾರವಾಗಲಿದೆ.ಮಾಜಿ ಸಚಿವೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ(Umashree) ಪ್ರಮುಖ ಪಾತ್ರದಲ್ಲಿ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿ

  • Share this:
ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿರುವ ಕರ್ನಾಟಕದ ನಂಬರ್ 1 ವಾಹಿನಿ ಜೀ ಕನ್ನಡ(Zee Kannada) ಈಗ ‘ಪುಟ್ಟಕ್ಕನ ಮಕ್ಕಳು’(Puttakkana Makkalu) ಎಂಬ ವಿನೂತನ ಮೆಗಾ ಧಾರಾವಾಹಿ(Serial)ಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಡಿಸೆಂಬರ್ 13 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ 'ಪುಟ್ಟಕ್ಕನ ಮಕ್ಕಳು' ಪ್ರಸಾರವಾಗಲಿದೆ.ಮಾಜಿ ಸಚಿವೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಉಮಾಶ್ರೀ(Umashree) ಪ್ರಮುಖ ಪಾತ್ರದಲ್ಲಿ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಕಲಾವಿದೆ ಉಮಾಶ್ರೀ ಅಭಿನಯ ವೀಕ್ಷಕರಿಗೆ ಥ್ರಿಲ್ ನೀಡಲಿದೆ. ಪುಟ್ಟಕ್ಕನ ಪಾತ್ರದಲ್ಲಿ ಅವರು ಮೂರು ಹೆಣ್ಣು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ. `ಜೊತೆ ಜೊತೆಯಲಿ’(Jothe Jotheyali) ಸೀರಿಯಲ್​ಗೆ ನಿರ್ದೇಶನ ಮಾಡಿ ಜನಮೆಚ್ಚುಗೆ ಗಳಿಸಿರುವ ಆರೂರು ಜಗದೀಶ್​ ಅವರು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಅನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅನುಭವಿ ಕಲಾವಿದೆ ಉಮಾಶ್ರೀ ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದಾ ಹೊಸಪೇಟೆ, ಹೊಸ ಕಲಾವಿದರಾದ ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅಭಿನಯಿಸಿದ್ದಾರೆ.

ಪುಟ್ಟಕ್ಕನ ಕಥೆಯೇ ರೋಚಕ!

ಮಂಡ್ಯ ಜಿಲ್ಲೆ ದೇವಿಪುರ ಎನ್ನುವ ಊರಿನಲ್ಲಿ ನಡೆಯುವ ಕತೆ ಇದು. ಪುಟ್ಟಕ್ಕನಿಗೆ ಜೀವನಾಧಾರ ಆಕೆ ನಡೆಸುವ ಮೆಸ್. ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಆಕೆಯ ಗಂಡ ಪುಟ್ಟಕ್ಕನನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗಿರುತ್ತಾನೆ. ಸಹನ, ಸ್ನೇಹ ಮತ್ತು ಸುಮ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ. ಅವರೇ ಆಕೆಯ ಬದುಕು. ಎರಡನೇ ಮಗಳು ಸ್ನೇಹ ಐ.ಎ.ಎಸ್. ಅಧಿಕಾರಿಯಾಗಿ ತನ್ನ ಅಮ್ಮ ಪುಟ್ಟಕ್ಕನ ಘನತೆಯನ್ನು ಹೆಚ್ಚಿಸಬೇಕು ಅನ್ನೋ ಮಹತ್ವಾಕಾಂಕ್ಷೆ ಹೊಂದಿರುತ್ತಾಳೆ.

ಇದನ್ನು ಓದಿ : ಡಿ.9ಕ್ಕೆ ರಾಜ್ಯದ 30 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ RRR ಟ್ರೈಲರ್​ ಬಿಡುಗಡೆ: ಥಿಯೇಟರ್​ಗಳ​​ ಲಿಸ್ಟ್​ ಇಲ್ಲಿದೆ!

ಮೂರು ಮಕ್ಕಳ್ಳ ಜವಾಬ್ದಾರಿ ಪುಟ್ಟಕ್ಕನ ಮೇಲೆ!

ಪುಟ್ಟಕ್ಕನ ಗಂಡ ತನ್ನ ಎರಡನೇ ಹೆಂಡತಿ ರಾಜೇಶ್ವರಿ ಕೈಗೊಂಬೆ. ಪಕ್ಕದೂರಿನಲ್ಲಿ ಬಡ್ಡಿ ವಸೂಲಿ ಮಾಡುವ ನಾಯಕ ಕಂಠಿ, ಅವನ ಅಮ್ಮ ಬಡ್ಡಿ ಬಂಗಾರಮ್ಮನ ಹೆಸರು ಕೇಳಿದರೆ ಸುತ್ತಲಿನ ಹತ್ತೂರಿನ ಜನ ಹೆದರುತ್ತಾರೆ. ಪುಟ್ಟಕ್ಕನ ಮಗಳು ಸ್ನೇಹ ಬದುಕಿನಲ್ಲಿ ಕಂಠಿ ಪ್ರವೇಶಿಸುವುದು ಈ ಕತೆಯ ಇನ್ನೊಂದು ಪ್ರಮುಖ ತಿರುವು. ಉಮಾಶ್ರೀ ಅವರಲ್ಲದೆ, ಹೆಸರಾಂತ ಕಲಾವಿದರಾದ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದ ಹೊಸಪೇಟೆ, ಹೊಸ ಕಲಾವಿದರಾದ ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್, ಹಾಗೇ ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಂಜೇದ್ರ ಅಭಿನಯಿಸಿದ್ದಾರೆ.

ಇದನ್ನು ಓದಿ : ಮಾಡೆಲಿಂಗ್‌ ಜಗತ್ತಿಗೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ: ಸಾರಾ ಆ್ಯಡ್​ ವಿಡಿಯೋ ನೋಡಿ..

ಆರೂರು ಜಗದೀಶ್​ ನಿರ್ದೇಶನ ಧಾರಾವಾಹಿ!

' ಜೊತೆ ಜೊತೆಯಲಿ' ಖ್ಯಾತಿಯ ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದು, ಜೆಎಸ್ ಪ್ರೊಡಕ್ಷನ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ಸಹನಿರ್ಮಾಪಕರಾಗಿ ಪ್ರದೀಪ್ ಆಜ್ರಿ ಮತ್ತು ಪರೀಕ್ಷಿತ್ ಎಂ.ಎಸ್ ಕೈಜೋಡಿಸಿದ್ದಾರೆ. ಜೀ ಕನ್ನಡ ತಂಡದ ಕತೆಗೆ ಸತ್ಯಕಿ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆ ಈಗಾಗಲೇ ಜನಪ್ರಿಯವಾಗಿದೆ. ಹರ್ಷಪ್ರಿಯ ಅವರ ಸಾಹಿತ್ಯಕ್ಕೆ, ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ರಾಗಸಂಯೋಜನೆ ಮಾಡಿದ್ದು, ಪಂಚಮ ಜೀವ ಹಾಡಿದ್ದಾರೆ.
Published by:Vasudeva M
First published: