Olavina Nildana: ಮಲೆನಾಡಿನ ಮಧುರ ಪ್ರೇಮಕಥೆ, ಶೀಘ್ರದಲ್ಲಿ ಬರ್ತಿದೆ ಒಲವಿನ ನಿಲ್ದಾಣ!

Colors Kannada: ಈ ಬಗ್ಗೆ ಮಾತನಾಡಿದ ಧಾರಾವಾಹಿ ನಿರ್ದೇಶಕ ರಮೇಶ್​ ಇಂದಿರಾ ಮಲೆನಾಡಿನ ಹುಡುಗಿ ಹಾಗೂ ಬೆಂಗಳೂರು ಹುಡುಗನ ಸುಂದರ ಪ್ರೇಮಕಥೆ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
ಕಲರ್ಸ್ ಕನ್ನಡ (Colors Kannada) ವಾಹಿನಿಯು ಸದಾ ಹೊಸ ಹೊಸ ಧಾರಾವಾಹಿಗಳ (Serial) ಮೂಲಕ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಸಂಜೆ ಗಂಟೆ 5 ರಿಂದ ರಾತ್ರಿ  10 ಗಂಟೆಯ ತನಕ ಉತ್ತಮ ಕಥೆಯನ್ನೊಳಗೊಂಡ ಧಾರಾವಾಹಿಗಳು ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಇದೀಗ ಪ್ರೇಕ್ಷಕರನ್ನು ಮನರಂಜಿಸಲು ಹೊಸದೊಂದು ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಅದೇ ಒಲವಿನ ನಿಲ್ದಾಣ (Olavina Nildana) .  

ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿದ ಖ್ಯಾತ ನಿರ್ದೇಶಕಿ ಶ್ರುತಿ ನಾಯ್ಡು ಅವರ ಶ್ರುತಿ ನಾಯ್ಡು ಚಿತ್ರ​ ಅಡಿಯಲ್ಲಿ ರಮೇಶ್​ ಇಂದಿರಾ ಈ ಧಾರಾವಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದು, ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಈ ಧಾರಾವಾಹಿಯಲ್ಲಿ ಹಿರಿಯ ನಟರಾದ ಮಂಡ್ಯ ರಮೇಶ್​, ಅಶೋಕ್, ಪ್ರಥಮಾ ಪ್ರಸಾದ್ ಸೇರಿದಂತೆ ಅನೇಕ ಅದ್ಭುತ ಕಲಾವಿದರಿದ್ದಾರೆ. ಇನ್ನು ನಾಯಕ ಹಾಗೂ ನಾಯಕಿ ಕಿರುತೆರೆಗೆ ಹೊಸ ಮುಖವಾಗಿದ್ದು, ಪ್ರೋಮೋಗಳು ಈಗಾಗಲೇ ಬಹಳ ಸುದ್ದಿ ಮಾಡಿದೆ. ಇನ್ನು ಈ ಧಾರಾವಾಹಿಯ ಲಾಂಚಿಂಗ್ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಮೇಶ್​ ಇಂದಿರಾ, ನಟ ಮಂಡ್ಯ ರಮೇಶ್​ ಸೇರಿದಂತೆ ಉಳಿದವರು ಧಾರವಾಹಿಯ ಬಗ್ಗೆ ಮಾಹಿತಿ ನೀಡಿದ್ದಾರೆ.



ಮಲೆನಾಡಿನ ಮಧುರ ಪ್ರೇಮಕಥೆ

ಈ ಬಗ್ಗೆ ಮಾತನಾಡಿದ ಧಾರಾವಾಹಿ ನಿರ್ದೇಶಕ ರಮೇಶ್​ ಇಂದಿರಾ ಮಲೆನಾಡಿನ ಹುಡುಗಿ ಹಾಗೂ ಬೆಂಗಳೂರು ಹುಡುಗನ ಸುಂದರ ಪ್ರೇಮಕಥೆ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಲ್ಲದೇ ಕಲರ್ಸ್​ ಕನ್ನಡ ಜೊತೆ ಶ್ರುತಿ ನಾಯ್ಡು ಚಿತ್ರದ  ಮೊದಲ ಧಾರಾವಾಹಿ ಇದಾಗಿದ್ದು, ಜನರಿಗೆ ಹೊಸ ರೀತಿಯ ಕಥೆಯನ್ನು ನೀಡಲು ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ. ಇನ್ನು ರಮೇಶ್​ ಇಂದಿರಾ ನಿರ್ದೇಶಿಸುತ್ತಿರುವ ಪ್ರೀತಿ, ಪ್ರೇಮ ಆಧಾರಿತ ಧಾರಾವಾಹಿ ಇದೇ ಮೊದಲನೆಯದಾಗಿದೆ. ಈ ಮೊದಲು ಅವರು ನಿರ್ದೇಶನ ಮಾಡಿದ 2 ಧಾರಾವಾಹಿಗಳು ಪೌರಾಣಿಕವಾಗಿತ್ತು. ಹಾಗಾಗಿ ಇದೊಂದು ವಿಭಿನ್ನ ಅನುಭವ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಈ ಧಾರಾವಾಹಿಗೆ ಪ್ರೀತಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹಣ ಕೊಟ್ರೆ ಬೇಗ ಫೇಮಸ್​ ಆಗ್ಬೋದು, ಹಿಂಗ್ಯಾಕಂದ್ರು ಸಂಯುಕ್ತಾ ಹೆಗ್ಡೆ?

ಇದು ವಿಭಿನ್ನ ರೀತಿಯ ಕಥೆ

ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ನಟ ಮಂಡ್ಯ ರಮೇಶ್​ ಮಾತನಾಡಿ, ಶ್ರುತಿ ನಾಯ್ಡು ಜೊತೆ ನನ್ನ ಒಡನಾಟ ಬಹಳ ಹಳೆಯದು, ಅವರ ಧಾರಾವಾಹಿಯಲ್ಲಿ ಅಭಿನಯಿಸುವುದು ಬಹಳ ಖುಷಿಯ ವಿಚಾರ. ಹಾಗೆಯೇ ಈ ಧಾರಾವಾಹಿಯ ಕಥೆ ಕೂಡ ವಿಭಿನ್ನವಾಗಿದ್ದು ಮಲೆನಾಡಿನ ಜೊತೆ ಬೆಂಗಳೂರಿನ ನಡುವಿನ ಸುಂದರ ಕಥೆ ಇದು. ಹಾಗೆಯೇ ಪ್ರೇಕ್ಷಕರಿಗೆ ಒಲವಿನ ನಿಲ್ದಾಣವನ್ನು ಕಲ್ಪಿಸುವ ಕಥೆಯಾಗಿದ್ದು, ಕಥೆ ಹೇಳುವ ಪರಿ ಸೊಗಸಾಗಿದೆ ಎಂದಿದ್ದಾರೆ. ಅಲ್ಲದೇ ಈ ಧಾರಾವಾಹಿಯಲ್ಲಿ ನನ್ನ ಪಾತ್ರ ಪ್ರಾಕ್ಟಿಕಲ್ ಆಗಿದ್ದು, ಉತ್ತಮ ಟೆಂಪೋ ಇರುವ ಸೀರಿಯಲ್ ಇದು ಎಂದು ತಿಳಿಸಿದ್ದಾರೆ.

ಮತ್ತೊಂದು ಪ್ರಮುಖ ಪಾತ್ರದಲ್ಲಿ ಪ್ರಥಮಾ ಪ್ರಸಾದ್​

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಕೂಡ ಈ ಸೀರಿಯಲ್​ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ತಾರಿಣಿ (ಅಮಿತಾ) ಬದುಕಿನಲ್ಲಿ ಸಹ ಬಹಳ ಮುಖ್ಯವಾದ ಪಾತ್ರ ಇದಾಗಿದೆ. ತಮ್ಮ ಪಾತ್ರದ ಬಗ್ಗೆ ವಿವರಣೆ ಕೊಟ್ಟ ನಟಿ, ನಾಯಕಿ ಹಾಗೂ ನನ್ನ ನಡುವಿನ ಸಂಬಂಧ ಬಹಳ ಮುಖ್ಯವಾದ್ದು, ಆಕೆಯ ಅತ್ತೆಯಾದರೂ ಸಹ ಅವಳ ಬದುಕಿನ ಪ್ರತಿ ವಿಚಾರ ನನಗೆ ತಿಳಿದಿರುತ್ತದೆ. ನಾಯಕಿಗೆ ಬಹಳ ಕ್ಲೋಸ್​ ಇರುವ ಪಾತ್ರ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ರೇಜಿಸ್ಟಾರ್ ರಿಮೇಕ್​ ಮಾಡಿದ ಸಿನಿಮಾಗಳಿವು, ಯಾವ್ ಸಿನ್ಮಾ ಸೂಪರ್ ಹಿಟ್​ ಆಗಿತ್ತು?

ನಾಯಕ, ನಾಯಕಿಗೆ ಮೊದಲ ಧಾರಾವಾಹಿ

ಈ ಧಾರಾವಾಹಿಯ ನಾಯಕಿಯ ಪಾತ್ರದಲ್ಲಿ ಮಂಗಳೂರಿನ ಅಮಿತಾ ಕುಲಾಲ್ ನಟಿಸುತ್ತಿದ್ದು, ನಾಯಕನಾಗಿ ಮಂಡ್ಯದ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಇದು ಮೊದಲ ಧಾರಾವಾಹಿಯಾಗಿದೆ ನಾಯಕಿ ಈ ಮೊದಲು ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದರು, ನಾಯಕ ಕೂಡ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ಆದರೆ ನಾಯಕ ಹಾಗೂ ನಾಯಕಿಯಾಗಿ ಮೊದಲ ಬಾರಿಗೆ ಈ ಧಾರಾವಾಹಿ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.  ಇನ್ನು ಸುಮಾರು ವರ್ಷಗಳ ನಂತರ ಹಿರಿಯ ನಟ ಅಶೋಕ್ ಕೂಡ ಮರಳಿ ಕಿರುತೆರೆಗೆ ಬರುತ್ತಿದ್ದು, ಇದೇ ಜುಲೈ 11 ರಿಂದ ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
Published by:Sandhya M
First published: