Web Series: 5 ಜನಪ್ರಿಯ ವೆಬ್ ಸರಣಿಗಳ ಹೊಸ ಸೀಸನ್.. ಈ ವರ್ಷವೇ OTTಯಲ್ಲಿ 'ದೆಹಲಿ ಕ್ರೈಂ', 'ದಿ ಫ್ಯಾಮಿಲಿ ಮ್ಯಾನ್'!

`ಸ್ಕ್ಯಾಮ್’, `ದೆಹಲಿ ಕ್ರೈಮ್’, `ದಿ ಫ್ಯಾಮಿಲಿ ಮ್ಯಾನ್’, 'ಮೇಡ್ ಇನ್ ಹೆವೆನ್' ಹಾಗೂ `ಅಸುರ’ ವೆಬ್ ಸರಣಿಯ ಹೊಸ ಸೀಸನ್ ರೆಡಿಯಾಗ್ತಿದ್ದು ಈ ವರ್ಷವೇ ಬಿಡುಗಡೆಯಾಗಲಿದೆ.

`ದಿ ಫ್ಯಾಮಿಲಿ ಮ್ಯಾನ್’ ಪೋಸ್ಟರ್​

`ದಿ ಫ್ಯಾಮಿಲಿ ಮ್ಯಾನ್’ ಪೋಸ್ಟರ್​

  • Share this:
ಭಾರತದ ಮನರಂಜನ ಕ್ಷೇತ್ರದಲ್ಲಿ ಒಟಿಟಿ ಫ್ಲಾಟ್ ಫಾರ್ಮ್ ಗಳಂತು ಸಿನಿಪ್ರಿಯರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ವಿಶ್ವದ ಪ್ರಮುಖ ಒಟಿಟಿ ಫ್ಲಾಟ್​ಫಾರ್ಮ್ ಗಳಾದ ನೆಟ್ ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್(Amazon prime),ಡಿಸ್ನಿ ಹಾಟ್ ಸ್ಟಾರ್ (Disney hotstar), ಸೋನಿ ಲೈವ್(Sony Live)ಗಳು ದೇಶಿಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರ ಹಾಗೂ ವೆಬ್ ಸೀರಿಸ್ ಗಳನ್ನು ವೀಕ್ಷಕರ ಮುಂದಿಡುತ್ತಿದೆ. ಈಗಾಗಲೇ ಜನಪ್ರಿಯವಾಗಿರೋ 5 ವೆಬ್ ಸೀರಿಸ್(Web series) ಗಳು ಮತ್ತೆ ಹೊಸ ಸೀಸನ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ.‘ದೆಹಲಿ ಕ್ರೈಮ್’, ‘ದಿ ಫ್ಯಾಮಿಲಿ ಮ್ಯಾನ್’, ‘ಸ್ಕ್ಯಾಮ್’ ಸೇರಿದಂತೆ 5 ವೆಬ್ ಸರಣಿಗಳು ಇನ್ನೇನು ಕೆಲವೇ ತಿಂಗಳಲ್ಲಿ ಜನರ ಮುಂದೆ ಬರಲಿದೆ.

‘ಸ್ಕ್ಯಾಮ್ 2003’

‘ಸ್ಕ್ಯಾಮ್ 1992’ ಸೂಪರ್ ಸಕ್ಸಸ್ ಕಂಡ ವೆಬ್ ಸರಣಿಯಾಗಿದೆ. ಹನ್ಸಲ್ ಮೆಹ್ತಾ ಅವರ ಸ್ಕ್ಯಾಮ್ 1992 ವೆಬ್ ಸರಣಿಯಲ್ಲಿ ಪ್ರತೀಕ್ ಗಾಂಧಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಹನ್ಸಲ್ ಮೆಹ್ತಾ ಅವರು ತನ್ನ ವೆಬ್ ಸರಣಿಯ 2ನೇ ಸೀಸನ್ ನನ್ನು ಘೋಷಿಸಿದ್ದಾರೆ. ‘ಸ್ಕ್ಯಾಮ್ 2003 ದಿ ಕ್ಯೂರಿಯಸ್ ಕೇಸ್ ಆಫ್ ಅಬ್ದುಲ್ ಕರೀಮ್ ತೆಲಗಿ' ವೆಬ್ ಸರಣಿ ಒಟಿಟಿಗೆ ಬರಲು ರೆಡಿಯಾಗ್ತಿದೆ.ಈ ವೆಬ್ ಸರಣಿಯು 20,000 ಕೋಟಿ ರೂಪಾಯಿ ಮೊತ್ತದ ಕಾಗದ ಹಗರಣದಲ್ಲಿ ಭಾಗಿಯಾಗಿರೋ ಅಬ್ದುಲ್ ಕರೀಂ ತೆಲಗಿಯ ಕಥೆ ಎಂದು ಮೆಹ್ತಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದು ಅತ್ಯಂತ ಸವಾಲಿನ ಕಥೆಯಾಗಿದ್ದು, ರೋಚಕವಾಗಿ ನಿರ್ಮಾಣ ಮಾಡಲು ಹೆಚ್ಚು ಶ್ರಮಿಸುತ್ತಿದ್ದೇವೆ ಅಂತ ಟ್ವೀಟ್ ಮಾಡಿದ್ದಾರೆ.

‘ದೆಹಲಿ ಕ್ರೈಮ್’

ದೆಹಲಿ ಕ್ರೈಮ್ ನಿರ್ಭಯಾ ಪ್ರಕರಣ ಆಧರಿಸಿ ಮಾಡಿದ ವೆಬ್ ಸೀರಿಸ್. ಇದರಲ್ಲಿ ಶೆಫಾಲಿ ಶಾ, ರಸಿಕಾ ದುಗಲ್ ಮತ್ತು ರಾಜೇಶ್ ತೈಲಾಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ರು. ನಟರ ಅದ್ಭುತ ಅಭಿನಯಕ್ಕಾಗಿ ಅಪಾರ ಪ್ರಶಂಸೆ ಕೇಳಿ ಬಂದಿತ್ತು. ಇದೀಗ ದೆಹಲಿ ‘ಕ್ರೈಮ್ ಸೀಸನ್ 2’ ಬರ್ತಿದೆ. 2ನೇ ಸೀಸನ್ ನಿಥಾರಿ ಸರಣಿ ಕೊಲೆಯನ್ನು ಆಧರಿಸಿದೆಯಂತೆ. ‘ಮತ್ತಷ್ಟು ಅಹಿತಕರ ಸತ್ಯಗಳೊಂದಿಗೆ ಹಿಂತಿರುಗುತ್ತಿದ್ದೇವೆ’ ಅಂತ ವೆಬ್ ಸೀರಿಸ್ ಮೇಕರ್ ರಸಿಕಾ ಬರೆದುಕೊಂಡಿದ್ದಾರೆ.

ಇದನ್ನು ಓದಿ : ಈ ವಾರವೂ ಸಿನಿರಸಿಕರಿಗೆ ಭರ್ಜರಿ ರಸದೌತಣ...ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ ಮಾರ್ವೆಲ್ಸ್​ನ `ಎಟರ್ನಲ್ಸ್​’ ಸಿನಿಮಾ!

‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’

ಎರಡು ಯಶಸ್ವಿ ಸೀಸನ್‌ಗಳ ನೀಡಿರೋ ಮನೋಜ್ ಬಾಜಪೇಯಿ ಅವರ 'ದಿ ಫ್ಯಾಮಿಲಿ ಮ್ಯಾನ್' 3ನೇ ಸೀಸನ್‌ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಸೀಸನ್ ನ ಮೂರನೇ ಕಂತನ್ನು ನಟ ಘೋಷಿಸಿದ್ದರು. ಸೀಸನ್ 3 ರ ಸ್ಕ್ರಿಪ್ಟ್ ಸಿದ್ಧವಾಗಿದೆ. ವೆಬ್ ಸೀರಿಸ್ ಬಿಡುಗಡೆ ಮಾಡಲು ಒಂದೂವರೆ ವರ್ಷ ತೆಗೆದುಕೊಳ್ಳಬಹುದು ಅಂತ ಮನೋಜ್ ಬಾಜಪೇಯಿ ಹೇಳಿದ್ದರು. ಆದ್ದರಿಂದ, ಫ್ಯಾಮಿಲಿ ಮ್ಯಾನ್ ಸೀಸನ್ 3 2022ರ ಅಂತ್ಯಕ್ಕೆ ನಿರೀಕ್ಷಿಸಬಹುದಾಗಿದೆ.

'ಮೇಡ್ ಇನ್ ಹೆವೆನ್' ಸೀಸನ್ 2

ಮೇಡ್ ಇನ್ ಹೆವೆನ್ ಸೀಸನ್ ನೋಡಿದ ಪ್ರೇಕ್ಷಕರು ಸೀಸನ್ 2ಗಾಗಿ ಬೇಡಿಕೆಯಿಟ್ಟಿದ್ರು. 2ನೇ ಸೀಸನ್ ನ ಚಿತ್ರಿಕರಣ ನಡೀತಿದ್ದು, ಈ ವರ್ಷ ಬಿಡುಗಡೆಯಾಗೋ ಸಾಧ್ಯತೆ ಇದೆ ಅಂತ ನಟ ಅರ್ಜುನ್ ಮಾಥುರ್ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: ಅಯ್ಯೋ.. ಇದ್ದಕಿದ್ದ ಹಾಗೇ ಏನಾಯ್ತು ಈ ನಟಿಗೆ? ನೆಮ್ಮದಿಗಾಗಿ ಜಾಕಲಿನ್​ ಏನ್​ ಮಾಡ್ತಿದ್ದಾರೆ ನೋಡಿ..!

‘ಅಸುರ’

‘ಅಸುರ’ ವೆಬ್ ಸೀರಿಸ್ ನ ಕತೆ ಹಾಗೂ ನಟರ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ಪಿಧಾ ಆಗಿದ್ರು. ಇದೀಗ ಅಸುರ ಸೀಸನ್ 2 ಚಿತ್ರೀಕರಣ ನಡೆಯುತ್ತಿದೆ. ಬರುನ್ ಸೋಬ್ತಿ, ಅರ್ಷದ್ ವಾರ್ಸಿ, ರಿಧಿ ಡೋಗ್ರಾ, ಅನುಪ್ರಿಯಾ ಗೋಯೆಂಕಾ ಮತ್ತು ಷರೀಬ್ ಹಶ್ಮಿ ಸೇರಿದಂತೆ ಕೆಲ ಹೊಸ ಮುಖಗಳೊಂದಿಗೆ ಈ ವರ್ಷವೇ ಅಸುರ 2 ಬಿಡುಗಡೆಯಾಗಲಿದೆ.

ವರದಿ: ಪಾವನ H.S
Published by:Vasudeva M
First published: