HOME » NEWS » Entertainment » NEW POSTER RELEASED FROM KICHCHA SUDEEP STARRER MOVIE KOTIGOBBA 3 AS A BIRTHDAY GIFT HK

HBD Sudeep : ಕಿಚ್ಚನ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ರಿಲೀಸ್ ಆಯ್ತು ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್! 

Kotigobba 3 New Poster : ಕೊರೋನಾದಿಂದಾಗಿ ಈ ಸಲ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗದಿದ್ದರೇನಂತೆ, ಅವರನ್ನು ಖುಷಿಪಡಿಸುವ ಕಾರಣದಿಂದಲೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.

news18-kannada
Updated:September 1, 2020, 11:26 PM IST
HBD Sudeep : ಕಿಚ್ಚನ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ರಿಲೀಸ್ ಆಯ್ತು ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್! 
ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್
  • Share this:
ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲೇ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅದರಲ್ಲಂತೂ ಕೋಟಿಗೊಬ್ಬ 3 ಚಿತ್ರತಂಡ ಕಿಚ್ಚನ ಹೊಸ ಪೋಸ್ಟರ್ ರಿಲೀಸ್ ಮಾಡಿ, ಫ್ಯಾನ್ಸ್ ಸಡಗರವನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾದರೆ ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್ ​​ ​​ಹಾಗೂ ಕಿಚ್ಚನ ಹೊಚ್ಚ ಹೊಸ ಲುಕ್​​ ವಿಶೇಷತೆ ಏನು ಅಂತ ತಿಳಿಸ್ತೀವಿ ಮುಂದೆ ಓದಿ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಬುಧವಾರ ಸೆಪ್ಟೆಂಬರ್ 2 ರಂದು 47ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ, ಪ್ರತಿ ವರ್ಷದಂತೆ ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲವಷ್ಟೇ. ಈ ವರ್ಷ ಮಾರ್ಚ್ ಅಂತ್ಯದಿಂದ ಈ ಸೆಪ್ಟೆಂಬರ್​ ವರೆಗೂ ಯಾವ ಸ್ಟಾರ್ ಕೂಡ ತಮ್ಮ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅದಕ್ಕೆ ಕಾರಣ ಕೊರೋನಾ ಹಾವಳಿ ಹಾಗೂ ಲಾಕ್​ಡೌನ್​​ ಕ್ರಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಹೀಗಾಗಿಯೇ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗದಿದ್ದರೇನಂತೆ, ಅವರನ್ನು ಖುಷಿಪಡಿಸುವ ಕಾರಣದಿಂದಲೇ ಕಿಚ್ಚ ಸುದೀಪ್, ಕೋಟಿಗೊಬ್ಬ 3 ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಮಾಡಿಸಿದ್ದಾರೆ.

Kichcha Sudeep released new poster of Kotigobba 3 movie
ಕಿಚ್ಚ ಸುದೀಪ್​


ವಿಶೇಷ ಅಂದರೆ, ಶ್ರೀಕೃಷ್ಣನಂತೆ ನಿಂತಿರುವ, ಹಣೆಗೆ ಬಂದನಾ ಧರಿಸಿದ್ದು, ಜೋಕರ್ ಟೀ ಶರ್ಟ್, ಅದರ ಮೇಲೊಂದು ದೊಗಲೆ ಶರ್ಟ್ ತೊಟ್ಟು, ಸ್ಟೈಲಿಶ್​ ಆಗಿ ಪೋಸ್ ಕೊಟ್ಟಿದ್ದಾರೆ. ನೋಡಲು ಇದು ಒಂದು ಫೈಟ್ ಪ್ರಾರಂಭದ ಸಮಯದಲ್ಲಿ ಬರುವ ಸೀನ್​​ನ ಮೇಕಿಂಗ್ ಸ್ಟಿಲ್ ಅಥವಾ ಫೋಟೋಶೂಟ್​ನಂತೆ ಕಂಡುಬಂದರೂ, ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ : Karan Acharya: ಕಲೆಯ ಮೂಲಕ ಖುಷಿ ಹಂಚುವ ಕರಣ್ ಆಚಾರ್ಯ: ಆ್ಯಂಗ್ರಿ ಹನುಮಾನ್ ಸೃಷ್ಟಿಕರ್ತನ ಹೀಗೊಂದು ಕೆಲಸ!

ಇನ್ನು ಅಭಿಮಾನಿಗಳೇ ಸೇರಿ ಮಾಡಿರುವ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾಮನ್ ಡಿಪಿ ಈಗಾಗಲೇ ಎಲ್ಲೆಡೆ ವೈರಲ್ ಆಗಿದೆ. ಶಿವಣ್ಣ, ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ನಿರೂಪ್ ಭಂಡಾರಿ ಸೇರಿದಂತೆ ಹಲವು ಸ್ಯಾಂಡಲ್​ವುಡ್ ಸ್ಟಾರ್​​ಗಳು ಈ ಕಾಮನ್ ಡಿಪಿಯನ್ನು ರಿಲೀಸ್ ಮಾಡಿದ್ದು, ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ

ಇನ್ನು ಇತ್ತೀಚೆಗಷ್ಟೇ ಕೋಟಿಗೊಬ್ಬ 3 ಚಿತ್ರದ ಹಾಡೊಂದರಲ್ಲಿ ಸೇಸಮ್ಮ ಸನ್ನಿ ಲಿಯೋನ್ ಸೊಂಟ ಬಳುಕಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಕಿಚ್ಚಾಭಿಮಾನಿಗಳು ಸಖತ್ ಥ್ರಿಲ್ ಆಗಿದ್ದರು. ಅದರ ಬೆನ್ನಲ್ಲೇ ಕಿಚ್ಚನ ಹುಟ್ಟು ಹಬ್ಬದಂದು ಫ್ಯಾಂಟಮ್ ಸಿನಿಮಾ ತಂಡದಿಂದಲೂ ನಾಳೆ ಬರ್ತಡೇ ಟೀಸರ್ ರಿಲೀಸ್ ಮಾಡಲಿದ್ದಾರೆ. ಹೀಗೆ ಬಾದ್ಶಾ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನಾಳೆ ಫ್ಯಾಂಟಮ್ ಮತ್ತು ಕೋಟಿಗೊಬ್ಬ 3 ಟೀಂಗಳು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಲಿವೆ.
Published by: G Hareeshkumar
First published: September 1, 2020, 11:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories