OTT Release: ಈ ವಾರವೂ ಸಿನಿರಸಿಕರಿಗೆ ಭರ್ಜರಿ ರಸದೌತಣ...ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ ಮಾರ್ವೆಲ್ಸ್​ನ `ಎಟರ್ನಲ್ಸ್​’ ಸಿನಿಮಾ!

ಕಳೆದ ವಾರ ಪುಷ್ಪ; ದ ರೈಸ್(Pushpa: The Rise) ಒಟಿಟಿಯಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಹೊಂದಿತ್ತು. ಈ ವಾರ ಆ ಸರದಿ ಇನ್ನೂ ಹಲವು ಕಾರ್ಯಕ್ರಮಗಳದ್ದು. ನೆಟ್‍ಫ್ಲಿಕ್ಸ್(Netflix), ಪ್ರೈಮ್(Prime) ಮತ್ತು ಡಿಸ್ನಿ ಹಾಟ್‍ಸ್ಟಾರ್(Disney Hotstar) ಮತ್ತಿತರ ಒಟಿಟಿ ವೇದಿಕೆಗಳ ಹೊಸ ಶೋಗಳ ಕುರಿತ ಮಾಹಿತಿ ಇಲ್ಲಿದೆ.

ಎಟರ್ನಲ್ಸ್​​ ಸಿನಿಮಾ ಪೋಸ್ಟರ್​

ಎಟರ್ನಲ್ಸ್​​ ಸಿನಿಮಾ ಪೋಸ್ಟರ್​

  • Share this:

ನೀವು ನಿಮ್ಮ ಹೊಸ ವರ್ಷಾರಂಭದ ರಜೆ (Holiday)ಯನ್ನು ವಿಸ್ತರಿಸಿದ್ದರೂ, ಮನೆಗೆ ಮರಳಿ, ಮುಂದಿನ ವಾರ (Next Week)ವನ್ನು ಮನೆಯಲ್ಲಿಯೇ ಕಳೆಯುವ ಸಾಧ್ಯತೆಗಳು ಹೆಚ್ಚಿವೆ. ಅಧಿಕವಾಗುತ್ತಿರುವ ಕೋವಿಡ್ (Covid) ಪ್ರಕರಣಗಳು ಮತ್ತು ಕಠಿಣ ಕರ್ಫ್ಯೂಗಳು ಇದಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ ಅಲ್ಲವೇ..? ಮನೆಯೊಳಗೆ ಬಂಧಿಗಳಂತೆ ಕೂತರೂ ಮನರಂಜನೆ (Entertainment) ಒಟಿಟಿ (OTT) ಇದೆಯಲ್ಲ ಎಂದುಕೊಳ್ಳುವ ಮಂದಿಗೆ ಸಿಹಿ ಸುದ್ದಿ ಇದೆ. ಬಹಳಷ್ಟು ಹೊಸ ಕಾರ್ಯಕ್ರಮಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಕಳೆದ ವಾರ ಪುಷ್ಪ; ದ ರೈಸ್ (Pushpa:The Rise) ಒಟಿಟಿಯಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಹೊಂದಿತ್ತು. ಈ ವಾರ ಆ ಸರದಿ ಇನ್ನೂ ಹಲವು ಕಾರ್ಯಕ್ರಮಗಳದ್ದು. ನೆಟ್‍ಫ್ಲಿಕ್ಸ್(Netflix), ಪ್ರೈಮ್(Prime) ಮತ್ತು ಡಿಸ್ನಿ ಹಾಟ್‍ಸ್ಟಾರ್(Disney Hotstar) ಮತ್ತಿತರ ಒಟಿಟಿ ವೇದಿಕೆಗಳ ಹೊಸ ಶೋಗಳ ಕುರಿತ ಮಾಹಿತಿ ಇಲ್ಲಿದೆ.


1. ‘ರಂಜಿಶ್ ಹೀ ಸಹಿ’ - ವೂಟ್ ಸೆಲೆಕ್ಟ್
ಶಂಕರ್ , ಆಮ್ನಾ ಮತ್ತು ಅಂಜು ಎಂಬ ಮೂರು ಪಾತ್ರಗಳ ಸುತ್ತುವ, 70ರ ದಶಕದ ಬಾಲಿವುಡ್ ಹಿನ್ನೆಲೆಯುಳ್ಳ ಕಥೆಯಿದು. ಶಂಕರ್ ಎಂಬ ಹತಾಶ ನಿರ್ದೇಶಕ , ನಟಿಯೊಬ್ಬಳ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುತ್ತಾನೆ, ಮತ್ತದು ಅವನ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತದೆ. ಮಹೇಶ್ ಭಟ್ ರಚಿಸಿರುವ ಈ ವೆಬ್ ಸರಣಿಯಲ್ಲಿ ತಾಹಿರ್ ಬಸಿನ್, ಅಮಲಾ ಪೌಲ್ ಮತ್ತು ಅಮೃತಾ ಪುರಿ ನಟಿಸಿದ್ದಾರೆ. ಇದು ಗುರುವಾರ ಬಿಡುಗಡೆ ಆಗಲಿದೆ.


2. ‘ಹೊಟೇಲ್ ಟ್ರಾನ್ಸೆಲ್ವೇನಿಯಾ 4’ - ಅಮೇಜಾನ್ ಪ್ರೈಮ್ ವಿಡಿಯೋ
ಇದುವರೆಗೆ ಬಿಡುಗಡೆಯಾದ ಈ ಅನಿಮೇಟೆಡ್ ಕಾಮಿಡಿ ಸಿನಿಮಾದ ಎಲ್ಲಾ ಭಾಗಗಳು ಸಿಕ್ಕಾಪಟ್ಟೆ ಮೆಚ್ಚುಗೆಗೆ ಪಾತ್ರವಾಗಿವೆ. ಡ್ರಾಕ್ ಮತ್ತು ಅವನ ತಂಡ ಮತ್ತೆ ಅಮೆಜಾನ್‍ಗೆ ಮರಳುತ್ತಿದ್ದಾರೆ. ವ್ಯಾನ್ ಹೆಲ್ಸಿಂಗ್ ಅವರ ಹೊಸ ಆವಿಷ್ಕಾರವು ಡ್ರಾಕ್ ಮತ್ತು ಅವನ ಸ್ನೇಹಿತರನ್ನು ಮನುಷ್ಯರನ್ನಾಗಿ ಮತ್ತು ಜಾನಿಯನ್ನು ದೈತ್ಯನನ್ನಾಗಿ ಬದಲಾಯಿಸುತ್ತದೆ. ಆದರೆ, ಆ ಬದಲಾವಣೆ ಸ್ಥಿರ ಆಗುವ ಮೊದಲು, ಅವರು ತಮ್ಮ ಪೂರ್ವ ರೂಪಕ್ಕೆ ಮರಳುವ ದಾರಿ ಕಂಡುಕೊಳ್ಳಬೇಕಾಗುತ್ತದೆ. ಇದು ಶುಕ್ರವಾರ ಬಿಡುಗಡೆ ಆಗಲಿದೆ.


3. ‘ಪುತ್ತಮ್ ಪುದು ಕಾಲೈ ವಿಡಿಯಾದ’- ಅಮೆಜಾನ್ ಪ್ರೈಮ್ ವೀಡಿಯೋ
ಜನವರಿ ಎರಡನೇ ವಾರದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಪುತ್ತಮ್ ಪುದು ಕಾಲೈ ವಿಡಿಯಾದ ವೆಬ್ ಸರಣಿ, ಪುತ್ತಮ್ ಪದು ಕಾಲೈ ವೆಬ್‍ಸರಣಿಯ ಎರಡನೆಯ ಭಾಗವಾಗಿದೆ. ನಡಿಯಾ ಮೊಯಿದು, ಜೋಜು ಜಾರ್ಜ್, ಮಣಿಕಂದನ್ ಮಾಧವನ್ ಇದರಲ್ಲಿ ಅಭಿನಯಿಸುತ್ತಿದ್ದಾರೆ. ಇದು ಶುಕ್ರವಾರ ಬಿಡುಗಡೆ ಆಗಲಿದೆ.


4. ‘ದಿ ಜರ್ನಲಿಸ್ಟ್’ - ನೆಟ್‍ಫ್ಲಿಕ್ಸ್
‘ದಿ ಜರ್ನಲಿಸ್ಟ್’, ಅದೇ ಹೆಸರಿನ 2019ರ ಸಿನಿಮಾದ ರೂಪಾಂತರ. ಜಪಾನಿನ ಇತ್ತೀಚಿನ ರಾಜಕೀಯ ಅಪರಾಧ ಮತ್ತು ಹಗರಣಗಳ ಕುರಿತ ಕಥೆಯನ್ನು ಇದು ಒಳಗೊಂಡಿದೆ. ದಿ ಜರ್ನಲಿಸ್ಟ್ ಚಿತ್ರ 43ನೇ ಜಪಾನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಮೂರು ಮುಖ್ಯ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿತ್ತು. ಇನ್ನೂ ಹಲವು ಪ್ರಶಸ್ತಿಗಳನ್ನು ಅದು ಬಾಚಿಕೊಂಡಿದೆ. ಈ ಚಲನಚಿತ್ರ ನಿರ್ದೇಶಕ ಮಿಚಿಹಿಟೋ ಫ್ಯೂಜಿಯವರೇ ಈ ಸರಣಿಯನ್ನು ಕೂಡ ನಿರ್ದೇಶಿಸಿದ್ದಾರೆ. ಇದು ಗುರುವಾರ ಬಿಡುಗಡೆ ಆಗಲಿದೆ.


5. ‘ದಿ ಹೌಸ್’ - ನೆಟ್‍ಫ್ಲಿಕ್ಸ್
ಒಂದು ಮನೆ ಮತ್ತು ಆ ಮನೆಯನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡ ಮೂರು ವ್ಯಕ್ತಿಗಳ ಅತಿವಾಸ್ತವಿಕ ಕಥೆಗಳ ಕುರಿತ ವಿಲಕ್ಷಣ ಕಾಮಿಡಿ ಇದು. ನೆಕ್ಸಸ್ ಸ್ಟುಡಿಯೋಸ್ ಇದನ್ನು ನಿರ್ಮಿಸಿದ್ದು, ಎಮ್ಮಾ ಡಿ ಸ್ವೇಫ್ ಮತ್ತು ಮಾರ್ಕ್ ರೋಲ್ಸ್, ನಿಕಿ ಲಿಂಡ್ರೋತ್ ವಾನ್ ಬರ್ಹ್‌ ಮತ್ತು ಪಲೋಮಾ ಬೇಜಾ ಅವರ ಧ್ವನಿ ನಿರ್ದೇಶನವಿದೆ. ದಿ ಹೌಸ್ ಶುಕ್ರವಾರ ಬಿಡುಗಡೆ ಆಗಲಿದೆ.


6. ‘ಆರ್ಕೈವ್ 81’ - ನೆಟ್‍ಫ್ಲಿಕ್ಸ್
ಆರ್ಕೈವ್ 81 ಎಂಬ ಹೆಸರಿನ ಪಾಡ್‍ಕಾಸ್ಟ್‌ನಿಂದ ಸ್ಫೂರ್ತಿ ಪಡೆದ ಅಲೌಕಿಕ ಕಥೆಯುಳ್ಳ ಥ್ರಿಲ್ಲರ್ ವೆಬ್‍ಸರಣಿ ಇದು. ಇದನ್ನು ಶೋರನ್ನರ್ ರೆಬೆಕಾ ಸೊನೆನ್ ಶೈನ್, ಜೇಮ್ಸ್ ವಾನ್ ಮತ್ತು ಮೈಕೆಲ್ ಕ್ಲಿಯರ್, ರೆಬೆಕಾ ಥೋಮಸ್, ಆ್ಯಂಟೋನಿ ಡೋಯಿ ಮತ್ತು ಪೌಲ್ ಹ್ಯಾರಿಸ್ ಬೋರ್ಡ್‍ಮನ್ ನಿರ್ಮಿಸಿದ್ದಾರೆ. ಇದು ಶುಕ್ರವಾರ ಬಿಡುಗಡೆ ಆಗುತ್ತಿದೆ.


7. ‘ಯೇಹ್ ಕಾಲಿ ಕಾಲಿ ಆಂಖೇ’ - ನೆಟ್‍ಫ್ಲಿಕ್ಸ್
ಯೇಹ್ ಕಾಲಿ ಕಾಲಿ ಆಂಖೇ ನೆಟ್‍ಫ್ಲಿಕ್ಸ್‌ನ ಮತ್ತೊಂದು ಹೊಸ ಕ್ರೈಂ ಥ್ರಿಲ್ಲರ್. ರಾಜಕಾರಣಿಯ ಮಗಳೊಬ್ಬಳು ತನ್ನನ್ನು ಬಯಸದ ವ್ಯಕ್ತಿಯನ್ನು ಹಿಂಬಾಲಿಸುವ ಕಥೆಯುಳ್ಳ ಇದರಲ್ಲಿ ಅಧಿಕಾರದ ಶೋಷಣೆಯನ್ನು ಕಾಣಬಹುದು. ಇದು ಶುಕ್ರವಾರ ಬಿಡುಗಡೆ ಆಗುತ್ತಿದೆ.


8. ‘ಎಟರ್ನಲ್ಸ್’ – ಡಿಸ್ನಿ ಪ್ಲಸ್ ಹಾಟ್‍ಸ್ಟಾರ್
ಜ್ಯಾಕ್ ಕಿರ್ಬಿ ರಚಿಸಿರುವ ಕಾಮಿಕ್ ಸರಣಿಗಳನ್ನು ಆಧರಿಸಿರುವ ಎಟರ್ನಲ್ಸ್ ಸೂಪರ್ ಪವರ್ ಜೀವಿಗಳ ಗುಂಪಿನ ಸುತ್ತ ಸುತ್ತುವ ಕಥೆಯಾಗಿದೆ. ಏಂಜಲೀನಾ ಜೋಲಿ, ಗೆಮ್ಮಾ ಚಾನ್, ರಿಚಾರ್ಡ್ ಮಡೆನ್, ಸಲ್ಮಾ ಹಯೆಕ್, ಬ್ರಿಯಾನ್ ಟೈರಿ ಹೆನ್ರಿ ಮತ್ತು ಇನ್ನೂ ಅನೇಕ ಖ್ಯಾತ ತಾರೆಯರು ಇದರಲ್ಲಿ ನಟಿಸಿದ್ದಾರೆ. ಇದು ಬುಧವಾರ ಬಿಡುಗಡೆ ಆಗಲಿದೆ.


9. ‘ಹ್ಯೂಮನ್’ -ಡಿಸ್ನಿ ಪ್ಲಸ್ ಹಾಟ್‍ಸ್ಟಾರ್
ಶೆಫಾಲಿ ಶಾಹ್ ಮತ್ತು ಕೃತಿ ಕಲ್ಹಾರಿ ಅವರ ತಾರಾಗಣ ಇರುವ ಹ್ಯೂಮನ್ ಮನುಷ್ಯರ ಮೇಲೆ ನಡೆಯುವ ಔಷಧೀಯ ಪ್ರಯೋಗಗಳ ಕುರಿತ ವೈದ್ಯಕೀಯ ಥ್ರಿಲ್ಲರ್ ಕಥೆ ಹೊಂದಿದೆ. ವಿಪುಲ್ ಅಮೃತ್ ಲಾಲ್ ಶಾಹ್, ಮೋಜೆಜ್ ಸಿಂಗ್ ಅವರ ಜೊತೆ ಇದನ್ನು ನಿರ್ದೇಶಿಸಿದ್ದಾರೆ. ಇದು ಶುಕ್ರವಾರ ಬಿಡುಗಡೆ ಆಗಲಿದೆ.


Published by:Vasudeva M
First published: