ವರಮಹಾಲಕ್ಷ್ಮಿ ಹಬ್ಬದಂದು ಲಂಕೆ ರಿಲೀಸ್! ಸೂಫಿ ಸಾಂಗ್‍ನಲ್ಲಿ ಲೂಸ್ ಮಾದ, ಕೃಷಿ ಮಿಂಚು...

ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಮಾಸ್ ಪೆಪ್ಪಿ ಸಾಂಗ್ ಕೂಡ ರಿಲೀಸ್ ಆಗಿದೆ. ಅದರ ಬೆನ್ನಲ್ಲೇ ಇತ್ತೀಚೆಗಷ್ಟೇ ಚಿತ್ರತಂಡ ಹೊಚ್ಚ ಹೊಸ ಸೂಫಿ ಸಾಂಗ್ ಅನ್ನೂ ಬಿಡುಗಡೆ ಮಾಡಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಲಂಕೆ ಚಿತ್ರ

ಲಂಕೆ ಚಿತ್ರ

  • Share this:
2019ರಲ್ಲಿ ತೆರೆಗೆ ಬಂದ ಕೆಂಪೇಗೌಡ 2 ಚಿತ್ರದ ಬಳಿಕ ನಟ ಲೂಸ್ ಮಾದ ಯೋಗಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಒಂದು ಕಾರಣ ಕೊರೊನಾ ಲಾಕ್‍ಡೌನ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಸದ್ಯ ಅವರು ನಟಿಸಿರುವ ಲಂಕೆ ಚಿತ್ರ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಇದೇ ವರಮಹಾಲಕ್ಷ್ಮಿ ಹಬ್ಬದಂದು ರಿಲೀಸ್‍ಗೆ ಸಿದ್ಧತೆ ನಡೆಸಿದೆ. ಹೌದು, ರಾಮ್‍ಪ್ರಸಾದ್ ಆಕ್ಷನ್ ಕಟ್ ಹೇಳಿರುವ ಲಂಕೆ ಸಿನಿಮಾ ಇದೇ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿಗೆ ನಾಯಕಿಯಾಗಿ ಕೃಷಿ ತಾಪಂಡ ಹಾಗೂ ಕಾವ್ಯ ಶೆಟ್ಟಿ ನಟಿಸಿದ್ದು, ಎಸ್ತರ್ ನರೋನ್ಹಾ, ಸಂಚಾರಿ ವಿಜಯ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಆಗಿದ್ದು, ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಮಾಸ್ ಪೆಪ್ಪಿ ಸಾಂಗ್ ಕೂಡ ರಿಲೀಸ್ ಆಗಿದೆ. ಅದರ ಬೆನ್ನಲ್ಲೇ ಇತ್ತೀಚೆಗಷ್ಟೇ ಚಿತ್ರತಂಡ ಹೊಚ್ಚ ಹೊಸ ಸೂಫಿ ಸಾಂಗ್ ಅನ್ನೂ ಬಿಡುಗಡೆ ಮಾಡಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಲಂಕೆ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದಾರೆ. ನಯನಕೆ ನಯನವೇ ಸೇರೋ ಕ್ಷಣ ಎಂದು ಸಾಗುವ ಸ್ಲೋ ರೊಮ್ಯಾಂಟಿಕ್ ಸೂಫಿ ಸಾಂಗ್ ಸದ್ಯ ಯೂಟ್ಯೂಬ್‍ನಲ್ಲಿ ಸದ್ದು ಮಾಡುತ್ತಿದೆ. ಈ ಹಾಡಿಗೆ ಘೌಸ್‍ಪೀರ್ ಸಾಹಿತ್ಯ ಬರೆದಿದ್ದು, ಧನುಷ್ ಜಗದೀಶ್ ಹಾಗೂ ರಕ್ಷಿತಾ ಸುರೇಶ್ ಕಂಠದಾನ ಮಾಡಿದ್ದಾರೆ. ಹಾಡಿನ ಬಗ್ಗೆ ಮಾತನಾಡಿದ ನಿರ್ದೇಶಕ ರಾಮ್‍ಪ್ರಸಾದ್, `ಈ ಹಾಡಿನ ಮೂಲಕ ಸ್ವಲ್ಪ ದುಃಖ ಹಾಗೂ ಹೆಚ್ಚಿನ ಸಂತೋಷವನ್ನು ಹೇಳಬೇಕು ಅಂತ ಅಂದುಕೊಂಡೆ.ಈ ವಿಷಯವನ್ನು ಗೀತರಚನೆಕಾರ ಘೌಸ್‍ಪೀರ್ ಅವರ ಬಳಿ ಹೇಳಿದಾಗ ಈ ಸುಂದರ ಗೀತೆಯನ್ನು ಬರೆದುಕೊಟ್ಟರು. ಅಷ್ಟೇ ಮಧುರವಾಗಿ ಕಾರ್ತಿಕ್ ಶರ್ಮಾ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಧನಂಜಯ್ ಅವರ ನೃತ್ಯನಿರ್ದೇಶನದಲ್ಲಿ ನಟ ಯೋಗಿ ಮತ್ತು ನಟಿ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ' ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

ಇನ್ನು ನಾಯಕ ಲೂಸ್ ಮಾದ ಯೋಗಿ ಸಹ ಈ ಹಾಡನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಹಾಗೂ ನೃತ್ಯ ನಿರ್ದೇಶಕ ಧನಂಜಯ್ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸೂಫಿ ಸಾಂಗ್ ಹಾಗೂ ಚಿತ್ರದ ಬಗ್ಗೆ ಮಾತನಾಡುತ್ತಾ ನಾಯಕಿ ಕೃಷಿ ತಾಪಂಡ, `ಚಿತ್ರದ ನಾಲ್ಕೂ ಹಾಡುಗಳೂ ಬೇರೆ ಬೇರೆ ಶೈಲಿಯಲ್ಲಿವೆ. ಈ ಹಾಡು ಸೂಫಿ ಹಾಗೂ ಕವ್ವಾಲಿ ಶೈಲಿಯಲ್ಲಿದೆ. ನನಗೂ ಇದು ಫೇವರೇಟ್ ಸಾಂಗ್' ಎಂದು ನಸುನಕ್ಕರು.

ಲಂಕೆ ಇದೇ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ರಿಲೀಸ್ ಆಗಲಿದೆ. ಅದರ ಜೊತೆಗೆ ಲೂಸ್ ಮಾದ ಯೋಗಿ ಕೈಯಲ್ಲಿ ಇನ್ನೂ ನಾಲ್ಕೈದು ಚಿತ್ರಗಳಿವೆ. ದಯಾಳ್ ಪದ್ಮನಾಭನ್ ನಿರ್ದೇಶನದ ಒಂಭತ್ತನೇ ದಿಕ್ಕು, ಪರಿಮಳ ಲಾಡ್ಜ್, ಹೆಡ್ ಬುಷ್, ಕಿರಿಕ್ ಶಂಕರ್ ಸೇರಿದಂತೆ ಇನ್ನೂ ಕೆಲ ಆಫರ್​ ಗಳು ಅವರ ಕೈಯಲ್ಲಿವೆ. ಕೊರೊನಾ ಲಾಕ್‍ಡೌನ್ ಸಂಪೂರ್ಣವಾಗಿ ಅನ್‍ಲಾಕ್ ಆಗಿ, ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಶೇಕಡಾ ನೂರರಷ್ಟು ಪ್ರದರ್ಶನಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಒಂದೊಂದೇ ಚಿತ್ರ ರಿಲೀಸ್ ಆಗಲಿದೆ.
Published by:Soumya KN
First published: