'ದಿಯಾ' ಚಿತ್ರದ ಲವಲವಿಕೆ ಆದಿಗೆ ಸಿಕ್ತು ಹೊಸ ಸಿನಿಮಾ

ಚಿತ್ರದ ಪ್ರಮುಖ ಪಾತ್ರದಲ್ಲಿ ತಬಲಾನಾಣಿ ಕೂಡ ನಟಿಸುತ್ತಿದ್ದಾರೆ. ವಿವೇಕ್‌ ಕೆ.ಎಸ್‌. ಅವರ ಛಾಯಾಗ್ರಹಣ, ಆರ್‌.ಹರೀಶ್‌ ಅವರ ಸಂಗೀತ ನಿರ್ದೇಶನವಿರುವ ಫಾರ್‌ ರಿಜಿಸ್ಟ್ರೇಷನ್‌ ಚಿತ್ರಕ್ಕೆ ಮೇ ತಿಂಗಳಲ್ಲಿ ಚಾಲನೆ ಸಿಗಲಿದೆ.

pruthvi ambar

pruthvi ambar

  • Share this:
ಸಿನಿಪ್ರಿಯರ ಹೃದಯ ಗೆದ್ದ 'ದಿಯಾ' ಚಿತ್ರದಲ್ಲಿನ ಆದಿ ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ. ಲವಲವಿಕೆಯಿಂದ ಕೂಡಿದ್ದ ಫ್ರೆಂಡ್, ತಾಯಿಯ ಪ್ರೀತಿಸುವ ಮುದ್ದು ಹುಡುಗನಾಗಿ ಪೃಥ್ವಿ ಅಂಬರ್ ಎಲ್ಲರ ಮನಗೆದ್ದಿದ್ದರು.

ಈ ಒಂದು ಪಾತ್ರವೇ ಇದೀಗ ಪೃಥ್ವಿ ಅವರ ಅದೃಷ್ಟದ ಬಾಗಿಲನ್ನು ತೆರೆದಿದೆ. ಫಾರ್‌ ರಿಜಿಸ್ಟ್ರೇಷನ್‌ ಎಂಬ ಹೊಸ ಚಿತ್ರಕ್ಕೆ ದಿಯಾ ಆದಿ ಆಯ್ಕೆಯಾಗಿದ್ದಾರೆ. ಟೈಟಲ್ ಮೂಲಕವೇ ಗಮನ ಸೆಳೆದಿರುವ ಚಿತ್ರತಂಡ ವಾಹನಗಳ ಸುತ್ತ ಸುತ್ತುವ ಕಥೆ ಹೆಣೆದಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಏಕೆಂದರೆ ಸಾಮಾನ್ಯವಾಗಿ ನೋಂದಣಿ ಆಗದ ಬೈಕ್‌ ಅಥವಾ ಕಾರುಗಳಿಗೆ ಫಾರ್‌ ರಿಜಿಸ್ಟ್ರೇಷನ್‌ ಎಂಬ ಬೋರ್ಡ್‌ ಇರುತ್ತೆ. ಇದನ್ನೇ ಶೀರ್ಷಿಕೆ ಮಾಡಿ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ ದ್ವಾರಕನಾಥ್.

ನಿಶ್ಚಲ್‌ ಫಿಲಂಸ್‌ ಬ್ಯಾನರ್‌ನಲ್ಲಿ ನವೀನ್‌ ರಾವ್‌ ನಿರ್ಮಿಸಲಿರುವ ಈ ಚಿತ್ರಕ್ಕೆ ಪೃಥ್ವಿ ನಾಯಕನಾಗಿ ಆಯ್ಕೆಯಾಗಿದ್ದು, ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಹಾಗೆಯೇ ಚಿತ್ರದ ಪ್ರಮುಖ ಪಾತ್ರದಲ್ಲಿ ತಬಲಾನಾಣಿ ಕೂಡ ನಟಿಸುತ್ತಿದ್ದಾರೆ. ವಿವೇಕ್‌ ಕೆ.ಎಸ್‌. ಅವರ ಛಾಯಾಗ್ರಹಣ, ಆರ್‌.ಹರೀಶ್‌ ಅವರ ಸಂಗೀತ ನಿರ್ದೇಶನವಿರುವ ಫಾರ್‌ ರಿಜಿಸ್ಟ್ರೇಷನ್‌ ಚಿತ್ರಕ್ಕೆ ಮೇ ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದು ನಿರ್ದೇಶಕ ದ್ವಾರಕನಾಥ್ ತಿಳಿಸಿದ್ದಾರೆ.
First published: