ಡಿಬಾಸ್ ದರ್ಶನ್ ನಿನ್ನೆಯಷ್ಟೆ ಫೇಸ್ಬುಕ್ ಲೈವ್ನಲ್ಲಿ ರಾಬರ್ಟ್ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ್ದರು. ನಿನ್ನೆ ಬೆಳಿಗ್ಗೆ 11ಕ್ಕೆ ಫೇಸ್ಬುಕ್ನಲ್ಲಿ ಲೈವ್ ಬಂದಿದ್ದ ದಾಸ ತಮ್ಮ ಹುಟ್ಟುಹಬ್ಬದ ಆಚರಣೆ, ಒಟಿಟಿ ರಿಲೀಸ್ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ ಫ್ಯಾನ್ಸ್ ಕೇಳಿದ ಸಾಕಷ್ಟು ಪ್ರಶ್ನೆಗಳಿಗೂ ಉತ್ತರಿಸಿದರು. ಇದೇ ವೇಳೆ ಅಭಿಮಾನಿಯೊಬ್ಬರು ರಾಬರ್ಟ್ ರಿಲೀಸ್ ದಿನಾಂಕದ ಬಗ್ಗೆ ಪ್ರಶ್ನೆ ಕೇಳಿದಾಗ, ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಯೇ ಬಿಟ್ಟರು. ದರ್ಶನ್ ರಾಬರ್ಟ್ ರಿಲೀಶ್ ಡೇಟ್ ಪ್ರಕಟಿಸುತ್ತಿದ್ದಂತೆಯೇ ನಿರ್ದೇಶಕ ತರುಣ್ ಸುಧೀರ್ ಒಂದು ಪೋಸ್ಟರ್ ಸಹ ಹಂಚಿಕೊಂಡರು. ತಮ್ಮ ಹುಟ್ಟುಹಬ್ಬದ ವಿಷಯವಾಗಿ ದರ್ಶನ್ ತೆಗೆದುಕೊಂಡಿರುವ ನಿರ್ಧಾರ ತಿಳಿಯುತ್ತಿದ್ದಂತೆಯೇ ಕೊಂಚ ಬೇಸರಗೊಂಡಿದ್ದ ಅಭಿಮಾನಿಗಳು ಸಿನಿಮಾ ರಿಲೀಸ್ ವಿಷಯ ತಿಳಿದು ಸಂಭ್ರಮಿಸಲಾರಂಭಿಸಿದರು. ಈಗ ಚಿತ್ರತಂಡ ರಾಬರ್ಟ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಟ್ಟಿದೆ.
ನಿನ್ನೆಯಷ್ಟೆ ದರ್ಶನ್ ಅವರ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಈಗ ಇದೇ ಸಿನಿಮಾದ ರಿಲೀಸ್ ದಿನಾಂಕ ಇರುವ ಮೋಷನ್ ಪೋಸ್ಟರ್ ಅನ್ನು ಆನಂದ್ ಆಡಿಯೋ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯಲ್ಲಿ ರಿಲೀಸ್ ಮಾಡಿದೆ.
This #MahaShivarathri we are gonna Stay Awake a Night before too ! #RoberrtStormMarch11 #MahaShivarathri #Roberrt
🔥▶ https://t.co/Fzh2DIzcjX ◀🔥@dasadarshan @TharunSudhir @ArjunJanyaMusic @StarAshaBhat @UmapathyFilms @umap30071 @Dcompany171 #DBoss #AnandAudio pic.twitter.com/LQ1AmZF5ql
— aanandaaudio (@aanandaaudio) January 11, 2021
The Gaint is set to hit the theaters on MARCH 11th, 2021 😍...
May ur love and support shower as always.
ರಾಬರ್ಟ್ ಆಬ್ಬರ ಮಾರ್ಚ್ 11,2021 ರಿಂದ ಚಿತ್ರಮಾಂದಿರದಲ್ಲಿ.#RoberrtStormMarch11#Roberrt #DBoss @UmapathyFilms@StarAshaBhat @IamJagguBhai @aanandaaudio pic.twitter.com/VO73TQlURr
— Tharun Sudhir (@TharunSudhir) January 10, 2021
ಇದನ್ನೂ ಓದಿ: Roberrt: ಶಿವರಾತ್ರಿ ಹಬ್ಬಕ್ಕೆ ರಾಬರ್ಟ್ ರಿಲೀಸ್: ದರ್ಶನ್ ಅಭಿನಯದ ಯಾವ ಸಿನಿಮಾಗಳೂ ಒಟಿಟಿಯಲ್ಲಿ ತೆರೆ ಕಾಣೋದಿಲ್ಲ..!
ತರುಣ್ ಸುಧೀರ್ ನಿರ್ದೇಶನದ ಹಾಗೂ ಉಮಾಪತಿ ನಿರ್ಮಾಣದ ರಾಬರ್ಟ್ ದರ್ಶನ್ ಅಭಿನಯದ 53ನೇ ಚಿತ್ರವಾಗಿದ್ದು, ಈಗಾಗಲೇ ರಿಲೀಸ್ ಆಗಿರುವ ಟೀಸರ್, ಪೋಸ್ಟರ್ ಹಾಗೂ ಹಾಡುಗಳಿಂದ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿದೆ. ಇನ್ನು ಕೆಲವೇ ದಿನಗಳಲ್ಲಿ ರಾಬರ್ಟ್ ಸಿನಿಮಾ ಕುರಿತಾದ ಒಂದೊದೇ ಅಪ್ಡೇಟ್ಗಳು ಸಿಗಲು ಆರಂಭವಾಗುತ್ತದೆ.
ರಾಬರ್ಟ್ ಸಿನಿಮಾದಲ್ಲಿ ನಾಯಕಿಯಾಗಿ ಆಶಾ ಭಟ್, ಪ್ರಮುಖ ಪಾತ್ರದಲ್ಲಿ ಟಾಲಿವುಡ್ ನಟ ಜಗಪತಿ ಬಾಬು ನಟಿಸಿದ್ದಾರೆ. ಇನ್ನು ಅವರ ಪಾತ್ರಕ್ಕೆ ಅವರೇ ಮೊದಲ ಬಾರಿಗೆ ಕನ್ನಡದಲ್ಲಿ ಡಬ್ ಮಾಡಿರುವುದು ವಿಶೇಷ.
ಇದನ್ನೂ ಓದಿ: ಟಾಲಿವುಡ್ ನಿರ್ದೇಶಕ ಸುಕುಮಾರ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ದರ್ಶನ್..!
ಇನ್ನು ಸ್ಟಾರ್ ನಟರ ಸಿನಿಮಾಗಳು ಒಟಿಟಿ ಮೂಲಕ ರಿಲೀಸ್ ಆಗಲಿವೆ ಎಂದೂ ಹೇಳಲಾಗುತ್ತಿದ್ದು, ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಬೇಸರ ವ್ಯಕ್ತಡಿಸಿದ್ದರು. ಈ ಬಗ್ಗೆಯೂ ತಮ್ಮ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ದರ್ಶನ್, ನನ್ನ ಸಿನಿಮಾಗಳು ಯಾವುದೇ ಕಾರಣಕ್ಕೂ ಒಟಿಟಿ ಮೂಲಕ ರಿಲೀಸ್ ಕಾಣುವುದಿಲ್ಲ ಎಂದಿದ್ದಾರೆ.
ನಿರ್ಮಾಪಕರು ಕಷ್ಟಪಟ್ಟು ಹಣ ಹೂಡಿರುತ್ತಾರೆ. ಇಡೀ ಚಿತ್ರತಂಡ ಶ್ರಮಪಟ್ಟು ಕೆಲಸ ಮಾಡಿ ನಿರ್ಮಿಸಿರುವ ಸಿನಿಮಾವನ್ನು ಮೊಬೈಲ್ನಲ್ಲಿ ನೋಡುವುದು ಸರಿಯಾದ ಕ್ರಮವಲ್ಲ. ಬೆಳ್ಳಿತೆರೆ ಮೇಲೆ ಸಿನಿಮಾ ನೋಡಿ ಪ್ರೇಕ್ಷಕರು ಹೊಡೆಯುವ ಸೀಟಿ ಹಾಗೂ ಚಪ್ಪಾಳೆ ನಮಗೆ ಮುಖ್ಯ. ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಹೋಗಲಿ ಶೇ 25ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೂ ನಾವು ಚಿತ್ರಮಂದಿಗಳಲ್ಲೇ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ