• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Ramya: 'ಗ್ಯಾರಂಟಿ' ಬಗ್ಗೆ ರಮ್ಯಾಗಿದ್ಯಂತೆ ಭರವಸೆ! ಕಾಂಗ್ರೆಸ್ ಕೊಟ್ಟ ಮಾತು ತಪ್ಪಲ್ಲ ಅಂದ್ರು ಪದ್ಮಾವತಿ!

Ramya: 'ಗ್ಯಾರಂಟಿ' ಬಗ್ಗೆ ರಮ್ಯಾಗಿದ್ಯಂತೆ ಭರವಸೆ! ಕಾಂಗ್ರೆಸ್ ಕೊಟ್ಟ ಮಾತು ತಪ್ಪಲ್ಲ ಅಂದ್ರು ಪದ್ಮಾವತಿ!

ನಟಿ ರಮ್ಯಾ

ನಟಿ ರಮ್ಯಾ

ಕಾಂಗ್ರೆಸ್​ ಕೊಟ್ಟಿರುವ ಭರವಸೆಗಳನ್ನು 100% ಈಡೇರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದು ರಮ್ಯಾ ಹೇಳಿದ್ದಾರೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಸಿದ್ದರಾಮಯ್ಯ (Siddaramaiah) ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡಿಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪದಗ್ರಹಣ ಕಾರ್ಯಕ್ರಮಕ್ಕೆ ಹಲವು ರಾಜಕಾರಣಿಗಳ ಜೊತೆಗೆ ಸಿನಿಮಾ ಸೆಲೆಬ್ರಿಟಿಗಳು ಸಹ ಆಗಮಿಸಿದ್ದರು. ತಮಿಳು ನಟ ಕಮಲ್ ಹಾಸನ್ (Kamal Haasan), ಶಿವರಾಜ್ ಕುಮಾರ್ (Shiva Rajkumar), ಗೀತಾ ಶಿವರಾಜ್ ಕುಮಾರ್ ಹಾಗೂ ಕಾಂಗ್ರೆಸ್​ನ ಸ್ಟಾರ್​ ಪ್ರಚಾರಕರಾಗಿ ಅಬ್ಬರದ ಪ್ರಚಾರ ಮಾಡಿದ ನಟಿ ರಮ್ಯಾ (Ramya) ಸಹ ಕಾರ್ಯಕ್ರಮಕ್ಕೆ  ಆಗಮಿಸಿದ್ದರು.  


actress ramya reveals her love for staying single says she likes to sleep alone
ನಟಿ ರಮ್ಯಾ


ಭರವಸೆಗಳನ್ನು  100% ಈಡೇರಿಸುತ್ತೆ


ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತಾಡಿದ ರಮ್ಯಾ,  ಕಾಂಗ್ರೆಸ್ ಸರ್ಕಾರ  ಬಂದಿರುವುದು ಬಹಳ ಖುಷಿ ಇದೆ. ಅವರು ಕೊಟ್ಟಿರುವ ಭರವಸೆಗಳನ್ನು  100% ಈಡೇರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ.  ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರೆಂಟಿಗಳನ್ನು ಈಡೇರಿಸುತ್ತಾರೆ ಎಂಬ ಭರವಸೆ ನನಗೆ ಇದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಮ್ಯಾ ಹೇಳಿದ್ದಾರೆ.


ಬಡಜನರಿಗೆ ಸಹಕಾರಿಯಾಗಲಿದೆ ಅನ್ನಭಾಗ್ಯ ಯೋಜನೆ


ಮಹಿಳೆಯರಿಗೆ ಉಚಿತ ಬಸ್ ಪಾಸ್. ನಿರುದ್ಯೋಗಿ ಪದವಿದರರಿಗೆ, ಡಿಪ್ಲೋಮಾ ಶಿಕ್ಷಿತರಿಗೆ ಪ್ರತಿ ತಿಂಗಳು ಹಣ ನೀಡುವ ಬಗ್ಗೆ ಚರ್ಚೆ ನಡೆದಿದೆ. ಅಷ್ಟೇ ಅಲ್ಲದೇ ಮನೆಯಲ್ಲಿರುವ ಗೃಹಿಣಿಯರಿಗೆ ಹಣ ನೀಡುತ್ತಾರೆ. ಜೊತೆಗೆ ಅನ್ನಭಾಗ್ಯ ಅಂತೂ ಕೊಟ್ಟೆ ಕೊಡುತ್ತಾರೆ. ಕಳೆದ ಬಾರಿ ಅನ್ನಭಾಗ್ಯ ಯೋಜನೆ ತಂದಾಗ ಅದರಿಂದ ಬಹಳಷ್ಟು ಬಡಜನರಿಗೆ ಒಳ್ಳೆಯದಾಗಿತ್ತು ಈಗ ಮತ್ತೆ ತರುವ ನಿರೀಕ್ಷೆ ಇದೆ ಎಂದು ನಟಿ ರಮ್ಯಾ ಹೇಳಿದ್ದಾರೆ.


ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ  ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಜತೆಗೆ 'ಆ್ಯಪಲ್ ಬಾಕ್ಸ್ ಸ್ಟುಡಿಯೋಸ್' ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಮೋಹಕ ತಾರೆ ರಮ್ಯಾ ಜರ್ನಿ ಆರಂಭಿಸಿ 20 ವರ್ಷ ಕಳೆದಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ರಮ್ಯಾ ಈಗಲೂ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಮೆರೆಯುತ್ತಿದ್ದಾರೆ.


ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ


2003 ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. ಬಳಿಕ ರಮ್ಯಾ ಮಾಡಿ ಎಕ್ಸ್​​ಕ್ಯೂಸ್​ ಮಿ ಸಿನಿಮಾ ಕೂಡ ಸೂಪರ್ ಹಿಟ್​ ಆಗ್ತಿದ್ದಂತೆ ಚಂದನವನದಲ್ಲಿ ಚೆಂದುಳ್ಳಿ ಚೆಲುವೆಗೆ ಡಿಮ್ಯಾಂಡ್​ ಹೆಚ್ಚಾಯ್ತು. ಸ್ಯಾಂಡಲ್​ವುಡ್​ನಲ್ಲಿ ರಮ್ಯ ಚೈತ್ರಕಾಲ ಶುರುವಾಯ್ತು.


ಸೂಪರ್ ಹಿಟ್ ಸಿನಿಮಾ ಕೊಟ್ಟ ರಮ್ಯಾ


ಆಕಾಶ್, ಅಮೃತಧಾರೆ, ಆದಿ, ಸೇವಂತಿ ಸೇವಂತಿ, ಲಕ್ಕಿ, ಮುಸ್ಸಂಜೆ ಮಾತು, ಜೊತೆ ಜೊತೆಯಲಿ, ಸಂಜು ವೆಡ್ಸ್​ ಗೀತಾ ಸೇರಿದಂತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿ ರಮ್ಯಾ ನಟಿಸಿದ್ದಾರೆ. ಎರಡು ದಶಕಗಳಿಂದ ಸ್ಯಾಂಡಲ್​ವುಡ್​ ಕ್ವೀನ್​ ಆಗಿದ್ದಾರೆ. ಬಣ್ಣದ ಲೋಕಕ್ಕೆ ಬ್ರೇಕ್​ ಕೊಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿರುವ ರಮ್ಯಾಗೆ ಈಗಲೂ ಅಪಾರ ಅಭಿಮಾನಿ ಬಳಗವಿದೆ.
ಇದನ್ನೂ ಓದಿ: Mahesh Babu: ಮಹೇಶ್ ಬಾಬು SSMB 28 ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ಹಬ್ಬ ಆಚರಿಸಲು ಸಜ್ಜಾದ ಪ್ರಿನ್ಸ್ ಫ್ಯಾನ್ಸ್


ರಾಜಕೀಯ ಕ್ಷೇತ್ರದಲ್ಲಿ ರಮ್ಯಾ  

top videos


  ರಮ್ಯಾ ಅವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಇವರು 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು 2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು.

  First published: