Cine Bazzar: ಸಿನಿಪ್ರಿಯರಿಗೆ ಗುಡ್ ನ್ಯೂಸ್, ಕನ್ನಡಕ್ಕಾಗಿ ಹೊಸ ಓಟಿಟಿ ಬಿಡುಗಡೆ

ಕನ್ನಡಕ್ಕೆ ಅದರದೇ ಆದ ಸ್ವಂತ ಓಟಿಟಿ ಆರಂಭವಾಗಿದೆ. ಹೌದು, ಸಿನಿ ಬಜಾರ್ (Cine Bazzar) ಎಂಬ ಓಟಿಟಿ ಇದೀಗ ಬಿಡುಗಡೆಯಾಗಿದ್ದು, ಕನ್ನಡದಲ್ಲಿಯೂ ಸ್ವಂತ ಓಟಿಟಿ ಕಾರ್ಯರೂಪಕ್ಕೆ ಬಂದಂತಾಗಿದೆ.

ಬಿಡುಗಡೆ ಸಮಾರಂಭ

ಬಿಡುಗಡೆ ಸಮಾರಂಭ

  • Share this:
ಇದು ಆಧುನಿಕ ಯುಗ. ಹೊಸ ತಂತ್ರಜ್ಞಾನ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಅದರಲ್ಲಿಯೂ ಸಿನಿ ರಂಗದಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಕೆಗಳು ಇದೀಗ ಹೆಚ್ಚಾಗುತ್ತಿದೆ. ಆಧುನಿಕ ಕ್ಯಾಮರಾಗಳು (Cemara), ಡೆಟಿಂಗ್ ಸಾಫ್ಟ್ವೇರ್​ಗಳು ಸೇರಿದಂತೆ ಅನೇಕ ವಿಷಯಗಳಲ್ಲಿ ಚಿತ್ರರಂಗವು ಸಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕನ್ನಡದ ಕೆಜಿಎಫ್ ಚಿತ್ರದ ತಂತ್ರಜ್ಞಾವನ್ನು ಇಲ್ಲಿ ಕಾಣಬುದು. ಇದೆಲ್ಲವೂ ಚಿತ್ರರಂಗದ ಒಂದು ಭಾಗವಾದರೆ. ಇನ್ನೊಂದು ಹಂತ ಎಂಬಂತೆ ಓಟಿಟಿ ಕೆಲ ವರ್ಷಗಳಿಂದ ಆರಂಭವಾಗಿದೆ. ಹೌದು, ಮೊದಲೆಲ್ಲಾ ಸಿನಿಮಾಗಳು ಕೇವಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಆದರೆ ಇದೀಗ ಚಿತ್ರಗಳು ನೇರವಾಗಿ ನಿಮ್ಮ ಮೊಬೈಲ್​ ನಲ್ಲಿ ನೋಡಲು ಸಿಗುತ್ತಿದೆ. ಓಟಿಟಿ (OTT) ಮಾಧ್ಯಮದ (Media) ಆವಿಷ್ಕಾರದಿಂದ ಇದೀಗ ಸಿನಿಮಾಗಳು ನೇರವಾಗಿ ಅಂಗೈಯಲ್ಲಿ ದೊರಕುವಂತಾಗಿದೆ. ನೆಟ್​ಪ್ಲಿಕ್ಸ್, ಅಮೇಜಾನ್, ಆಹಾ ಅಂತಹ ಅನೇಕ ಓಟಿಟಿ ಮಾಧ್ಯಮಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಇದೀಗ ಕನ್ನಡಕ್ಕೆ ಅದರದೇ ಆದ ಸ್ವಂತ ಓಟಿಟಿ ಆರಂಭವಾಗಿದೆ. ಹೌದು, ಸಿನಿ ಬಜಾರ್ (Cine Bazzar) ಎಂಬ ಓಟಿಟಿ ಇದೀಗ ಬಿಡುಗಡೆಯಾಗಿದ್ದು, ಕನ್ನಡದಲ್ಲಿಯೂ ಸ್ವಂತ ಓಟಿಟಿ ಕಾರ್ಯರೂಪಕ್ಕೆ ಬಂದಂತಾಗಿದೆ.

ಸಿನಿಬಜಾರ್ ಆಪ್ ಬಿಡುಗಡೆ:

ಹಲವು ವರ್ಷಗಳಿಂದ ಆನ್ ಲೈನ್ ನಲ್ಲಿ ಪರಿಣಿತಿ ಪಡೆದಿರುವ ಆನ್ ಲೈನ್ ಭಾಸ್ಕರ್ ಎಂದೇ ಖ್ಯಾತರಾಗಿರುವ ಭಾಸ್ಕರ್ ವೆಂಕಟೇಶ್ ಹಾಗು ನಿರ್ಮಾಪಕ, ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಸಾರಥ್ಯದಲ್ಲಿ ಸಿನಿಬಜಾರ್ ಆಪ್ ಹೊರಬಂದಿದೆ. ಈ ಮೂಲಕ ಸಿನಿ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಅದರಲ್ಲಿಯೂ ಕನ್ನಡದ ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್ ದೊರೆತಂತಾಗಿದೆ.

ಅತ್ಯಂತ ಕಡಿಮೆ ವೆಚ್ಚ:

ಈ ಆಪ್ ನಲ್ಲಿ ಸಿನಿಮಾ ವೀಕ್ಷಣೆಗೆ ತಗಲುವ ವೆಚ್ಚ ಕೇವಲ ಇಪ್ಪತ್ತೈದರಿಂದ ಮೂವತ್ತು ರೂಪಾಯಿ. 24 ಗಂಟೆಗಳ ಅವಧಿಯಿರುತ್ತದೆ. ಅಷ್ಟರೊಳಗೆ ಎಷ್ಟು ಸಿನಿಮಾ ಬೇಕಾದರೂ ನೋಡಬಹುದು. ಈ ಸಿನಿಮಾವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಕೂಡ ನಿರ್ಮಾಪಕರಿಗೆ ತಿಳಿಯಲಿದೆ. ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಸಲಾಗಿದೆ. ಧ್ವನಿಯಿಂದ ಹಿಡಿದು, ಸ್ಕ್ರೀನಿಂಗ್ ‌ತನಕ ಎಲ್ಲಾ ಉತ್ತಮ ಗುಣಮಟ್ಟದಾಗಿರುತ್ತದೆ.‌ ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈಗಾಗಲೇ ಈ ಆಪ್ ನಲ್ಲಿದೆ. ಈ ಆಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು‌. ಒಟ್ಟಿನಲ್ಲಿ ಕನ್ನಡ ನಿರ್ಮಾಪಕರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ ಎಂದು ಭಾಸ್ಕರ್ ವೆಂಕಟೇಶ್ ಹೇಳಿದ್ದಾರೆ.

ಇದನ್ನೂ ಓದಿ: Shivarajkumar: ವೆಬ್ ಸಿರೀಸ್ ಲೋಕಕ್ಕೆ ಶಿವಣ್ಣ ಎಂಟ್ರಿ! ಮಗಳ ನಿರ್ಮಾಣದಲ್ಲೇ ನಟಿಸ್ತಿದ್ದಾರೆ ಸೆಂಚುರಿ ಸ್ಟಾರ್​

ಇದು ನಿರ್ಮಾಪಕರ ಸ್ನೇಹಿಯೂ ಹೌದು:

ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಸಲಾಗಿದೆ. ಧ್ವನಿಯಿಂದ ಹಿಡಿದು, ಸ್ಕ್ರೀನಿಂಗ್ ‌ತನಕ ಎಲ್ಲಾ ಉತ್ತಮ ಗುಣಮಟ್ಟದಾಗಿರುತ್ತದೆ.‌ ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈಗಾಗಲೇ ಈ ಆಪ್ ನಲ್ಲಿ ಲಭ್ಯವಿರಲಿದೆ ಎಂದು ತೀಳಿದುಬಂದಿದೆ. ಪೈರಸಿ ತಡೆಗಟ್ಟುವ ನಿಟ್ಟಿನಲ್ಲಿ ಇದು ನಿರ್ಮಾಪಕರ ಸ್ನೇಹಿಯೂ ಆಗಿದೆ ಎಂದು ಹೇಳಬಹುದು. ಇನ್ನು, ಭಾಸ್ಕರ್ ನನ್ನನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದಾಗ ಇದರಿಂದ ನಿರ್ಮಾಪಕರಿಗೆ ಹಾಗೂ ನೋಡುಗರಿಗೆ ಅನುಕೂಲವಿದೆ ಎಂದು ತಿಳಿಯಿತು. ನಾನು ಭಾಸ್ಕರ್ ಅವರ ಜೊತೆ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದೇನೆ ಎಂದರು ಉಮೇಶ್ ಬಣಕಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: Explained: ಅಂದು ಅಣ್ಣಾವ್ರು-ಇಂದು ಸುದೀಪ್​! ಹಳೆಯ ದಿನಗಳನ್ನು ನೆನಪಿಸಿದ ಹಿರಿಯ ಪತ್ರಕರ್ತ

ನಟ ಶ್ರೀನಗರ ಕಿಟ್ಟಿಯಿಂದ ಬಿಡುಗಡೆ:

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಉಪಾಧ್ಯಕ್ಷ ನಾಗಣ್ಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ನಟ ಶ್ರೀನಗರ ಕಿಟ್ಟಿ, ನಿರ್ದೇಶಕರಾದ ರವಿಶ್ರೀವತ್ಸ, ಗಿರಿರಾಜ್ "ಸಿನಿಬಜಾರ್" ಓಟಿಟಿಯನ್ನು ಬಿಡುಗಡೆ ಮಾಡಿ , ತಂಡಕ್ಕೆ ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಶುಭ ಕೋರಿದರು.
Published by:shrikrishna bhat
First published: