ಜಾಹ್ನವಿ ಬಗ್ಗೆ ಇರೋ ಈ ಗಾಸಿಪ್ ನಿಜಾನಾ: ಶ್ರೀದೇವಿ ಮಗಳ ಹೃದಯ ಕದ್ದವರು ಯಾರು? 

news18
Updated:June 25, 2018, 6:27 PM IST
ಜಾಹ್ನವಿ ಬಗ್ಗೆ ಇರೋ ಈ ಗಾಸಿಪ್ ನಿಜಾನಾ: ಶ್ರೀದೇವಿ ಮಗಳ ಹೃದಯ ಕದ್ದವರು ಯಾರು? 
news18
Updated: June 25, 2018, 6:27 PM IST
ನ್ಯೂಸ್​ 18 ಕನ್ನಡ 

'ಧಡಕ್'... ಸದ್ಯ ಬಾಲಿವುಡ್‍ನಲ್ಲಿ ಈ ಸಿನಿಮಾದ್ದೇ ಸದ್ದು. ಅತಿಲೋಕ ಸುಂದರಿ ನಟಿ ಶ್ರೀದೇವಿ ಅವರ ದೊಡ್ಡ ಮಗಳು ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೂಗೂ ಮುನ್ನವೇ ಜಾಹ್ನವಿ ಹಾಗೂ ಇಶಾನ್ ಜೋಡಿ ಸಿನಿಪ್ರೇಮಿಗಳಿಗೆ ಹಾಟ್ ಫೇವರೀಟ್​ ಆಗಿದೆ. ಸದ್ಯ ಇವರಿಬ್ಬರ ಬಗ್ಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹರಿದಾಡುತ್ತಿದೆ. ಅದೇನು ಅನ್ನೋದನ್ನ ಹೇಳುತ್ತೇವೆ ಈ ವರದಿಯಲ್ಲಿ.

ಮರಾಠಿಯ ಬ್ಲಾಕ್ ಬಸ್ಟರ್ ಸಿನಿಮಾ 'ಸೈರಾಟ್'. ಇದೇ ಸಿನಿಮಾದ ರಿಮೇಕ್ ಕಳೆದ ವರ್ಷವಷ್ಟೇ ಕನ್ನಡದಲ್ಲಿ 'ಮನಸು ಮಲ್ಲಿಗೆ' ಎಂಬ ಟೈಟಲ್ ಮೂಲಕ ತೆರೆಕಂಡಿತ್ತು. ಸದ್ಯ 'ಸೈರಾಟ್' ಚಿತ್ರದ ರಿಮೇಕ್ ಬಾಲಿವುಡ್‍ನಲ್ಲಿ 'ಧಡಕ್' ಎಂಬ ಖಡಕ್ ಟೈಟಲ್‍ನೊಂದಿಗೆ ಸಿನಿಪ್ರೇಮಿಗಳ ಮುಂದೆ ಬರೋಕೆ ಸಜ್ಜಾಗಿದೆ.

ಶ್ರೀದೇವಿ ಪುತ್ರಿ ಜಾಹ್ನವಿ ಹಾಗೂ ಇಶಾನ್ ಅಭಿನಯದ ಚೊಚ್ಚಲ ಸಿನಿಮಾ ಇದಾಗಿದ್ದು, ಪೋಸ್ಟರ್, ಟೀಸರ್​ ಹಾಗೂ ಹಾಡಿನಿಂದಾಗಿ ತುಂಬಾ ಕುತೂಹಲ ಮೂಡಿಸುತ್ತಿದೆ. ಇನ್ನೇನು ಒಂದು ತಿಂಗಳಷ್ಟೇ 'ಧಡಕ್' ಸಿನಿಮಾ ರಿಲೀಸ್‍ಗೆ ಬಾಕಿಯಿದೆ. ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿರುವುದರಿಂದ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ.

ಇತ್ತೀಚೆಗೆ ಈ ಚಿತ್ರದ ಪ್ರಚಾರಕ್ಕೆಂದು ಮಾಲ್‍ವೊಂದಕ್ಕೆ ಜಾಹ್ನವಿ ಹಾಗೂ ಇಶಾನ್ ಹೋಗಿದ್ದರು. ಈ ವೇಳೆ ಅಲ್ಲಿನ ಅಭಿಮಾನಿಗಳು ಜಾಹ್ನವಿ ಜೊತೆ ಫೋಟೋ ಕ್ಲಿಕ್ಕಿಸ್ಕೊಳ್ಳಲು ಮುಗಿಬಿದ್ದಿದ್ದರು. ಅದರಲ್ಲೊಬ್ಬ ಯುವಕ ಜಾಹ್ನವಿಯನ್ನೇ ಹಿಂಬಾಲಿಸಿ ಫೋಟೋಗಾಗಿ ಮುಗಿಬೀಳುತ್ತಿದ್ದ. ಇದನ್ನ ಗಮನಿಸಿದ ಇಶಾನ್ ಆ ಅಭಿಮಾನಿಯಿಂದ ಜಾಹ್ನವಿಯನ್ನ ರಕ್ಷಿಸಿ, ಕಾರ್ ಹತ್ತಲು ಸಹಾಯ ಮಾಡಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಜಾಹ್ನವಿ ಕಪೂರ್ ಹಾಗೂ ಇಶಾನ್ ಹೆಚ್ಚು ಕ್ಲೋಸ್ ಆಗುತ್ತಿದ್ದಾರೆ. ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿ ಇಬ್ಬರ ನಡುವೆ ಒಂದು ಬಾಂಡಿಂಗ್ ಬೆಳೆದಿದ್ದು, ಈಗ ಸಿನಿಮಾದಾಚೆಗೂ ಈ ಬಾಂಡಿಂಗ್ ಮುಂದುವರಿಯುತ್ತಿದೆ. ಕೇವಲ 'ಧಡಕ್' ಸಿನಿಮಾ ಸಂಬಂಧ ಪಟ್ಟ ಕಾರ್ಯಕ್ರಮಗಳಲ್ಲದೆ ಖಾಸಗಿ ಕಾರ್ಯಕ್ರಮ, ಪಾರ್ಟಿ, ಡಿನ್ನರ್ ಅಂತ ಇವರಿಬ್ಬರೂ ಒಟ್ಟಿಗೆ ಎಲ್ಲ ಕಡೆ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರಂತೆ. ಹೀಗಾಗಿ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ ಅನ್ನೋದು ಲೇಟೆಸ್ಟ್ ಗಾಸಿಪ್.


Loading...

ಇನ್ನು ಇದಕ್ಕೂ ಮುನ್ನ ಜಾಹ್ನವಿ, ಫೇಮಸ್ ಪೊಲಿಟಿಷಿಯನ್ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರ ಶಿಖರ್ ಜೊತೆ ಡೇಟಿಂಗ್ ಮಾಡುತ್ತಿದ್ದು ಹಾಗೇ, ಇವರಿಬ್ಬರ ಚುಂಬನದ ಫೋಟೋಸ್ ವೈರಲ್​ ಆಗಿ ವಿವಾದಕ್ಕೀಡಾಗಿತ್ತು.

ಒಟ್ಟಾರೆ ಬಾಲಿವುಡ್ ನಟಿಯರೂ ಅಂದ ಮೇಲೆ ಅವರ ಮೇಲೆ ದಿನಕ್ಕೊಂದು ಗಾಸಿಪ್ ಆಗೋದು ಮಾಮೂಲಿ. ಅದರಂತೆ ಬೆಳ್ಳಿತೆರೆಯಲ್ಲಿ ಮುಖ ತೋರಿಸುವ ಮುನ್ನವೇ ಜಾಹ್ನವಿ ಕಪೂರ್ ಚೂರು ಹೆಚ್ಚಾಗಿಯೇ ಗಾಸಿಪ್‍ಗಳಿಗೆ ಆಹಾರವಾಗುತ್ತಿದ್ದಾರೆನೋ ಎನ್ನಬಹುದು.

 

 

 

 
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...