ಟಾಲಿವುಡ್​ನಲ್ಲಿ ಹೆಚ್ಚಿದ ಸ್ಪರ್ಧೆ: ಪ್ರಿನ್ಸ್​-ಜೂ.ಎನ್​ಟಿಆರ್​ಗೆ ಪೈಪೋಟಿ ಕೊಡೋಕೆ ನಿಂತಿದ್ದಾರೆ ಮತ್ತಿಬ್ಬರು ಸ್ಟಾರ್​ಗಳು..!

ಪ್ರಿನ್ಸ್ ಮಹೇಶ್ ಬಾಬು ಹಾಗೂ ಜೂನಿಯರ್ ಎನ್‍ಟಿಆರ್ ಬಗ್ಗೆ ನಿಮಗೆ ಹೆಚ್ಚೇನು ಪರಿಚಯ ಮಾಡಿಕೊಡಬೇಕಿಲ್ಲ. ನಾಯಕ ನಟರಾಗಿ ಎರಡು ದಶಕಗಳನ್ನ ಪೂರೈಸಿರೋ ಇವರಿಬ್ಬರು ತಮ್ಮದೇ ಆದ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಜತೆಗೆ ಲಕ್ಷಾಂತರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಈಗ ಈ ನಟರಿಗೆ ಟಕ್ಕರ್​ ಕೊಡೋಕೆ ಮತ್ತಿಬ್ಬರು ನಟರು ಹುಟ್ಟಿಕೊಂಡಿದ್ದಾರೆ.

Anitha E | news18
Updated:June 4, 2019, 12:25 PM IST
ಟಾಲಿವುಡ್​ನಲ್ಲಿ ಹೆಚ್ಚಿದ ಸ್ಪರ್ಧೆ: ಪ್ರಿನ್ಸ್​-ಜೂ.ಎನ್​ಟಿಆರ್​ಗೆ ಪೈಪೋಟಿ ಕೊಡೋಕೆ ನಿಂತಿದ್ದಾರೆ ಮತ್ತಿಬ್ಬರು ಸ್ಟಾರ್​ಗಳು..!
ಮಹೇಶ್​ ಬಾಬು -ಎನ್​ಟಿಆರ್​
  • News18
  • Last Updated: June 4, 2019, 12:25 PM IST
  • Share this:
ಮಹೇಶ್ ಬಾಬು, ಜೂನಿಯರ್ ಎನ್‍ಟಿಆರ್.... ಈ ಹೆಸರುಗಳಿಗೆ ಟಾಲಿವುಡ್‍ನಲ್ಲಿ ಅದರದ್ದೇ ಆದ ಗತ್ತಿದೆ. ಚಿತ್ರರಂಗದಲ್ಲಿ ನಾಯಕ ನಟರಾಗಿ ಎರಡು ದಶಕಗಳಿಂದ ನಾಯಕ ನಟರಾಗಿ  ಆಗಿ ಮಿಂಚುತ್ತಿರುವ ಇವರಿಬ್ಬರು ಸಂಭಾವನೆ ವಿಚಾರದಲ್ಲಿ ಸಹ ತೆಲುಗು ಚಿತ್ರರಂಗದ ಟಾಪ್ ನಟರು. ಇಂತಹ ಟಾಪ್ ನಟರಿಗೆ ಭವಿಷ್ಯದ ಸೂಪರ್​ಸ್ಟಾರ್​ ಅಂತ ಕರೆಸಿಕೊಳ್ಳುತ್ತಿರೋ ಇಬ್ಬರು ನಟರು ಪೈಪೋಟಿ ಕೊಡ್ತಿದ್ದಾರೆ.

ಹೌದು, ಪ್ರಿನ್ಸ್ ಮಹೇಶ್ ಬಾಬು ಹಾಗೂ ಜೂನಿಯರ್ ಎನ್‍ಟಿಆರ್ ಬಗ್ಗೆ ನಿಮಗೆ ಹೆಚ್ಚೇನು ಪರಿಚಯ ಮಾಡಿಕೊಡಬೇಕಿಲ್ಲ. ನಾಯಕ ನಟರಾಗಿ ಎರಡು ದಶಕಗಳನ್ನ ಪೂರೈಸಿರೋ ಇವರಿಬ್ಬರು ತಮ್ಮದೇ ಆದ ಇಮೇಜ್ ಸೃಷ್ಟಿಸಿಕೊಂಡಿದ್ದಾರೆ. ಜತೆಗೆ ಲಕ್ಷಾಂತರ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಇನ್ನು ಇವರ ತಾರಾ ವರ್ಚಸ್ಸಿಗೆ ತಕ್ಕಂತೆ ಸಂಭಾವನೆಯೂ ಸಿಕ್ತಿದೆ. ಇವರಿಬ್ಬರು ಸಂಭಾವನೆ ತೆಲುಗು ಚಿತ್ರರಂಗದ ಮಟ್ಟಿಗೆ ಟಾಪ್​ನಲ್ಲಿರುವ ನಟರು. ಮಹೇಶ್ ಹಾಗೂ ಎನ್‍ಟಿಆರ್ ಚಿತ್ರವೊಂದಕ್ಕೆ 25ರಿಂದ 30 ಕೋಟಿ ಪಡೆಯುತ್ತಾರೆ.ಈಗ ಇವರಿಬ್ಬರಿಗೂ ಪೈಪೋಟಿ ಕೊಡೋಕೆ ಮತ್ತಿಬ್ಬರು ಸ್ಟಾರ್ಸ್ ಹುಟ್ಕೊಂಡಿದ್ದಾರೆ. ಅವರೇ ನಾನಿ ಹಾಗೂ ವಿಜಯ್ ದೇವರಕೊಂಡ. ನ್ಯಾಚುರಲ್ ಸ್ಟಾರ್ ಅಂತ್ಲೇ ಕರೆಸಿಕೊಳ್ಳೋ ನಾನಿ ತೆಲುಗು ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನ ಕೊಡ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ವೈವಿಧ್ಯತೆಯನ್ನ ಕಾಯ್ದುಕೊಳ್ತಿರೋ ನಾನಿ ಇತ್ತೀಚೆಗೆ 'ಜೆರ್ಸಿ' ಮೂಲಕ ದೊಡ್ಡ ಹಿಟ್ ಸಿನಿಮಾ ಕೊಟ್ಟಿದ್ದಾರೆ.

ಇನ್ನು ವಿಜಯ್ ದೇವರಕೊಂಡ 'ಅರ್ಜುನ್ ರೆಡ್ಡಿ' ಮೂಲಕ ತೆಲುಗರ ಹಾಟ್ ಫೇವರೇಟ್ ಆದ ನಟ. ತೆಲುಗು ಚಿತ್ರಪ್ರೇಮಿಗಳು ಪ್ರೀತಿಯಿಂದ ರೌಡಿ ಅಂತ್ಲೇ ಕರೆಯೋ ಈ ನಟ ಸಹ ಬ್ಯಾಕ್ ಟು ಬ್ಯಾಕ್ ಗೆಲುವನ್ನ ಕಾಣ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ನಟನೆಯ `ಡಿಯರ್ ಕಾಮ್ರೆಡ್' ರಿಲೀಸ್‍ಗೆ ರೆಡಿಯಾಗಿದ್ದು, ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯಕ್ಕೆ ಇಬ್ಬರ ಕೆರಿಯರ್ ಗ್ರಾಫ್ ಗಮನಿಸ್ತಿದ್ರೆ, ಮಹೇಶ್ ಬಾಬು, ಎನ್‍ಟಿಆರ್​ ಅವರನ್ನು ಮೀರಿ ನಿಲ್ಲೋದ್ರಲ್ಲಿ ಅನುಮಾನನೇ ಇಲ್ಲ ಅಂತೇಳಲಾಗ್ತಿದೆ.

ಇದನ್ನೂ ಓದಿ: 9 ವರ್ಷ ಹಿಂದೆಯೇ ಶಾರುಖ್​ರ ಸಿನಿಮಾದಲ್ಲಿ ಅಭಿನಯಿಸಿದ್ದ ಮಗಳು ಸುಹಾನಾ ಖಾನ್​..!

ಯಾಕಂದ್ರೆ ಈಗಾಗಲೇ ಇವರ ಸಂಭಾವನೆ 20 ಕೋಟಿ ಸನಿಹಕ್ಕೆ ಬಂದು ನಿಂತಿದೆ, ಇವರಿಬ್ಬರದ್ದು ಇನ್ನೆರಡು ಸಿನಿಮಾಗಳು ಹಿಟ್ ಆದರೂ ಸಾಕು, ನಾನಿ, ವಿಜಯ್ ದೇವರಕೊಂಡ 25ರಿಂದ 30 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಬಹುದೆನೋ?Photos: ಹಾಟ್​ ಲುಕ್​ನಲ್ಲಿ 'ಮಹರ್ಷಿ' ಯಶಸ್ಸಿನ ಅಲೆಯಲ್ಲಿರುವ ಪೂಜಾ ಹೆಗ್ಡೆ
First published:June 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading