news18-kannada Updated:September 16, 2020, 4:56 PM IST
ಉಪೇಂದ್ರ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಹೊಸ ಕಾರು ಖರೀದಿಸಿದ್ದಾರೆ. ಸುಮಾರು 33 ಲಕ್ಷ ರೂಪಾಯಿಯಿಂದ 43 ಲಕ್ಷ ರೂಪಾಯಿ ಬೆಲೆಯ ಕಿಯಾ ಕಾರ್ನಿವಲ್ ಕಾರ್ ರಿಯಲ್ ಸ್ಟಾರ್ ಮನೆಯ ಗ್ಯಾರೇಜ್ ಸೇರಿದೆ. ಇತ್ತೀಚೆಗಷ್ಟೇ ತಮ್ಮ ತಂದೆ, ತಾಯಿ ಜೊತೆಗೆ ಮನೆಯಲ್ಲೇ ಹೊಸ ಕಾರನ್ನು ಅನಾವರಣಗೊಳಿಸಿದ ಉಪ್ಪಿ, ಸಂಭ್ರಮ ಹಂಚಿಕೊಂಡಿದ್ದಾರೆ. ಈಗಾಗಲೇ ಉಪೇಂದ್ರ ಬಳಿ ಜಾಗ್ವಾರ್ 1.35 ಕೋಟಿ ರೂಪಾಯಿ ಬೆಲೆಯ ಐಶಾರಾಮಿ ಜಾಗ್ವಾರ್ ಎಕ್ಸ್ಜೆ ಕಾರು ಹಾಗೂ ಪಜೇರೋ ಸ್ಪೋರ್ಟ್ ಎಸ್ಯುವಿ ಕಾರುಗಳಿವೆ. ಇಷ್ಟೇ ಅಲ್ಲದೆ ಮಾತ್ರವಲ್ಲ ಸೂಪರ್ ಬೈಕ್ ಒಂದನ್ನೂ ಉಪ್ಪಿ ಖರೀದಿಸಿದ್ದಾರೆ.
ಈ ವಾಹನಗಳ ಜೊತೆಗೆ ಈಗ ರಿಯಲ್ ಸ್ಟಾರ್ ಗ್ಯಾರೇಜ್ಗೆ ಕಿಯಾ ಕಾರ್ನಿವಲ್ ಕೂಡ ಎಂಟ್ರಿಯಾಗಿದೆ. ಇದೇ ಸೆಪ್ಟೆಂಬರ್ 18 ರಂದು ಉಪ್ಪಿ ತಮ್ಮ ಜನ್ಮದಿನವನ್ನು ಆಚರಿಸಲಿದ್ದು, ಅದಕ್ಕೂ ಮುನ್ನ ಹೊಸ ಕಾರಿನೊಂದಿಗೆ ರಿಯಲ್ ಸ್ಟಾರ್ ಕಾಣಿಸಿಕೊಂಡಿದ್ದಾರೆ.

ಹೊಸ ಕಾರಿನ ಜೊತೆ ಉಪೇಂದ್ರ
ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಐ ಲವ್ ಯೂ ಬಳಿಕ ಮತ್ತೆ ನಿರ್ದೇಶಕ ಆರ್. ಚಂದ್ರು ಆಕ್ಷನ್ ಕಟ್ನಲ್ಲಿ ನಟಿಸುತ್ತಿದ್ದಾರೆ. ಉಪ್ಪಿ, ಚಂದ್ರು ಕಾಂಬಿನೇಷನ್ನಲ್ಲಿ ಕಬ್ಜ ಸಿನಿಮಾ ಬರೋಬ್ಬರಿ 8 ಭಾಷೆಗಳಲ್ಲಿ ಮೂಡಿಬರಲಿದೆ.
ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಿದ್ದು, ಲಾಕ್ಡೌನ್ನಿಂದಾಗಿ ಸದ್ಯ ಚಿತ್ರತಂಡ ಬ್ರೇಕ್ನಲ್ಲಿದೆ. ಇನ್ನು ಅಭಿಮಾನಿಗಳ ಒತ್ತಾಯದ ಮೇರೆಗೆ ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ನಿರ್ದೇಶನದ ಸಿನಿಮಾವನ್ನೂ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಉಪ್ಪಿ 2 ಬಳಿಕ ರಿಯಲ್ ಸ್ಟಾರ್ ಮತ್ತೆ ಆಕ್ಷನ್ ಕಟ್ ಹೇಳಲು ಮುಂದಾಗಿರುವುದು, ಅಭಿಮಾನಿಗಳಲ್ಲಿ ಸಾಕಷ್ಟು ಸಂತಸ ಮೂಡಿಸಿದೆ.
ಉಪೇಂದ್ರ ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾವನ್ನು ಹುಟ್ಟುಹಬ್ಬದಂದು ಘೋಷಿಸಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿ ಬರುತ್ತಿದ್ದು, ಇದು ನಿಜವಾಗಲಿದೆಯಾ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ. ಒಟ್ಟಿನಲ್ಲಿ ಕೊರೋನಾ ಕಾರಣದಿಂದ ಸಿಂಪಲ್ ಹುಟ್ಟುಹಬ್ಬದ ತಯಾರಿಯಲ್ಲಿರುವ ಉಪ್ಪಿ, ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿದ್ದಾರೆ.
Published by:
zahir
First published:
September 16, 2020, 4:56 PM IST