• Home
  • »
  • News
  • »
  • entertainment
  • »
  • Darhsan: ಮತ್ತೊಂದು ಆಡಿಯೋ ಬಾಂಬ್: ಬರುತ್ತಲೇಯಿವೆ ಅಪರಿಚಿತನ ಬತ್ತಳಿಕೆಯಿಂದ ಹೊಸ ಹೊಸ ಬಾಣಗಳು..!

Darhsan: ಮತ್ತೊಂದು ಆಡಿಯೋ ಬಾಂಬ್: ಬರುತ್ತಲೇಯಿವೆ ಅಪರಿಚಿತನ ಬತ್ತಳಿಕೆಯಿಂದ ಹೊಸ ಹೊಸ ಬಾಣಗಳು..!

ದರ್ಶನ್ ಹಾಗೂ ಇಂದ್ರಜಿತ್​ ಲಂಕೇಶ್​

ದರ್ಶನ್ ಹಾಗೂ ಇಂದ್ರಜಿತ್​ ಲಂಕೇಶ್​

ಸದ್ಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಟ ದರ್ಶನ್‍ರ ಹೇಳಿಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬೀದಿಯಲ್ಲಿ ನಿಂತು ಬಡಿದಾಡಲು ತಾನು ಬೀದಿ ಬಸವನಲ್ಲ. ಲಾಯರ್ ಮೂಲಕವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಅರುಣಾ ಕುಮಾರಿ ಲೋನ್ ಪ್ರಕರಣ ಹೊಸ ಆಯಾಮ ಪಡೆದು ನಾಲ್ಕು ದಿನಗಳಾಗಿವೆ. ಆದರೆ ಈಗ ಆ ಲೋನ್ ಕೇಸ್ ಸೈಡ್‍ಲೈನ್ ಆಗಿ, ನಟ ದರ್ಶನ್‍ರ ಹಲ್ಲೆ ಕೇಸ್‍ಗಳು ಮುನ್ನಲೆಗೆ ಬಂದಿವೆ. ಅದೂ ಒಂದಲ್ಲಾ, ಎರಡಲ್ಲಾ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಜೊತೆಗೆ ನಟ ದರ್ಶನ್ ಅವರ ಕುರಿತ ಆಡಿಯೋ ಮೊನ್ನೆ ಬಿಡುಗಡೆಯಾದರೆ, ಇಂದು ಅವರೇ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಕೂಡ ರಿಲೀಸ್ ಆಗಿದೆ. ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಗೊಂದಲ ಬಗೆಹರಿಯಿತು ಎನ್ನುತ್ತಿರುವಾಗಲೇ ಮತ್ತಷ್ಟು ಬಿಗಡಾಯಿಸಿದೆ. ನಿನ್ನೆ ರಾಬರ್ಟ್ ನಿರ್ಮಾಪಕ ದೊಡ್ಮನೆ ಪ್ರಾಪರ್ಟಿ ವಿಷಯ ಮಾತನಾಡಿದ್ದೇ ಖುದ್ದು ರಾಬರ್ಟ್ ರೊಚ್ಚಿಗೆದ್ದಿದ್ದಾರೆ. ತೋಟದಲ್ಲಿ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ. ಮಾತ್ರವಲ್ಲ ಹಲ್ಲೆಗೊಳಗಾದ ಅಮಾಯಕರ ಪರ ನಿಂತು ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ವಿರುದ್ಧವೂ ಕಿಡಿ ಕಾರಿದ್ದಾರೆ.


ಇದೆಲ್ಲದರ ನಡುವೆ ಇಂದೂ ಸಹ ಹಲವು ಬೆಳವಣಿಗೆಗಳಾಗಿವೆ. ನಿನ್ನೆಯ ಸುದ್ದಿಗೋಷ್ಠಿಯಲ್ಲಿ ವಿನಾಕಾರಣ ತಮ್ಮ ಹೆಸರು ಮಧ್ಯ ತಂದಿದ್ದಕ್ಕೆ ಹಾಗೂ ಪುಡಾಂಗ್ ಅಂತೆಲ್ಲ ಪದಬಳಕೆ ಮಾಡಿದ್ದಕ್ಕೆ ಖುದ್ದು ನಿರ್ದೇಶಕ ಜೋಗಿ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ. ನಟರನ್ನು ಸ್ಟಾರ್​ಗಳನ್ನಾಗಿ ಮಾಡುವುದೇ ನಿರ್ದೇಶಕರು. ಹೀಗಿರುವಾಗ ನಿರ್ದೇಶಕರ ಬಗ್ಗೆ ಆ ರೀತಿಯ ಪದಗಳನ್ನು ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕೆಲ ತಿಂಗಳ ಹಿಂದೆ ನಟ ದರ್ಶನ್‍ರ ಅಭಿಮಾನಿಗಳಿಂದ ಘೇರಾವ್ ಹಾಕಿಸಿಕೊಂಡು ಬೇಸತ್ತಿದ್ದ ಹಿರಿಯ ನಟ ಜಗ್ಗೇಶ್ ಅವರೂ ನಯವಾಗಿ ಕಿವಿಮಾತು ಹೇಳುವ ಪ್ರಯತ್ನ ಮಾಡಿದ್ದಾರೆ.


Darshan vs Umapathy now Jogi Prem stuck in controversy when the actor said he is Pudaang what is the meaning of the word
ದರ್ಶನ್ - ಜೋಗಿ ಪ್ರೇಮ್


ಇನ್ನು ಈ ಎಲ್ಲ ಗೊಂದಲಗಳಿಂದ ದೂರಾಗಿ ಸದ್ಯ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಟ ದರ್ಶನ್‍ರ ಹೇಳಿಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಬೀದಿಯಲ್ಲಿ ನಿಂತು ಬಡಿದಾಡಲು ತಾನು ಬೀದಿ ಬಸವನಲ್ಲ. ಲಾಯರ್ ಮೂಲಕವೇ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ ಓದಿ: Sitara Ghattamaneni: ಹೊಸ ಫೋಟೋಶೂಟ್​ನಲ್ಲಿ ಮಹೇಶ್​ ಬಾಬು ಮಗಳು ಸಿತಾರಾ..!


ನಟ ದರ್ಶನ್ ಹೋಟೆಲ್ ದಿ ಪ್ರಿನ್ಸ್ ಸಂದೇಶ್‍ನಲ್ಲಿ, ದಿ ಸೋಷಿಯಲ್ಸ್ ಪಬ್‍ನಲ್ಲಿ, ತೋಟದಲ್ಲಿ ಕೆಲಸ ಮಾಡುವ ಹುಡುಗನಿಗೆ, ಹಾರ್ಸ್ ರೈಡರ್, ನಿರ್ದೇಶಕ, ನಿರ್ಮಾಪಕರ ಮೇಲೆಲ್ಲಾ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಸೀರಿಯಲ್ ಮಲ್ಟಿಪಲ್ ಅಫೆಂಡರ್ ಆದಾಗ, ಮೆಂಟಲಿ ಡಿಸ್ಟರ್ಬ್ ಆದಾಗ ಟ್ರೀಟ್‍ಮೆಂಟ್ ಪಡೆಯುವುದು ಉತ್ತಮ ಎಂದು ಕಿವಿ ಹಿಂಡಿದ್ದಾರೆ. ಮಾತ್ರವಲ್ಲ ಕೊಚ್ಚೆಯಲ್ಲಿ ಕಲ್ಲು ಹಾಕದೇ ತಮ್ಮ ವಕೀಲರ ಮೂಲಕವೇ ಮುಂದಿನ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.


ಮತ್ತೊಂದೆಡೆ ಸಂಜೆಯ ಹೊತ್ತಿಗೆ ಮತ್ತೊಮ್ಮೆ ಮತ್ತೊಂದು ಆಡಿಯೋ ರಿಲೀಸ್ ಆಗಿದೆ. ಎರಡು ದಿನಗಳ ಹಿಂದೆ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ, ನಿರ್ಮಾಪಕ ಸಂದೇಶ್ ಸ್ವಾಮಿ ಅವರದು ಎನ್ನಲಾದ ಆಡಿಯೋ ರಿಲೀಸ್ ಆಗಿತ್ತ. ಅದರಲ್ಲಿ ತಮ್ಮ ಹೋಟೆಲ್‍ನಲ್ಲಿ ನಡೆದ ಹಲ್ಲೆ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದರು. ಅದರ ಬೆನ್ನಲ್ಲೇ ಇಂದು ನಟ ದರ್ಶನ್ ಅವರದೇ ಎನ್ನಲಾದ ಮತ್ತೊಂದು ಆಡಿಯೋ ರಿಲೀಸ್ ಮಾಡಲಾಗಿದೆ.


ಇದನ್ನೂ ಓದಿ: Bigg Boss Kannada Season 8: ಬಿಗ್ ಬಾಸ್​ ಮನೆಯಿಂದ ಈ ವಾರ ಹೊರ ಹೋಗುವ ಸ್ಪರ್ಧಿ ಇವರೇ ನೋಡಿ..!


ಮೊನ್ನೆಯಂತೆಯೇ ಇಂದ್ರಜಿತ್ ಲಂಕೇಶ್ ಅವರ ಮನೆ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಾಧ್ಯಮದವರ ಕೈಗೆ ಆಡಿಯೋ ಇದ್ದ ಪೆನ್ ಡ್ರೈವ್‍ಗಳನ್ನು ಕೊಟ್ಟು ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿದ್ದಾನೆ. ಇನ್ನು ಈ ಹೊಸ ಆಡಿಯೋ ಕೇಳಿದರೆ ಸಾಕು, ಎಂಥವರೂ ಇದು ನಟ ದರ್ಶನ್ ಅವರೇನಾ ಮಾತಾಡಿರೋದು? ಒಬ್ಬ ನಾಗರಿಕ ಸಮಾಜದಲ್ಲಿ ಇರುವ ವ್ಯಕ್ತಿ ಹೀಗೂ ಮಾತನಾಡಬಲ್ಲನಾ ಎಂಬ ಪ್ರಶ್ನೆಗಳನ್ನು ಮೂಡಿಸುವಂತಿದೆ.


ಹೀಗೆ ದಿನಕಳೆದಂತೆ ಹಲ್ಲೆ ಪ್ರಕರಣ ಹೊಸ ಹೊಸ ಆಯಾಮಗಳನ್ನು ಪಡೆಯುತ್ತಿದೆ. ನಟ ದರ್ಶನ್ ಅವರ ಕುರಿತ ಹೊಸ ಹೊಸ ಆಡಿಯೋಗಳು, ಮಾಹಿತಿಗಳು ಹೊರಬರುತ್ತಿವೆ. ಒಟ್ಟಾರೆ ಈ ಎಲ್ಲ ಆರೋಪಗಳಿಗೆ ನಟ ದರ್ಶನ್ ಅವರೇ ಉತ್ತರ ನೀಡಬೇಕಿದೆ.

Published by:Anitha E
First published: