New Serial: ಸಿರಿ ಕನ್ನಡ ವಾಹಿನಿಯಲ್ಲಿ 3 ಹೊಸ ಸೀರಿಯಲ್​ - ಮೇ 23ರಿಂದ ನಾನ್​ಸ್ಟಾಪ್​ ಮನರಂಜನೆ

Kannada Serial: ಎಸ್ ಎನ್ ಸೇತುರಾಂ ಈ ಹೆಸರನ್ನು ಕೇಳದವರು ಯಾರು ಇಲ್ಲ. ತಮ್ಮ ವಿಭಿನ್ನ ಮಾತುಗಾರಿಕೆ, ನಾಟಕದ ಮೂಲಕ ಪ್ರಸಿದ್ಧರಾಗಿರುವರು ಅವರು. ಅವರು ನಟಿಸಿರುವ ಧಾರಾವಾಹಿ ಎಂದರೆ ಜನರು ಮುಗಿ ಬಿದ್ದು ನೋಡುತ್ತಾರೆ,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಕೆಲ ವರ್ಷದ ಹಿಂದೆ ಆರಂಭವಾದ ಹೊಸ ಎಂಟರ್​ಟೈನ್​ಮೆಂಟ್​ ಚಾನೆಲ್ (Entertainment Channel) ​ ಸಿರಿ ಕನ್ನಡ (Siri Kannada) ವಿಭಿನ್ನ ಧಾರಾವಾಹಿ (Serial)  ಹಾಗೂ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುತ್ತಿದೆ. ನಾರಿಗೊಂದು‌ ಸೀರೆ' , 'ಲೈಫ್ ಓಕೆ', 'ಟೂರಿಂಗ್‌ ಟಾಕೀಸ್' 'ಧ್ರುವ ನಕ್ಷತ್ರ', 'ಪ್ರೇಮ್ ಜೊತೆ ಅಂಜಲಿ' ಹೀಗೆ ಅದ್ಭುತ ಧಾರಾವಾಹಿಗಳನ್ನು ಈ ಚಾನೆಲ್ ಜನರಿಗೆ ಮನರಂಜನೆ ನೀಡುತ್ತಿದೆ. ಇದೀಗ ಈ ವಾಹಿನಿಯಲ್ಲಿ ಮತ್ತೆ ಮೂರು ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದ್ದು, ಮೇ 21ರಿಂದ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಧಾರಾವಾಹಿಗಳು ಪ್ರಸಾರವಾಗುತ್ತಿವೆ.  

ರಜಿಯಾ ರಾಮ್

​ಈ ಧಾರಾವಾಹಿಯ ಟ್ರೈಲರ್​ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈ ಚಾನೆಲ್​ ಮಾತ್ರವಲ್ಲದೇ ಕನ್ನಡ ಕಿರುತೆರೆಯಲ್ಲಿಯೇ ಈ ಧಾರಾವಾಹಿ ನಿಜಕ್ಕೂ ವಿಭಿನ್ನ ಎನ್ನಬಹುದು. ಧರ್ಮಕ್ಕಿಂತ ಪ್ರೀತಿ ಮಿಗಿಲು ಎನ್ನುವ ಕಥಾ ಹಂದರವನ್ನು ಈ ಧಾರಾವಾಹಿ ಹೊಂದಿದೆ ಎನ್ನಲಾಗುತ್ತಿದ್ದು, ಭಾರತದ ಮಣ್ಣಿನಲ್ಲಿ ಆಳವಾಗಿ ಬೇರೂರಿರುವ ವಿಶಿಷ್ಟ ಪ್ರೇಮಕಥೆಯ ರಜಿಯಾ ರಾಮ್' ಇದೇ 23ರಿಂದ ಪ್ರಸಾರವಾಗಲಿದ್ದು, ರಾತ್ರಿ.7.30ಕ್ಕೆ ಪ್ರಸಾರವಾಗಲಿದೆ ಎಂದು ವಾಹಿನಿ ಮಾಹಿತಿ ನೀಡಿದೆ.

ಇನ್ನು ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ಈಗಾಗಲೇ ಹಲವಾರು ಸಂಚಿಕೆಯ ಶೂಟಿಂಗ್​ ಮುಗಿದಿದ್ದು, ಆರ್​ಎಸ್​ಎಸ್​ ಸೇವಕನಾಗಿರುವ ರಾಮ್​ ಬ್ರಾಹ್ಮಣ ಹುಡುಗನಾಗಿರುತ್ತಾನೆ, ರಜಿಯಾ ಲಾಯರ್​ ಆಗಬೇಕು ಎಂಬ ಆಸೆಯ ಮೇಲೆ ಮನೆ ಬಿಟ್ಟು ಬರುತ್ತಾಳೆ. ಬೇರೆ, ಬೇರೆ ದಾರಿಯಲ್ಲಿರುವ ಈ ಇಬ್ಬರು ಹೇಗೆ ಭೇಟಿಯಾಗುತ್ತಾರೆ, ಅವರಿಬ್ಬರ ನಡುವೆ ಪ್ರೀತಿ ಹೇಗೆ ಆರಂಭವಾಗುತ್ತದೆ. ನಂತರ ಏನಾಗುತ್ತದೆ ಎಂಬುದು ಈ ಧಾರಾವಾಹಿಯ ಮುಖ್ಯ ಕಥೆ.

ಮರೆತು ಹೋದವರು
ಇದು ಈ ಕಾಲದ ಯುವಕ, ಯುವತಿಯರ ಸುತ್ತಾ ಹೆಣೆದಿರುವ ಕಥೆಯಾಗಿದೆ. ಇದರಲ್ಲಿ ಸಂಬಂಧಗಳ ಮೌಲ್ಯವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ. ನಿರ್ದೇಶಕರ ಪ್ರಕಾರ ಈಗಿನ ಕಾಲದ ಯುವಜನತೆಗೆ ನಮ್ಮ ಸಂಬಂಧಿಕರ ಬಗ್ಗೆ ತಿಳಿದಿರುವುದಿಲ್ಲ, ಒಬ್ಬರಿಗೊಬ್ಬರಿಗೆ ಸಂಪರ್ಕವೇ ಇರುವುದು, ಅಂತಹ ಸಂಬಂಧಿಕರನ್ನು ಒಂದು ಮಾಡಿ ಮದುವೆ ಆಗುವ ಕನಸನ್ನು ಹೊಂದಿರುವ ಜೋಡಿಗಳ ಕಥೆಯೇ ಈ ಧಾರಾವಾಹಿಯ ಜೀವಾಳ. ಮರೆತು ಹೋದವರನ್ನು ಒಂದು ಮಾಡುವು ಪ್ರಯತ್ನ ಮಾಡುವುದರಿಂದ ಅದಕ್ಕೆ ಮರೆದು ಹೋದವರು ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: ನಾಳೆ ಸೆಟ್ಟೇರಲಿದೆ ಶ್ರೀಮುರಳಿ ಅಭಿನಯದ ಹೊಸ ಚಿತ್ರ - ಬಘೀರ ಮೂಲಕ ಮತ್ತೆ ಘರ್ಜಿಸಲು ರೋರಿಂಗ್ ಸ್ಟಾರ್​ ರೆಡಿ

ಯುಗಾಂತರ
ಎಸ್ ಎನ್ ಸೇತುರಾಂ ಈ ಹೆಸರನ್ನು ಕೇಳದವರು ಯಾರು ಇಲ್ಲ. ತಮ್ಮ ವಿಭಿನ್ನ ಮಾತುಗಾರಿಕೆ, ನಾಟಕದ ಮೂಲಕ ಪ್ರಸಿದ್ಧರಾಗಿರುವರು ಅವರು. ಅವರು ನಟಿಸಿರುವ ಧಾರಾವಾಹಿ ಎಂದರೆ ಜನರು ಮುಗಿ ಬಿದ್ದು ನೋಡುತ್ತಾರೆ, ಆದರೆ ಈ ಧಾರಾವಾಹಿ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಮಂಥನ ಸೇರಿದಂತೆ ವಿವಿಧ ಧಾರಾವಾಹಿಯನ್ನು ಈಗಾಗಲೇ ನಿರ್ದೇಶನ ಮಾಡಿ ಜನರ ಮನ ಗೆದ್ದಿರುವ ಇವರ ಮತ್ತೊಂದು ಪ್ರಯತ್ನ ಇದಾಗಿದ್ದು, ಜನರು ಈ ಧಾರಾವಾಹಿ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದರೆ ತಪ್ಪಿಲ್ಲ.

ಸುಮಾರು 13 ವರ್ಷಗಳ ನಂತರ ಸೇತುರಾಂ ಮತ್ತೆ ಧಾರಾವಾಹಿ ನಿರ್ದೇಶಿಸಿದ್ದು, ಯುಗಾಂತರ ಧಾರಾವಾಹಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ ಎನ್ನಬಹುದು. ಈಗಾಗಲೇ ಇದರ ಪ್ರೋಮೋ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಕ್ವೀನ್​ಗೆ ಪ್ರಿಯಾಂಕಾ ಉಪೇಂದ್ರ ಸಾಥ್​ - ಬಾಡಿ ಶೇಮಿಂಗ್​ ಸರಿಯಲ್ಲ ಎಂದ ನಟಿ

ಇನ್ನು ಸಿರಿ ಕನ್ನಡದಲ್ಲಿ ಬೇರೆ ಬೇರೆ ಧಾರಾವಾಹಿಗಳು ಸಹ ಆರಂಭವಾಗಲಿದ್ದು, ಕೆಲ ದಿನಗಳಲ್ಲಿ ನಟ ರಾಘವೇಂದ್ರ ರಾಜಕುಮಾರ್ ಅವರ  ನಿರ್ಮಾಣದಲ್ಲಿ ಮೂಡಿ ಬರುತ್ತಿರುವ'ವಿಜಯ ದಶಮಿ' ಸೇರಿದಂತೆ ಹಲವು ಧಾರಾವಾಹಿ ಆರಂಭವಾಗಲಿದೆ ಎಂದು ವಾಹಿನಿ ಮುಖ್ಯಸ್ಥರು ಮಾಹಿತಿ ನೀಡಿದ್ಧಾರೆ.
Published by:Sandhya M
First published: