Bigg Boss Kannada Season 8: ಚಕ್ರವರ್ತಿಯನ್ನು ಮನೆಯಿಂದ ಹೊರ ಕಳುಹಿಸಿ: ಅಭಿಯಾನ ಆರಂಭಿಸಿದ ನೆಟ್ಟಿಗರು..!

Bigg Boss Kannada 8: ಪ್ರಿಯಾಂಕಾ ಚಕ್ರವರ್ತಿ ಅವರ ಹೆಸರು ಹೇಳುತ್ತಿದ್ದಂತೆಯೇ ಚಕ್ರವರ್ತಿ ಅವರು ಅಸಭ್ಯವಾದ ಸನ್ನೆ ಮಾಡುವ ಮೂಲಕ ಈಗ ವಿವಾದಕ್ಕೀಡಾಗಿದ್ದಾರೆ. ಒಂದು ವಾರಾಂತ್ಯದಲ್ಲಿ ಚಕ್ರವರ್ತಿ ಅವರಿಗೆ ಅವರು ಮಾಡಿರುವ ಕೆಲಸಕ್ಕೆ ಯಾವ ರೀತಿ ಕ್ಲಾಸ್​ ಸಿಗಲಿದೆ ಅಥವಾ ಶಿಕ್ಷೆಯಾಗಲಿದೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಿಯಾಂಕಾ ತಿಮ್ಮೇಶ್​

ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಿಯಾಂಕಾ ತಿಮ್ಮೇಶ್​

  • Share this:
ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರು ಬಿಗ್ ಬಾಸ್​ ಕನ್ನಡ ಸೀಸನ್​ 8ರ ಮೊದಲ ಇನ್ನಿಂಗ್ಸ್​ನಲ್ಲೇ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದವರು. ಆರಂಭದಲ್ಲಿ ಚಕ್ರವರ್ತಿ ಚಂದ್ರಚೂಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಅವರು ತುಂಬಾ ಆತ್ಮೀಯವಾಗಿದ್ದರು. ಪ್ರಿಯಾಂಕಾ ತಿಮ್ಮೇಶ್ ನನ್ನ ತಂಗಿ ಇದ್ದಂತೆ ಎಂದೆಲ್ಲ ಹೇಳುತ್ತಿದ್ದ ಚಕ್ರವರ್ತಿ ಇಂದು ಇದೇ ಹುಡುಗಿಗೆ ಈಗ ಅಶ್ಲೀಲ ಸನ್ನೆ ತೋರುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಹೌದು, ಮೆಒದಲ ಇನ್ನಿಂಗ್ಸ್​ ಮುಗಿಯ ಹೊತ್ತಿನಿಂದ ಸೆಕೆಂಡ್​ ಇನ್ನಿಂಗ್ಸ್​ ಆರಂಭವಾದ ಮೇಲೂ ಪ್ರಿಯಾಂಕಾ ಹಾಗೂ ಚಕ್ರವರ್ತಿ ಅವರ ನಡುವಿನ ಮನಸ್ತಾಪ ಸರಿಹೋಗಲೇ ಇಲ್ಲ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಪ್ರಿಯಾಂಕಾ ಅವರು ಚಕ್ರವರ್ತಿ ಚುಚ್ಚು ಮಾತುಗಳನ್ನಾಡಿದಾಗಲೆಲ್ಲ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದರು. ಕಿಚ್ಚ ಸುದೀಪ್​ ಸಹ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲೂ ಸಹ  ಚಕ್ರವರ್ತಿ ಅವರು ಬುದ್ಧಿಮಾತು ಹೇಳಿಸಿಕೊಂಡಿದ್ದರು. 

ಈ ಹಿಂದೆಯೇ ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತೇನೆ ಎಂದು ಹೇಳಿದರೆ ಸಾಲದು, ಬೇರೆ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು. ಅವರ ವೈಯಕ್ತಿಕ ವಿಷಯಗಳ ಬಗ್ಗೆ ಕಮೆಂಟ್​ ಮಾಡುವ ಮುನ್ನ ಯೋಚಿಸಿ ಎಂದು ಚಕ್ರವರ್ತಿ ಅವರಿಗೆ ಸುದೀಪ್ ಖಾರವಾಗಿಯೇ ಬುದ್ಧಿ ಹೇಳಿದ್ದರು. ಆದರೂ ಸಹ ಚಕ್ರವರ್ತಿ ಬುದ್ಧಿ ಕಲಿತಿಲ್ಲ.






ಬಿಗ್ ಬಾಸ್​ ಮನೆಯಲ್ಲಿ ಕೂಗಾಟ-ಜಗಳ ಹಾಗೂ ಅಸಭ್ಯ ಪದಗಳ ಬಳಕೆ ಮುಂದುವರೆಯಿತು. ಕಳೆದ ವಾರವೂ ಸಹ ಸುದೀಪ್​ ಚಕ್ರವರ್ತಿ ಅವರಿಗೆ ಕೆಟ್ಟ ಪದಗಳ ಬಳಕೆ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ನಿನ್ನೆ ಸಹ ಚಕ್ರವರ್ತಿ ಕಳಪೆ ಎಂದು ಆಯ್ಕೆಯಾಗಿ ಜೈಲು ಸೇರಿದಾಗ ಮಾಡಿದ ಪ್ರತಿಭಟನೆ ಹಾಗೂ ಅವರು ಇತರೆ ಸ್ಪರ್ಧಿಗಳ ಹೆಸರಿನಲ್ಲಿ ರಿಲೀಸ್​ ಮಾಡಿದ್ದ ಪೋಸ್ಟರ್ ವಿಷಯವಾಗಿಯೂ ಬುದ್ಧಿ ಹೇಳಿಸಿಕೊಂಡಿದ್ದರು.

ಇದನ್ನೂ ಓದಿ: ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತದ ಫೋಟೋಗಳು..!

ಪ್ರತಿ ಸಲ ಚಕ್ರವರ್ತಿ ಇನ್ನು ಮುಂದೆ ಹೀಗೆ ಆಗುವುದಿಲ್ಲ ಎನ್ನುವುದು, ನಂತರ ತಮ್ಮ ಅದೇ ಹಳೇ ಚಾಳಿ ಮುಂದುವರೆಸುವುದನ್ನು ಮರುಕಳಿಸುತ್ತಲೇ ಇದ್ದಾರೆ. ಸೂಪರ್ ಸಂಡೆ ವಿಥ್ ಸುದೀಪ ಅವರ  ಸಂಚಿಕೆಯಲ್ಲಿ ಪ್ರಿಯಾಂಕಾ ತಿಮ್ಮೇಶ್​ ಅವರು ಎಲಿಮಿನೇಟ್ ಆಗಿ ಹೊರ ಹೋದರು. ಆಗ ಬಿಗ್​ ಬಾಸ್​ ಕೊಟ್ಟಿದ್ದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಚಕ್ರವರ್ತಿ ಚಂದ್ರಚೂಡ ಅವರನ್ನು ಎಲಿಮಿನೇಷನ್​ ಆಗಲು ನಾಮಿನೇಟ್ ಮಾಡಿ ಹೋದರು.

ಪ್ರಿಯಾಂಕಾ ಚಕ್ರವರ್ತಿ ಅವರ ಹೆಸರು ಹೇಳುತ್ತಿದ್ದಂತೆಯೇ ಚಕ್ರವರ್ತಿ ಅವರು ಅಸಭ್ಯವಾದ ಸನ್ನೆ ಮಾಡುವ ಮೂಲಕ ಈಗ ವಿವಾದಕ್ಕೀಡಾಗಿದ್ದಾರೆ. ಒಂದು ವಾರಾಂತ್ಯದಲ್ಲಿ ಚಕ್ರವರ್ತಿ ಅವರಿಗೆ ಅವರು ಮಾಡಿರುವ ಕೆಲಸಕ್ಕೆ ಯಾವ ರೀತಿ ಕ್ಲಾಸ್​ ಸಿಗಲಿದೆ ಅಥವಾ ಶಿಕ್ಷೆಯಾಗಲಿದೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಇದನ್ನೂ ಓದಿ: Bigg Boss 8 Elimination: ಬಿಗ್ ಬಾಸ್​ ಮನೆಯಿಂದ ಹೊರ ಹೋಗುತ್ತಾ ಚಕ್ರವರ್ತಿಗೆ ಶಾಕ್​ ಕೊಟ್ಟ ಪ್ರಿಯಾಂಕಾ ತಿಮ್ಮೇಶ್

ಮತ್ತೊಂದು ಕಡೆ  ಹೆಣ್ಣು ಮಕ್ಕಳಿಗೆ ಗೌರವ ಕೊಡುವುದಾಗಿ ಹೇಳುವ ಚಕ್ರವರ್ತಿ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ತೋರಿದ ಅಸಭ್ಯ ಸನ್ನೆಯ ಕುರಿತಾಗಿ ಸಿಟ್ಟೆಗೆದ್ದಿದ್ದಾರೆ. ಇಂತಹ ವ್ಯಕ್ತಿಯನ್ನು ಬಿಗ್ ಬಾಸ್ ಮನೆಯಿಂದ ಹೊರಗಿಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.















ಚಕ್ರವರ್ತಿ ಅವರು ಮಧ್ಯದ ಬೆರಳನ್ನು ತೋರಿದ್ದು, ಅವರ ಈ ವರ್ತನೆಯಿಂದಾಗಿ ನೆಟ್ಟಿಗರು ಈಗ ಟ್ರೋಲ್​ ಮಾಡುತ್ತಿದ್ದಾರೆ. ಸಾಲದಕ್ಕೆ ಚಕ್ರವರ್ತಿ ಅವರಿಗೆ ಮನಸ್ಸಿಗೆ ಬಂದಂತೆ ಕಮೆಂಟ್ ಮಾಡುವ ಮೂಲಕ ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆ.
Published by:Anitha E
First published: