HOME » NEWS » Entertainment » NETIZENS PRAISED SHARAD KELKAR MORE THAN AKSHAY KUMAR IN LAXMII MOVIE AE

Laxmi: ಅಕ್ಷಯ್​ ಕುಮಾರ್​ ಬದಲು ಸಿನಿಮಾದಲ್ಲಿನ ರಿಯಲ್​ ಲಕ್ಷ್ಮಿ ಪಾತ್ರಧಾರಿ ಶರದ್​ ಕೇಲ್ಕರ್​ ಮೇಲೆ ಫಿದಾ ಆದ ನೆಟ್ಟಿಗರು..!

sharad kelkar: ಕಿರುತೆರೆ ಇರಲಿ, ಬೆಳ್ಳಿತೆರೆ ಇರಲಿ, ಶರದ್​ ಕೇಲ್ಕರ್​ ಅಭಿನಯಕ್ಕೆ ಮನ ಸೋಲದ ಪ್ರೇಕ್ಷಕರಿಲ್ಲ. ನೈಜ ಅಭಿನಯದಿಂದಲೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಶರದ್​ ಕೇಲ್ಕರ್​ ಈಗ ಮತ್ತೊಮ್ಮೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Anitha E | news18-kannada
Updated:November 10, 2020, 5:10 PM IST
Laxmi: ಅಕ್ಷಯ್​ ಕುಮಾರ್​ ಬದಲು ಸಿನಿಮಾದಲ್ಲಿನ ರಿಯಲ್​ ಲಕ್ಷ್ಮಿ ಪಾತ್ರಧಾರಿ ಶರದ್​ ಕೇಲ್ಕರ್​ ಮೇಲೆ ಫಿದಾ ಆದ ನೆಟ್ಟಿಗರು..!
ಶರದ್​ ಕೇಲ್ಕರ್​
  • Share this:
ಅಕ್ಷಯ್ ಕುಮಾರ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಷ್ಮಿ ಒಟಿಟಿ ಮೂಲಕ ತೆರೆ ಕಂಡಿದೆ. ತೆರೆ ಕಾಣುವ ಮೊದಲ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಅದು ಸಿನಿಮಾ ನೋಡಿದ ಸಿನಿಪ್ರಿಯರಲ್ಲಿ ಅರ್ಧ ಗಂಟೆಯೂ ಉಳಿಯಲಿಲ್ಲ. ಲಕ್ಷ್ಮಿ ಚಿತ್ರ ರಿಲೀಸ್​ ಆಗುತ್ತಿದ್ದಂತೆಯೇ, ಸಿನಿಮಾ ನೋಡಿದವರೆಲ್ಲ ಟೈಮ್​ ವೇಸ್ಟ್​ ಎಂದು ಹೇಳಲಾರಂಭಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಸಹ ಅಗತ್ಯಕ್ಕಿಂತ ಹೆಚ್ಚಾಗಿಯೇ ನಟಿಸಿದ್ದಾರೆ ಎಂದು ವ್ಯಂಗ್ಯ ಮಾಡಲಾಗುತ್ತಿದೆ. ಆದರೆ ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ನೆಟ್ಟಿಗರು, ಚಿತ್ರದಲ್ಲಿನ ರಿಯಲ್​ ಲಕ್ಷ್ಮಿ ಪಾತ್ರಧಾರಿ ಬಗ್ಗೆ ಮೆಚ್ಚುಗೆಯ ಮಳೆ ಸುರಿಸುತ್ತಿದ್ದಾರೆ. ಚಿತ್ರದಲ್ಲಿ ಲಕ್ಷ್ಮಿ ಪಾತ್ರದಲ್ಲಿ ನಟಿಸಿರುವ ಪೋಷಕ ನಟ ಶರದ್​ ಕೇಲ್ಕರ್​ ಅವರ ಅಭಿನಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಶರದ್​ ಕೇಲ್ಕರ್​, ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದಿರುವ ಪ್ರತಿಭಾನ್ವಿತ ಕಲಾವಿದ. ತಾನಾಜಿ ಸಿನಿಮಾದಲ್ಲಿ ಶಿವಾಜಿ ಪಾತ್ರದಲ್ಲಿ ಮಿಂಚಿರುವ ನಟ. 

ಕಿರುತೆರೆ ಇರಲಿ, ಬೆಳ್ಳಿತೆರೆ ಇರಲಿ, ಶರದ್​ ಕೇಲ್ಕರ್​ ಅಭಿನಯಕ್ಕೆ ಮನ ಸೋಲದ ಪ್ರೇಕ್ಷಕರಿಲ್ಲ. ನೈಜ ಅಭಿನಯದಿಂದಲೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಶರದ್​ ಕೇಲ್ಕರ್​ ಈಗ ಮತ್ತೊಮ್ಮೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.




ಲಕ್ಷ್ಮಿ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ಗಿಂತ ಹೆಚ್ಚಾಗಿ ಶರದ್ ಅವರ ಅಭಿನಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಶರತ್​ ಅವರ ಅಭಿನಯ ಹಾಗೂ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಟ್ವೀಟ್​ ಮಾಡುತ್ತಿದ್ದಾರೆ.



















2011ರಲ್ಲಿ ತಮಿಳಲ್ಲಿ ರಿಲೀಸ್​ ಆಗಿದ್ದ ಕಾಂಚನಾ ಚಿತ್ರದ ಹಿಂದಿ ರಿಮೇಕ್​ ಇದಾಗಿದೆ. ಈ ಚಿತ್ರವನ್ನು ತಮಿಳಿನಲ್ಲಿ ನೋಡಿದ್ದವರು, ಹಿಂದಿಗಿಂತ ಅದೇ ಪರವಾಗಿಲ್ಲ ಎನ್ನುತ್ತಿದ್ದಾರೆ. ತಮ್ಮ ಲುಕ್​ಗಳಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದ ಅಕ್ಷಯ್​ ಈಗ, ತಮ್ಮ ಅಭಿನಯದ ಮೂಲಕ ಮೋಡಿ ಮಾಡುವಲ್ಲಿ ಸೋತಿದ್ದಾರೆ.
Published by: Anitha E
First published: November 10, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories