Pratik Gandhi: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆ ನಟ ಪ್ರತೀಕ್ ಗಾಂಧಿ ಬಂಧಿಸುವಂತೆ ನೆಟ್ಟಿಗರ ಆಗ್ರಹ ..

Bhavai Film: "ಭಾವೈ" ಯಾವುದೇ ಧಾರ್ಮಿಕ ನಂಬಿಕೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಮತ್ತು ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ "ಯು" ಪ್ರಮಾಣಪತ್ರದೊಂದಿಗೆ ಅಂಗೀಕರಿಸಲ್ಪಟ್ಟಿದೆ ಎಂದು  ಸಿನಿಮಾ ತಂಡ ತಿಳಿಸಿದೆ.  

ಬಾವೈ ಚಿತ್ರದ ಪೋಸ್ಟರ್

ಬಾವೈ ಚಿತ್ರದ ಪೋಸ್ಟರ್

  • Share this:
ನಟ ಪ್ರತೀಕ್ ಗಾಂಧಿ(Pratik Gandhi) ಅವರ ಬಾಲಿವುಡ್(Bollywood) ಚೊಚ್ಚಲ ಚಿತ್ರ ಭಾವೈ ಚಿತ್ರದ ಟ್ರೇಲರ್ ಆನ್‌ಲೈನ್‌ನಲ್ಲಿ  ಬಿಡುಗಡೆಯಾಗಿದ್ದು, ಅದು ವಿವಾದಕ್ಕೆ ಕಾರಣವಾಗಿದೆ. ಟ್ರೇಲರ್ ಬಿಡುಗಡೆ  ನಂತರ ಅವರನ್ನು ಬಂಧಿಸುವಂತೆ ಮತ್ತು ಟ್ವಿಟರ್‌ನಲ್ಲಿ ನಿಷೇಧಿಸುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಕಳೆದ ವಾರ, ನಿರ್ಮಾಪಕರು ಚಿತ್ರದ ಶೀರ್ಷಿಕೆಯನ್ನು "ರಾವಣ ಲೀಲಾ (ಭಾವೈ)" ನಿಂದ "ಭಾವೈ" ಎಂದು ಬದಲಾಯಿಸಿದ್ದರು. ಹಾರ್ದಿಕ್ ಗಜ್ಜರ್ ನಿರ್ದೇಶಿಸುತತಿರುವ ಈ ಚಿತ್ರ , ಗುಜರಾತಿನ ಜನಪ್ರಿಯ ಜಾನಪದ ರಂಗಭೂಮಿ ಭಾವೈ ಕುರಿತಾಗಿದೆ.  ಇದರಲ್ಲಿ ಪ್ರತೀಕ್ ಗಾಂಧಿ ರಾಜಾರಾಮ ಜೋಶಿಯ ಪಾತ್ರವನ್ನು ನಿರ್ವಹಿಸುತ್ತಿದ್ದು,  ಅವರು ರಾಮಲೀಲಾ ಪ್ರಸ್ತುತಿಯಲ್ಲಿ ಸಾಂಪ್ರದಾಯಿಕ ಪಾತ್ರವಾದ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. 

ಚಿತ್ರದ ಮೊದಲ ಟ್ರೈಲರ್ನಲ್ಲಿ ಸ್ಕ್ಯಾಮ್ 1992 ಸ್ಟಾರ್ ಮತ್ತು ರಾಮ್ ಪಾತ್ರದಲ್ಲಿ ನಟಿಸುತ್ತಿರುವ ಅವರ ಸಹ ನಟನ  ಸೀನ್​ಗಳನ್ನು ಒಳಗೊಂಡಿತ್ತು ಅದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿದ್ದು, ಪ್ರತೀಕ್ ಅವರನ್ನು ಬಂಧಿಸುವಂತೆ ಒತ್ತಾಯ ಕೇಳಿ ಬಂದಿದ್ದು, ಅನೇಕರು ಪ್ರತೀಕ್ ನ ಬಂಧನ ಮತ್ತು  ಅವರನ್ನು ಟ್ವಿಟ್ಟರ್​ನಿಂದ ನಿಷೇಧಿಸುವಂತೆ ಕರೆ ನೀಡಿದ್ದಾರೆ.

ಈಗ, ನಿರ್ಮಾಪಕರು ಸ್ಪಷ್ಟೀಕರಣವನ್ನು ನೀಡಿದ್ದು, ಅವರು ಚಿತ್ರದಿಂದ ಆ ಸೀನ್​ ಅನ್ನು ತೆಗೆದುಹಾಕಿದ್ದಾರೆ ಮತ್ತು ಚಿತ್ರವು ಯಾವುದೇ "ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದಿಲ್ಲ ಎಂದು  ಭರವಸೆ ನೀಡಿದ್ದಾರೆ.  ಪೆನ್ ಸ್ಟುಡಿಯೋಸ್ ನ ಅಧಿಕೃತ  ಟ್ವಿಟ್ಟರ್ ಖಾತೆಯಲ್ಲಿ   ಕೊಟ್ಟಿರುವ ಹೇಳಿಕೆಯಲ್ಲಿ, ತಯಾರಕರು ಈ ಚಿತ್ರವು ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ವ್ಯಕ್ತಿಗಳ ಕಾಲ್ಪನಿಕ ಪ್ರೇಮಕಥೆ  ಮತ್ತು ಅವರ ಜೀವನವು ದಿನ ಕಳೆದಂತೆ ಹೇಗೆ ಬದಲಾಗುತ್ತದೆ ಎಂಬುದನ್ನ ಹೇಳುತ್ತದೆ ಎಂದು ಎಂದು ಹೇಳಿದರು.

ಇದನ್ನೂ ಓದಿ: ಅನುಮತಿ ಇಲ್ಲದೆ ತನ್ನ ಫೋಟೋ ತೆಗೆದ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡ ನಟ ಅಸ ಬಟರ್‌ಫೀಲ್ಡ್..!

ಚಲನಚಿತ್ರದ ಪ್ರೋಮೋವನ್ನು "ರಾವಣ ಲೀಲಾ" ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಯಿತು, ಏಕೆಂದರೆ ಈ ನಾಟಕವು ರಾವಣನ ಪಾತ್ರವನ್ನು ನಿರ್ವಹಿಸುವ ನಾಯಕ ನಟ ಮಾಡಿದ್ದಾರೆ. ಪ್ರೋಮೋ ಶೀರ್ಷಿಕೆ ಮತ್ತು ಪ್ರೋಮೋದಲ್ಲಿನ ಸಂಭಾಷಣೆಗೆ ಸಂಬಂಧಿಸಿ ಗೌರವದೊಂದಿಗೆ . ಸಂಭಾಷಣೆ 'ರಾವಣ ಲೀಲಾ ಭಾಗವನ್ನು  ಚಿತ್ರದಿಂದ ಮತ್ತು ಪ್ರೋಮೋದಿಂದ ತೆಗೆದುಹಾಕಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ನಮ್ಮ ವೀಕ್ಷಕರ ಭಾವನೆಗಳು ನಮಗೆ ಮುಖ್ಯ ಎಂದು ನಿರ್ಮಾಪಕರು ತಿಳಿಸಿದ್ದಾರೆ.

"ಭಾವೈ" ಯಾವುದೇ ಧಾರ್ಮಿಕ ನಂಬಿಕೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಮತ್ತು ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ "ಯು" ಪ್ರಮಾಣಪತ್ರದೊಂದಿಗೆ ಅಂಗೀಕರಿಸಲ್ಪಟ್ಟಿದೆ ಎಂದು  ಸಿನಿಮಾ ತಂಡ ತಿಳಿಸಿದೆ.

ನಾವು ಹಿಂದೂ ಸಂಸ್ಕೃತಿ ಮತ್ತು ರಾಮಾಯಣದ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇವೆ. ಚಲನಚಿತ್ರ ಅಥವಾ ಅದರ ಯಾವುದೇ ಭಾಗವು ಯಾವುದೇ ಧಾರ್ಮಿಕ ಭಾವನೆಗಳನ್ನು ಅಥವಾ ಧಾರ್ಮಿಕ ನಂಬಿಕೆಗಳನ್ನು ನೋಯಿಸುವುದಿಲ್ಲ. "ಭಾವೈ" ಚಿತ್ರವನ್ನು ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ 'ಯು' ವರ್ಗದಲ್ಲಿ ಅನುಮೋದಿಸಿದೆ ಮತ್ತು ಅಂಗೀಕರಿಸಿದೆ ಎಂದಿದ್ದಾರೆ.

ಡಿಜಿಟಲ್ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ನಮ್ಮ ಚಿತ್ರ ‘ಭವೈ’ಗೆ ಸಂಬಂಧಿಸಿದ ಎಲ್ಲಾ, ತಪ್ಪು ಮತ್ತು ಅನುಮಾನಗಳನ್ನು ನಿವಾರಿಸಲು ಬಯಸುತ್ತೇವೆ ಎಂದು ತಂಡ ಹೇಳಿದೆ.

ಇದನ್ನೂ ಓದಿ: ನಂಬಿದ್ರೆ ನಂಬಿ…ಈ ತಾರೆಯರು ಎಣ್ಣೆ ಕುಡಿಯಲ್ಲ, ಸಿಗರೇಟ್ ಮುಟ್ಟಲ್ವಂತೆ!

ಈ ಚಿತ್ರವನ್ನು ಜಯಂತಿಲಾಲ್ ಗಡಾ (ಪೆನ್ ಸ್ಟುಡಿಯೋಸ್) ನಿರ್ಮಿಸುತ್ತಿದ್ದು, ಧವಳ ಜಯಂತಿಲಾಲ್ ಗಡಾ, ಅಕ್ಶಯ್ ಜಯಂತಿಲಾಲ್ ಗಡಾ, ಪಾರ್ಥ್ ಗಜ್ಜರ್, ಮತ್ತು ಹಾರ್ದಿಕ್ ಗಜ್ಜರ್ ಚಲನಚಿತ್ರಗಳನ್ನು ಬ್ಯಾಕ್ ಬೆಂಚರ್ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಿಸಿದ್ದಾರೆ. "ಭಾವೈ" ನಲ್ಲಿ ಐಂದ್ರಿತಾ ರೇ, ರಾಜೇಂದ್ರ ಗುಪ್ತಾ, ರಾಜೇಶ್ ಶರ್ಮಾ, ಮತ್ತು ಅಭಿಮನ್ಯು ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಅಕ್ಟೋಬರ್ 1 ರಂದು ಬಿಡುಗಡೆಯಾಗಲಿದೆ.
Published by:Sandhya M
First published: