Yash Radhika Pandit: ಕನ್ನಡ ಮರೆತ ರಾಕಿಂಗ್​ ಜೋಡಿ ಯಶ್​​-ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!

Yash Radhika Pandith: ಕನ್ನಡಿಗರು ಯಾರನ್ನ ಎಷ್ಟೇ ಇಷ್ಟಪಟ್ಟರು ಭಾಷೆಯ ವಿಷಯ ಬಂದಾಗ ಮಾತ್ರ ಯಾವುದನ್ನೂ ಲೆಕ್ಕಿಸುವುದಿಲ್ಲ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ರಾಕಿಂಗ್​ ಸ್ಟಾರ್ ಯಶ್​ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರೆಸುತ್ತಿದ್ದ ಕನ್ನಡಾಭಿಮಾನಿಗಳು ಇಂದು ಕನ್ನಡ ಮರೆತು ಇಂಗ್ಲಿಷ್​ನಲ್ಲಿ ಮಾತನಾಡಿದ್ದಕ್ಕೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Anitha E | news18
Updated:August 22, 2019, 6:37 PM IST
Yash Radhika Pandit: ಕನ್ನಡ ಮರೆತ ರಾಕಿಂಗ್​ ಜೋಡಿ ಯಶ್​​-ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!
ರಾಕಿಂಗ್​ ದಂಪತಿ ಯಶ್​-ರಾಧಿಕಾ
  • News18
  • Last Updated: August 22, 2019, 6:37 PM IST
  • Share this:
'ಕೆ.ಜಿ.ಎಫ್'​ ಸಿನಿಮಾದ ನಂತರ ರಾಕಿಂಗ್​ ಸ್ಟಾರ್ ಯಶ್ ನ್ಯಾಷನಲ್​ ಸ್ಟಾರ್​. ಅವರು ಈ ಹಿಂದೆ ಸಿನಿಮಾ ಪ್ರಚಾರಕ್ಕಾಗಿ ತೆಲುಗು ಹಾಗೂ ಹಿಂದಿಯಲ್ಲಿ ಮಾತನಾಡಿದಾಗ ಯಾರೊಬ್ಬರೂ ಬೇಸರ ಮಾಡಿಕೊಂಡಿರಲಿಲ್ಲ. ಅದಕ್ಕೆ ಒಂದು ಕಾರಣ ಇತ್ತು. ಅಲ್ಲದೆ ಅಲ್ಲಿ ಯಶ್​ ಕನ್ನಡದಲ್ಲೂ ಮಾತನಾಡಿದ್ದರು.

ಆದರೆ ಈಗ ಯಶ್​ ಹಾಗೂ ಅವರ ಹೆಂಡತಿ ರಾಧಿಕಾ ಕನ್ನಡದ ಒಂದು ಪದವನ್ನೂ ಬಳಸದೆ ಸಂಪೂರ್ಣವಾಗಿ ಇಂಗ್ಲಿಷ್​ನಲ್ಲಿ ಒಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಮೊದಲಾಗಲಿ ಅಥವಾ ಕೊನೆಯಲ್ಲಾಗಲಿ ಕನ್ನಡದಲ್ಲಿ ಮಾತನಾಡಿಯೇ ಇಲ್ಲ.ಯಶ್​ ಅವರ ಮಗಳು ಆಯ್ರಾಗೆ ಅವರ ರಾಧಿಕಾರ ಮೇಕಪ್​ ಮ್ಯಾನ್​ ಒಂದು ಉಡುಗೊರೆ ನೀಡಿದ್ದಾರೆ. ಅದರ ಕುರಿತಾಗಿ ರಾಕಿಂಗ್​ ದಂಪತಿ ಧನ್ಯವಾದ ತಿಳಿಸಲು ಒಂದು ವಿಡಿಯೋ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಇವರು ಸಂಪೂರ್ಣವಾಗಿ ಇಂಗ್ಲಿಷ್​ನಲ್ಲೇ ಮಾತನಾಡಿದ್ದಾರೆ.

ಇದನ್ನೂ ಓದಿ: Kichcha Sudeep: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಕಿಚ್ಚ ಸುದೀಪ್​..!

ಯಶ್​ ಹಾಗೂ ರಾಧಿಕಾರ ಈ ವರ್ತನೆಯನ್ನು ಕನ್ನಡಾಭಿಮಾನಿಗಳು ತೀವ್ರವಾಗಿ ಟೀಕಿಸುವುದರೊಂದಿಗೆ ಖಂಡಿಸುತ್ತಿದ್ದಾರೆ. ನೀವು ನ್ಯಾಷನಲ್​ ಸ್ಟಾರ್ ಆಗಿರಬಹುದು. ಹಾಗೆಂದು ಕೇವಲ ಇಂಗ್ಲಿಷ್​​ನಲ್ಲೇ ಮಾತನಾಡುವ ಬದಲು ಕನ್ನಡವನ್ನೂ ಸೇರಿಸಿ ಮಾತನಾಡಬಹುದಿತ್ತು ಎಂದು ಬರೆದರೆ, ಮತ್ತೆ ಕೆಲವರು ಈಗ ಯಶ್​ ಅವರ ವಿಡಿಯೋವನ್ನು ಎಲ್ಲ ಭಾಷೆಗಳವರು ನೋಡುತ್ತಾರೆ. ಅದಕ್ಕೆ ಅವರು ಇಂಗ್ಲಿಷ್​ನಲ್ಲಿ ಮಾತ್ರ ಮಾತನಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಇನ್ನೂ ಕೆಲವರು ತಿಳಿದವರೇ ಹೀಗೆ ಮಾಡಿದರೆ ಹೇಗೆ, ಸ್ವಲ್ಪವಾದರೂ ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದ್ದಾರೆ. ಇಂಗ್ಲಿಷ್​ನಲ್ಲಿ ಮಾತನಾಡುವ ಮೂಲಕ ಬೇರೆ ಭಾಷೆಯವರನ್ನು ಓಲೈಕೆ ಮಾಡಲು ಹೋಗಿ ನಿಮ್ಮ ಮೇಲೆ ಇಟ್ಟಿರುವ ಅಭಿಮಾನ ಕಡಿಮೆಯಾಗುವಂತೆ ಮಾಡಿಕೊಳ್ಳಬೇಡಿ ಎಂದೆಲ್ಲ ಕೆಲವರು ಬರೆದಿದ್ದಾರೆ.

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

First published: August 22, 2019, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading