• Home
  • »
  • News
  • »
  • entertainment
  • »
  • Rishab Shetty: ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾಯಕಿಯರ ಆಯ್ಕೆ: ರಿಷಭ್​ ಶೆಟ್ಟಿ ನಿಮಗೆ ಮಾತಿನ ಬೆಲೆ ಗೊತ್ತಿಲ್ವಾ ಎಂದ ನೆಟ್ಟಿಗ..!

Rishab Shetty: ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾಯಕಿಯರ ಆಯ್ಕೆ: ರಿಷಭ್​ ಶೆಟ್ಟಿ ನಿಮಗೆ ಮಾತಿನ ಬೆಲೆ ಗೊತ್ತಿಲ್ವಾ ಎಂದ ನೆಟ್ಟಿಗ..!

ಹರಿಕಥೆ ಅಲ್ಲ ಗಿರಿಕಥೆಯ ನಾಯಕಿಯರನ್ನು ಪರಿಚಯಿಸಿದ ರಿಷಭ್​ ಶೆಟ್ಟಿ

ಹರಿಕಥೆ ಅಲ್ಲ ಗಿರಿಕಥೆಯ ನಾಯಕಿಯರನ್ನು ಪರಿಚಯಿಸಿದ ರಿಷಭ್​ ಶೆಟ್ಟಿ

ರಿಷಭ್​ ಶೆಟ್ಟಿ ನಿನ್ನೆಯಷ್ಟೆ ತಮ್ಮ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆಯ ನಾಯಕಿಯರ ಪರಿಚಯ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ನಾಯಕಿಯರು ಇವರೇ ಎಂದು ಪ್ರಕಟಿಸಿದ್ದಾರೆ. ಈಗಾಗಲೇ ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಆದಿತಿಯಾಗಿ ಪರಿಚಯವಾಗಿರುವ ರಚನಾ ಇಂದರ್​ ಹಾಗೂ ತಪಸ್ವಿನಿ ಪೂಣಚ್ಚ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಾಯಕಿಯರು.

ಮುಂದೆ ಓದಿ ...
  • Share this:

ಸಂದೇಶ್​ ನಾಗರಾಜ್​ ಅವರ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಸಿನಿಮಾ ಹರಿಕಥೆ ಅಲ್ಲ ಗಿರಿ ಕಥೆ. ರಿಷಭ್​ ಶೆಟ್ಟಿ ನಟಿಸುತ್ತಿರುವ ಈ ಸಿನಿಮಾದ  ಮುಹೂರ್ತ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿನಲ್ಲಿ ನೆರವೇರಿತ್ತು. ಈ ಚಿತ್ರವನ್ನು ಗಿರಿ ಕೃಷ್ಣ ನಿರ್ದೇಶಿಸುತ್ತಿದ್ದು, ಇವರು ಎದೆಗಾರಿಕೆ, ಕಿರಿಕ್​ ಪಾರ್ಟಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಷಭ್​ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಇದರಲ್ಲಿ ನಾಯಕಿಯರಿಗಾಗಿ ಈ ಹಿಂದೆಯೇ ಹುಟುಕಾಟ ಆರಂಭಿಸಿತ್ತು ಚಿತ್ರತಂಡ. ಅಲ್ಲದೆ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ರಿಷಭ್​ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ಸಾಕಷ್ಟು ಮಂದಿ ರಿಷಭ್​ ಅವರ ಈ ನಿರ್ಧಾರವನ್ನು ಮೆಚ್ಚಿಕೊಂಡಿದ್ದರು. ಬಾಲಿವುಡ್​ನಲ್ಲಿ ನೆಪೋಟಿಸಂನಿಂದಾಗಿ ಪ್ರತಿಭೆಗಳಿಗೆ ಬೆಳೆಯಲು ಅವಕಾಶ ವಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿರುವಾಗ ಕನ್ನಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಸಿನಿಪ್ರಿಯರು ಖುಷಿ ಪಟ್ಟಿದ್ದರು.


ರಿಷಭ್​ ಶೆಟ್ಟಿ ನಿನ್ನೆಯಷ್ಟೆ ತಮ್ಮ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆಯ ನಾಯಕಿಯರ ಪರಿಚಯ ಮಾಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾದ ನಾಯಕಿಯರು ಇವರೇ ಎಂದು ಪ್ರಕಟಿಸಿದ್ದಾರೆ. ಈಗಾಗಲೇ ಲವ್​ ಮಾಕ್ಟೇಲ್​ ಸಿನಿಮಾದಲ್ಲಿ ಆದಿತಿಯಾಗಿ ಪರಿಚಯವಾಗಿರುವ ರಚನಾ ಇಂದರ್​ ಹಾಗೂ ತಪಸ್ವಿನಿ ಪೂಣಚ್ಚ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಾಯಕಿಯರು.
ಈ ಸಿನಿಮಾಗೆ ನಾಯಕಿಯರ ಹುಡುಕಾಟ ಆರಂಭಿಸಿದ್ದಾಗ ರಿಷಭ್​ ಶೆಟ್ಟಿ ಹೊಸ ಪ್ರತಿಭೆಗಳಿಗೆ ಮಾತ್ರ ಅವಕಾಶ ಎಂದಿದ್ದರು. ಆದರೆ ಈಗ ಹಿಟ್ ಸಿನಿಮಾದಲ್ಲಿ ನಟಿಸಿ ಮನೆ ಮಾತಾಗಿರುವ ರಚನಾ ಇಂದರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿರುವುದು ಕೆಲವರಿಗೆ ಸಿಟ್ಟು ತರಿಸಿದೆ. ಈಗಾಗಲೇ ಗುರುತಿಸಿಕೊಂಡಿರುವ ನಟಿಯನ್ನು ಆಯ್ಕೆ ಮಾಡುವಂತಿದ್ದರೆ, ಮೊದಲೇ ಹೊಸಬರಿಗೆ ಅವಕಾಶ ಎಂದು ಏತಕ್ಕಾಗಿ ಪ್ರಕಟಿಸಬೇಕಿತ್ತು ಎಂದು ಗರಂ ಆಗಿದ್ದಾರೆ. ಇದೇ ಕಾರಣದಿಂದಾಗಿ ಸಿಟ್ಟಿಗೆದ್ದಿರುವ ನೆಟ್ಟಿಗರೊಬ್ಬರು, ರಿಷಭ್​ ಅವರಿಗೆ ಕೊಂಚ ಖಾರವಾಗಿಯೇ ಕಮೆಂಟ್​ ಮಾಡಿದ್ದಾರೆ.


rishab shetty, Rachana Inder, thapaswini poonacha, Harikathe alla Girikathe Movie, Sri Krishna Janmashtami, Sandalwood, Ranvit Shetty, Cute photos Of Ranvit Shetty, Netizen criticized rishab shettys decision regarding Harikathe alla Girikathe lead role actress selection
ರಿಷಭ್​ ಶೆಟ್ಟಿ ಅವರಿಗೆ ಮಾತಿನ ಬೆಲೆ ಗೊತ್ತಿಲ್ವಾ ಎಂದು ಕಮೆಂಟ್​ ಮಾಡಿದ ನೆಟ್ಟಿಗ


ಈ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಅವರಿಗೆ ನಾಯಕಿಯಾಗಿ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದು, ಇದು ಕನ್ನಡದಲ್ಲಿ ಮೊದಲ ಸಿನಿಮಾ ಆಗಿದೆ. ಇತ್ತೀಚೆಗಷ್ಟೆ ರಿಷಭ್​ ಶೆಟ್ಟಿ ತಮ್ಮ ಹೀರೋ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದರು. ಇನ್ನು ಹೀರೋ ಸಿನಿಮಾವನ್ನು ಭರತ್​ ರಾಜ್​ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ರಿಷಭ್​ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ್ ಸಹ ಚಿತ್ರೀಕರಣದ ಹಂತದಲ್ಲಿದೆ.

Published by:Anitha E
First published: