Netflix : ನೆಟ್‌ಫ್ಲಿಕ್ಸ್‌ನಲ್ಲಿ ಅತಿಹೆಚ್ಚು ವೀಕ್ಷಿಸಿದ ಸಿನಿಮಾ `ರೆಡ್​ ನೋಟಿಸ್‘​, ಸೀರಿಸ್​ `ಸ್ಕ್ವಿಡ್​ ಗೇಮ್​’ !

Netflix: ಹೆಚ್ಚಿನ ವೀಕ್ಷಕರು ಸ್ಕ್ವಿಡ್ ಗೇಮ್ (Squid Game) ಮತ್ತು ಹೊಸ ಆ್ಯಕ್ಷನ್-ಸಾಹಸ ಚಿತ್ರ ರೆಡ್ ನೋಟೀಸ್ (Red Notice) ಅನ್ನು ಊಹೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ವೀಕ್ಷಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಸ್ಕ್ವಿಡ್​ ಗೇಮ್​ ಮತ್ತು ರೆಡ್​ನೋಟಿಸ್​

ಸ್ಕ್ವಿಡ್​ ಗೇಮ್​ ಮತ್ತು ರೆಡ್​ನೋಟಿಸ್​

  • Share this:
ಮೊದಲೆಲ್ಲಾ ಚಿತ್ರಮಂದಿರ(Theater)ಗಳಲ್ಲೇ ಹೋಗಿ ಸಿನಿಮಾ(Movie) ನೋಡಬೇಕು. ಆದರೆ ಈಗ ಎಲ್ಲವೂ ಬದಲಾಗಿದೆ. ಮನೆಯಲ್ಲೇ ಕೂತು ಹೊಚ್ಚ ಹೊಸ ಸಿನಿಮಾಗಳನ್ನು ನೋಡಬಹುದು. ಒಟಿಟಿ(OTT) ಬಂದಮೇಲೆ ಸಿನಿರಸಿಕರಿಗೆ ಬಹಳ ಹೆಲ್ಪ್​ ಆಗಿದೆ. ವಾರಕ್ಕೆ ಒಂದು ಸಿನಿಮಾ ನೋಡುತ್ತಿದ್ದ ಕಾಲದಿಂದ, ದಿನಕ್ಕೆ ಎರಡು ಸಿನಿಮಾ ನೋಡುವ ಕಾಲಕ್ಕೆ ಬಂದಿದ್ದೇವೆ. ಅಮೇಜಾನ್​ ಪ್ರೈಮ್​ ವಿಡಿಯೋ(Amazon Prime Video), ನೆಟ್​ಫ್ಲಿಕ್ಸ್(Netflix)​, ಡಿಸ್ನಿ + ಹಾಟ್​ಸ್ಟಾರ್​(Disney+ Hot star) ಸೇರಿ ಹಲವು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಪ್ರತಿ ದಿನ ಅಥವಾ ಪ್ರತಿ ವಾರ ಹಲವು ಸಿನಿಮಾಗಳು ಹಾಗೂ ಸೀರಿಸ್​(Series)ಗಳು ಬಿಡುಗಡೆಯಾಗುತ್ತಿರುವೆ. ಹಾಗೇ ನೆಟ್​ಫ್ಲಿಕ್ಸ್​​ ನಲ್ಲಿ ಪ್ರಪಂಚದ ಎಲ್ಲ ಭಾಷೆಗಳ(Language) ಸಿನಿಮಾಗಳನ್ನು ನೋಡಬಹುದು. ಈ ನೆಟ್​ಫ್ಲಿಕ್ಸ್​​ನಲ್ಲಿ ಯಾವ ಸಿನಿಮಾ ಅಥವಾ ಯಾವ ಸೀರಿಸ್​ ಅತಿ ಹೆಚ್ಚು ವೀಕ್ಷಣೆ(Most Viewed) ಪಡೆದಿದೆ ಎಂಬ ಕೂತುಹಲ ಎಲ್ಲರಿಗೂ ಇರುತ್ತೆ. ಇದನ್ನು ಕಂಡು ಹಿಡಿಯಲು ನೆಟ್‌ಫ್ಲಿಕ್ಸ್ ಹೊಸ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ದೊರೆತ ಫಲಿತಾಂಶವೇನು ಗೊತ್ತೇ? ಹೆಚ್ಚಿನ ವೀಕ್ಷಕರು ಸ್ಕ್ವಿಡ್ ಗೇಮ್ (Squid Game) ಮತ್ತು ಹೊಸ ಆ್ಯಕ್ಷನ್-ಸಾಹಸ ಚಿತ್ರ ರೆಡ್ ನೋಟೀಸ್ (Red Notice) ಅನ್ನು ಊಹೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ವೀಕ್ಷಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಅತಿ ಹೆಚ್ಚು ವೀಕ್ಷಣೆ ಪಡೆದ  ಸಿನಿಮಾ, ಸೀರಿಸ್​


ಸ್ಟ್ರೀಮಿಂಗ್ ಸೇವೆಯ ಹೊಸ ಅಂಕಿ ಅಂಶಗಳ ಪ್ರಕಾರ, ರಾಸನ್ ಮಾರ್ಷಲ್ ಥರ್ಬರ್ ಅವರ ‘ರೆಡ್ ನೋಟಿಸ್​’ ಆ್ಯಕ್ಷನ್-ಸಾಹಸ ಚಿತ್ರದಲ್ಲಿ, ಡ್ವೇನ್ ಜಾನ್ಸನ್, ಗಾಲ್ ಗಡೋಟ್ ಮತ್ತು ರಿಯಾನ್ ರೆನಾಲ್ಡ್ಸ್ ನಟಿಸಿದ್ದಾರೆ. ಇದು ನವೆಂಬರ್ 12 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಾರಂಭವಾದಾಗಿನಿಂದ ಜಾಗತಿಕವಾಗಿ 148.7 ಮಿಲಿಯನ್ ಗಂಟೆಗಳ ವೀಕ್ಷಣೆಯನ್ನು ಪಡೆದುಕೊಂಡಿದೆ. ಕಳೆದ ವಾರದಲ್ಲಿ, 50.3 ಮಿಲಿಯನ್ ಗಂಟೆಗಳ ವೀಕ್ಷಣೆಯೊಂದಿಗೆ ‘Narcos: Mexico’ ನ ಮೂರನೇ ಸೀಸನ್ ಅತ್ಯಂತ ಜನಪ್ರಿಯ ಸೀರಿಸ್​ ಆಗಿದೆ. ‘ಸ್ಕ್ವಿಡ್ ಗೇಮ್‌’ನ ಮೊದಲ ಸೀಸನ್ ನೆಟ್‌ಫ್ಲಿಕ್ಸ್‌ನ ಅತಿ ಹೆಚ್ಚು ವೀಕ್ಷಿಸಿದ ಸೀರಿಸ್​ ಅಥವಾ ಚಲನಚಿತ್ರವಾಗಿ 1.6 ಶತಕೋಟಿ ಗಂಟೆಗಳವರೆಗೆ ವೀಕ್ಷಣೆಯ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.


ಪ್ರತಿ ಮಂಗಳವಾರ ಟಾಪ್​ 10 ಅಪ್​ಡೇಟ್​

ಪ್ರತೀ ಮಂಗಳವಾರ ನೆಟ್‌ಫ್ಲಿಕ್ಸ್, ಟಾಪ್ 10 ಸೀರಿಸ್​ ಹಾಗೂ ಸ್ಟ್ರೀಮಿಂಗ್ ಸೇವೆಯಲ್ಲಿನ ಚಲನಚಿತ್ರಗಳೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿನ ಟಾಪ್ 10 ನೊಂದಿಗೆ ಅಪ್‌ಡೇಟ್ ಮಾಡುತ್ತದೆ. ಇದುವರೆಗೆ ನೆಟ್‌ಫ್ಲಿಕ್ಸ್ ವೀಕ್ಷಕ ಡೇಟಾವನ್ನು ಹಂಚಿಕೊಳ್ಳುವಲ್ಲಿ ಆಯ್ಕೆ ಮಾಡಿಕೊಂಡಿದೆ.ಯಾವುದೇ ಅಂಕಿ ಅಂಶ ಇಲ್ಲದೆಯೇ ಟಾಪ್ 10 ಪಟ್ಟಿಯನ್ನು ತನ್ನ ಸೇವೆಯಲ್ಲಿ ತನ್ನಷ್ಟಕ್ಕೆ ದಾಖಲಿಸುತ್ತದೆ.ಇತರ ಪ್ರಮುಖ ಸ್ಟ್ರೀಮಿಂಗ್ ಸೇವೆಗಳಾದ ಅ ಮೆಜಾನ್ ಪ್ರೈಮ್ ಹಾಗೂ ಡಿಸ್ನಿ+, ನಿಯಮಿತವಾಗಿ ವೀಕ್ಷಕರ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ.


ಇದನ್ನು ಓದಿ: ಒಟಿಟಿ ಪ್ರಿಯರಿಗೆ ಈ ವಾರ ಸಿನಿ ರಸದೌತಣ: 5 ಸಿನಿಮಾ, 3ಕ್ಕೂ ಹೆಚ್ಚು ಸೀರಿಸ್​ ರಿಲೀಸ್​!

ನೆಟ್‌ಫ್ಲಿಕ್ಸ್ ವೀಕ್ಷಣೆಯ ಡೇಟಾವನ್ನು ಹೇಗೆ ದಾಖಲಿಸುತ್ತದೆ?


ನೆಟ್‌ಫ್ಲಿಕ್ಸ್‌ನ ಅಂಕಿಅಂಶಗಳು ಎಷ್ಟು ಜನರು ಯಾವುದನ್ನು ವೀಕ್ಷಿಸಿದ್ದಾರೆ ಎಂಬುದನ್ನು ಹಾಗೂ ತನ್ನ ಟಾಪ್ 10 ರ ಹೊರಗಿರುವ ಚಲನಚಿತ್ರ ಅಥವಾ ಸೀರೀಸ್‌ಗಳನ್ನು ಸೇರಿಸಿಕೊಂಡು ಅಂಕಿಅಂಶಗಳ ವಿವರಗಳನ್ನು ನೀಡುವುದಿಲ್ಲ. ಇದುವರೆಗೆ ನೆಟ್‌ಫ್ಲಿಕ್ಸ್ ಸ್ವೀಕರಿಸಿರುವ ಪಾರದರ್ಶಕ ಮಾಪನ ಎಂದೆನಿಸಿದೆ. ನೆಟ್‌ಫ್ಲಿಕ್ಸ್‌ಗಾಗಿ ಹಾಗೂ ನಮ್ಮೊಂದಿಗೆ ಕೆಲಸ ಮಾಡುವ ಕ್ರಿಯೇಟರ್ಸ್ ಹಾಗೂ ಸದಸ್ಯರಿಗೆ ನಾವು ಮಾಡುವ ಪ್ರಮುಖ ಕಾರ್ಯ ಇದಾಗಿದೆ ಎಂದು ನೆಟ್‌ಫ್ಲಿಕ್ಸ್‌ನಲ್ಲಿ ವಿಷಯ ತಂತ್ರದ ಉಪಾಧ್ಯಕ್ಷ ಪಾಬ್ಲೊ ಪೆರೆಜ್ ಡಿ ರೊಸ್ಸೊ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ. ಸ್ಟ್ರೀಮಿಂಗ್ ಜಗತ್ತಿನಲ್ಲಿ ಯಶಸ್ಸು ಎಂದರೆ ಏನೆಂದು ಜನರು ಅರ್ಥಮಾಡಿಕೊಳ್ಳಲು ಬಯಸುತ್ತಾರೆ ಮತ್ತು ಈ ಲಿಸ್ಟ್‌ಗಳು ನಮ್ಮ ಉದ್ಯಮದಲ್ಲಿ ಆ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ನೀಡುತ್ತವೆ ಎಂಬುದಾಗಿ ಪೆರೆಜ್ ಬರೆದುಕೊಂಡಿದ್ದಾರೆ.


ಇದನ್ನು ಓದಿ : ಅನುಷ್ಕಾ ಶರ್ಮಾ ತೊಟ್ಟ ಸ್ವಿಮ್​ಸೂಟ್ ಬೆಲೆಗೆ ಬೆಂಗಳೂರಲ್ಲಿ ಆರಾಮಾಗಿ ಒಂದು ಮನೆ ಬಾಡಿಗೆಗೆ ಸಿಗುತ್ತದೆ, ಬೆಲೆ ಎಷ್ಟು ಹೇಳಿ...

ನೆಟ್‌ಫ್ಲಿಕ್ಸ್‌ನ ಹೆಚ್ಚು ವೀಕ್ಷಣೆ ಪಡೆದ ಚಿತ್ರ ಯಾವುದಾಗಿರುತ್ತದೆ?

ನೆಟ್‌ಫ್ಲಿಕ್ಸ್ ಇಂಗ್ಲಿಷ್ ಮತ್ತು ಇಂಗ್ಲಿಷ್ ಅಲ್ಲದ ಶ್ರೇಯಾಂಕಗಳನ್ನು ಮತ್ತು 90 ಕ್ಕೂ ಹೆಚ್ಚು ದೇಶಗಳಿಗೆ ಟಾಪ್-10 ಪಟ್ಟಿಗಳನ್ನು ಪ್ರಕಟಿಸುತ್ತದೆ. ಕಂಪನಿಯು ತನ್ನ ಅಂಕಿಅಂಶಗಳನ್ನು ಆಡಿಟ್ ಮಾಡಲು ಲೆಕ್ಕಪರಿಶೋಧಕ ಸಂಸ್ಥೆ EY ಅನ್ನು ನೇಮಿಸಿಕೊಂಡಿದೆ ಎಂದು ಹೇಳಿದೆ. ಕಂಪನಿಯ ಪ್ರಸ್ತುತ ದರದಲ್ಲಿ ಅಂದರೆ ವಿಮರ್ಶಕರಿಂದ ಕಳಪೆ ವಿಮರ್ಶೆಗಳು ಹಾಗೂ ಟೀಕೆಗಳನ್ನು ಪಡೆದುಕೊಂಡ ಯಾವುದೇ ಚಲನಚಿತ್ರ ಹಾಗೂ ಸೀರೀಸ್ ನೆಟ್‌ಫ್ಲಿಕ್ಸ್‌ನ ಹೆಚ್ಚು ವೀಕ್ಷಣೆ ಪಡೆದ ಚಿತ್ರವಾಗಬಹುದು. 282 ಮಿಲಿಯನ್ ಗಂಟೆಗಳ ಕಾಲ ವೀಕ್ಷಿಸಲಾದ, 2018ರ ಸಾಂಡ್ರಾ ಬುಲಕ್ ಥ್ರಿಲ್ಲರ್ ಬರ್ಡ್ ಬಾಕ್ಸ್ ಈ ಟೈಟಲ್ ಅನ್ನು ಪಡೆದುಕೊಂಡಿದೆ.
Published by:Vasudeva M
First published: