Netflix: ರಿಯಲ್ಲಾಗೇ ಸ್ಕ್ವಿಡ್ ಗೇಮ್ ರಿಯಾಲಿಟಿ ಶೋ; ಗೆದ್ದವರಿಗೆ ಸಿಗಲಿದೆಯಂತೆ 35.56 ಕೋಟಿ ರೂ!

ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರವಾಗಿದ್ದ ಸ್ಕ್ವಿಡ್ ಗೇಮ್ ವೆಬ್ ಸರಣಿ ವಿಶ್ವದಾದ್ಯಂತ ಜನಪ್ರಿಯವಾಗಿ, ಮೆಚ್ಚುಗೆ ಗಳಿಸಿತ್ತು. ದೊಡ್ಡ ಮೊತ್ತದ ಬಹುಮಾನಕ್ಕಾಗಿ ಸ್ಫರ್ಧಿಗಳು ಬಾಲ್ಯದ ಆಟಗಳನ್ನು ಆಡುವುದರ ಕುರಿತ ಅತ್ಯಂತ ಕುತೂಹಲಕಾರಿ ಕಥೆಯನ್ನು ಹೊಂದಿದ್ದ ಕೊರಿಯನ್ ವೆಬ್ ಸರಣಿ ಇದು. ಇದೀಗ, ಸ್ಕ್ವಿಡ್ ಗೇಮ್ ವೆಬ್ ಸರಣಿಯ ಅದ್ಭುತ ಯಶಸ್ಸಿನಿಂದ ಪ್ರೇರಣೆಗೊಂಡು, ನೆಟ್‍ಫ್ಲಿಕ್ಸ್ ಈ ಸರಣಿಯನ್ನು ಆಧರಿಸಿದ ರೀಯಾಲಿಟಿ ಶೋ ಒಂದನ್ನು ಹೊರತರುವ ಯೋಜನೆ ಹಾಕಿಕೊಂಡಿದೆ.

ಸ್ಕ್ವಿಡ್ ಗೇಮ್ ರಿಯಾಲಿಟಿ ಶೋ

ಸ್ಕ್ವಿಡ್ ಗೇಮ್ ರಿಯಾಲಿಟಿ ಶೋ

  • Share this:
ನೆಟ್‍ಫ್ಲಿಕ್ಸ್ ನಲ್ಲಿ (Netflix) ಪ್ರಸಾರವಾಗಿದ್ದ ಸ್ಕ್ವಿಡ್ ಗೇಮ್ ವೆಬ್ ಸರಣಿ (Squid Game Web Series) ವಿಶ್ವದಾದ್ಯಂತ ಜನಪ್ರಿಯವಾಗಿ, ಮೆಚ್ಚುಗೆ ಗಳಿಸಿತ್ತು. ದೊಡ್ಡ ಮೊತ್ತದ ಬಹುಮಾನಕ್ಕಾಗಿ (Prize) ಸ್ಫರ್ಧಿಗಳು ಬಾಲ್ಯದ ಆಟಗಳನ್ನು ಆಡುವುದರ ಕುರಿತ ಅತ್ಯಂತ ಕುತೂಹಲಕಾರಿ ಕಥೆಯನ್ನು ಹೊಂದಿದ್ದ ಕೊರಿಯನ್ ವೆಬ್ ಸರಣಿ (Korean Web Series) ಇದು. ಇದೀಗ, ಸ್ಕ್ವಿಡ್ ಗೇಮ್ ವೆಬ್ ಸರಣಿಯ ಅದ್ಭುತ ಯಶಸ್ಸಿನಿಂದ ಪ್ರೇರಣೆಗೊಂಡು, ನೆಟ್‍ಫ್ಲಿಕ್ಸ್ ಈ ಸರಣಿಯನ್ನು ಆಧರಿಸಿದ ರೀಯಾಲಿಟಿ ಶೋ (Reality Show) ಒಂದನ್ನು ಹೊರತರುವ ಯೋಜನೆ ಹಾಕಿಕೊಂಡಿದೆ.  ಅಂದರೆ, ಈ ರಿಯಾಲಿಟಿ ಶೋನಲ್ಲೂ ಕೂಡ ಸೋತ ಸ್ಪರ್ಧಿಗಳನ್ನು (contestant) ಕೊಲ್ಲಲಾಗುತ್ತದೆಯೇ ಎಂದು ಗಾಬರಿಗೊಳ್ಳಬೇಡಿ. ಇದು ಕಥೆಯಲ್ಲ, ರಿಯಾಲಿಟಿ ಶೋ.

ರಿಯಾಲಿಟಿ ಶೋನಲ್ಲಿ ವಿಶ್ವದೆಲ್ಲೆಡೆಯ 456 ಸ್ಫರ್ಧಿಗಳು
ಇದರಲ್ಲಿ ಸೋತವರು ಖಾಲಿ ಕೈಯಲ್ಲಿ ನೇರವಾಗಿ ಮನೆಯ ದಾರಿ ಹಿಡಿದರೆ, ಗೆದ್ದವರು ದೊಡ್ಡ ಮೊತ್ತದ ಹಣ ಪಡೆಯಲಿದ್ದಾರಂತೆ. ಈ ರಿಯಾಲಿಟಿ ಶೋನಲ್ಲಿ ವಿಶ್ವದೆಲ್ಲೆಡೆಯ 456 ಸ್ಫರ್ಧಿಗಳು ಭಾಗವಹಿಸಲಿದ್ದಾರೆ. ಬಹುಮಾನದ ಮೊತ್ತ ಬರೋಬ್ಬರಿ 4.56 ಮಿಲಿಯನ್ ಡಾಲರ್. ಅಂದರೆ ಸುಮಾರು 35.56 ಕೋಟಿ ರೂ.

ಅತ್ಯಂತ ಹೆಚ್ಚು ಸ್ಪರ್ಧಿಗಳು ಮತ್ತು ದೊಡ್ಡ ಮೊತ್ತದ ನಗದು ಬಹುಮಾನ
ಈ ವಾರದ ಆರಂಭದಲ್ಲಿ, ಸ್ಕ್ವಿಡ್ ಗೇಮ್ ಎರಡನೇ ಸೀಸನ್ ಹೊರ ಬರಲಿದೆ ಎಂಬುದನ್ನು ನೆಟ್‍ಫ್ಲಿಕ್ಸ್ ಖಚಿತ ಪಡಿಸಿತ್ತು. ಜೊತೆಗೆ ಅದರಲ್ಲಿ ಏನೇನೆಲ್ಲಾ ಹೊಸ ವಿಷಯಗಳನ್ನು ನಿರೀಕ್ಷಿಸಬಹುದು ಎಂಬ ಬಗ್ಗೆ ಕೂಡ ಒಂದಿಷ್ಟು ಮಾಹಿತಿ ನೀಡಿತ್ತು. ಬುಧವಾರ ನೆಟ್‍ಫ್ಲಿಕ್ಸ್ ತನ್ನ 'ಸ್ಕ್ವಿಡ್ ಗೇಮ್ – ದ ಚಾಲೆಂಜ್' ರಿಯಾಲಿಟಿ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಿದ್ದು, “ರಿಯಾಲಿಟಿ ಶೋಗಳ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಸ್ಪರ್ಧಿಗಳು ಮತ್ತು ದೊಡ್ಡ ಮೊತ್ತದ ನಗದು ಬಹುಮಾನ” ಹೊಂದಿರುವ ರಿಯಾಲಿಟಿ ಶೋ ಇದು ಎಂದು ತಿಳಿಸಿದೆ. ಈ ರಿಯಾಲಿಟಿ ಶೋನಲ್ಲಿ ಒಟ್ಟು ಹತ್ತು ಕಂತುಗಳು ಇರಲಿವೆ.

ಇದನ್ನೂ ಓದಿ: Sampada Hulivana: ತೆಲುಗಿನಲ್ಲಿ ಮಿಂಚಲು ಮತ್ತೊಬ್ಬ ಕನ್ನಡತಿ ಸಜ್ಜು, ಮಿಥುನ ರಾಶಿ ನಟಿ ಸಂಪದಾಗೆ ಅವಕಾಶಗಳ ಸುರಿಮಳೆ

“ಆಟಗಾರರು ಮೂಲ ಶೋನ ಪ್ರದರ್ಶನದಿಂದ ಪ್ರೇರಣೆ ಪಡೆದ ಆಟಗಳ ಸರಣಿಯಲ್ಲಿ ಸ್ಫರ್ಧಿಸಲಿದ್ದಾರೆ- ಜೊತೆಗೆ ಆಶ್ಚರ್ಯಕರ ಹೊಸ ಸೇರ್ಪಡೆಗಳು ಇರಲಿದ್ದು- ಸುತ್ತಲಿನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿರುವಾಗ, ಅವರ ತಂತ್ರಗಳು, ಮೈತ್ರಿಗಳು ಮತ್ತು ಕ್ಯಾರಕ್ಟರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ” ಎಂದು ನೆಟ್‍ಫ್ಲಿಕ್ಸ್ ಪ್ರಕಟಣೆ ತಿಳಿಸಿದೆ.

ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಕನಿಷ್ಟ 21 ವರ್ಷ ವಯಸ್ಸಾಗಿರಬೇಕು. ಅವರಿಗೆ ಇಂಗ್ಲೀಷ್ ಭಾಷೆ ಮಾತನಾಡಲು ಬರಬೇಕು ಮತ್ತು 2023ರ ಆರಂಭದ ನಾಲ್ಕು ವಾರಗಳಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಲಭ್ಯವಿರಬೇಕು.

ರಿಯಾಲಿಟಿ ಶೋನಲ್ಲಿ ಏನೇನೆಲ್ಲಾ ಇದೆ?
ಅಸಲಿ ಸ್ಕ್ವಿಡ್ ಗೇಮ್ ಸರಣಿಯಲ್ಲಿ ಇರುವಂತೆಯೇ ಈ ರಿಯಾಲಿಟಿ ಶೋ ನಲ್ಲೂ 456 ಸ್ಫರ್ಧಿಗಳು ಇರಲಿದ್ದಾರೆ. ಸ್ಕ್ವಿಡ್‍ಗೇಮ್‍ನ ಮುಖ್ಯ ಪಾತ್ರಧಾರಿ ಸೆವೊಂಗೆ ಗೀ-ಹುನ್ ನಂತೆ 456 ನೇ ಸ್ಫರ್ಧಿ ಕೂಡ ಇರಲಿದ್ದಾರೆ.

ಸ್ಕ್ವಿಡ್ ಗೇಮ್ ನೆಟ್‍ಫ್ಲಿಕ್ಸ್ ನ ಇದುವರೆಗಿನ ಅತ್ಯಂತ ಜನಪ್ರಿಯ ಸರಣಿ
ಕೊರಿಯನ್ ವೆಬ್‍ಸರಣಿ ಸ್ಕ್ವಿಡ್ ಗೇಮ್, ಸಾಲದ ಹೊರೆಯಿಂದ ರೋಸಿ ಹೋಗಿರುವ ಜನರು ದೊಡ್ಡ ಮೊತ್ತದ ಬಹುಮಾನಕ್ಕಾಗಿ ಮಕ್ಕಳ ಆಟಗಳ ಮಾರಣಾಂತಿಕ ಸರಣಿಯಲ್ಲಿ ಭಾಗವಹಿಸುವ ಕಥೆಯನ್ನು ಹೊಂದಿದೆ. ಸ್ಕ್ವಿಡ್ ಗೇಮ್ ನೆಟ್‍ಫ್ಲಿಕ್ಸ್ ನ ಇದುವರೆಗಿನ ಅತ್ಯಂತ ಜನಪ್ರಿಯ ಸರಣಿಯಾಗಿದೆ. ಇದು ಆರಂಭಗೊಂಡ ಮೊದಲ 28 ದಿನಗಳಲ್ಲೇ 111 ಮಿಲಿಯನ್ ಬಳಕೆದಾರರಿಂದ ವೀಕ್ಷಿಸಲ್ಪಟ್ಟಿತ್ತು.

ಇದನ್ನೂ ಓದಿ: Keerthy Suresh Pooja hegde ಇಬ್ರೂ ಅಕ್ಕ ತಂಗಿ ಅಂತೆ! ಅರೇ, ನೀವ್​ ಅನ್ಕೊಂಡಂಗೆ ಅಲ್ಲ ಬೇರೇನೆ ಮ್ಯಾಟರ್​

“ಕಳೆದ ವರ್ಷ ‘ಸ್ಕ್ವಿಡ್ ಗೇಮ್’ ನ ಮೊದಲ ಸೀಸನ್‍ಗೆ ಜೀವ ತುಂಬಲು 12 ವರ್ಷಗಳು ಬೇಕಾಯಿತು. ಆದರೆ ಅದು ನೆಟ್‍ಫ್ಲಿಕ್ಸ್ ಇದುವರೆಗಿನ ಅತ್ಯಂತ ಜನಪ್ರಿಯ ವೆಬ್‍ಸರಣಿಯಾಗಿ ಹೊರಹೊಮ್ಮಲು 12 ದಿನಗಳನ್ನು ತೆಗೆದುಕೊಂಡಿತು” ಎಂದು ‘ಸ್ಕ್ವಿಡ್ ಗೇಮ್’ ನ ಬರಹಗಾರ, ನಿರ್ದೇಶಕ ಮತ್ತು ಎಕ್ಸಿಕ್ಯೂಟಿವ್ ನಿರ್ಮಾಪಕ ಹ್ವಾಂಗ್ ಡಾಂಗದ -ಹ್ಯುಕ್ ಸೋಮವಾರ ಹೇಳಿಕೆ ನೀಡಿದ್ದಾರೆ. ನೆಟ್‍ಫ್ಲಿಕ್ಸ್ ವೇದಿಕೆಯು, ತನ್ನ ಪ್ರತಿಸ್ಪರ್ಧಿ ಸ್ಟ್ರೀಮಿಂಗ್ ವೇದಿಕೆಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಆದರೆ ಅದು ತನ್ನ ದರಗಳನ್ನು ಹೆಚ್ಚಿಸಿದ ನಂತರವೂ ಹಿಟ್ ಆಗಿತ್ತು.
Published by:Ashwini Prabhu
First published: