HOME » NEWS » Entertainment » NETFLIX NOT USED KARAN JOHAR AND CREW IN JANHVI KAPOOR STARRER GUNJAN SAXENA THE KARGIL GIRL TRAILER RMD

ಬಿಗ್ ಸಿನಿಮಾ ಮೂಲಕ ಕರಣ್ ಜೋಹರ್​ಗೆ ಶಾಕ್ ಕೊಟ್ಟ ನೆಟ್​ಫ್ಲಿಕ್ಸ್

Gunjan Saxena: The Kargil Girl trailer: ಸುಶಾಂತ್​ ಸಿಂಗ್​ ಸಾವಿನ ನಂತರದಲ್ಲಿ ಕರಣ್​ ಸಿನಿಮಾಗಳನ್ನು ಬ್ಯಾನ್​ ಮಾಡುವಂತೆಯೂ ಆಗ್ರಹಿಸಲಾಗುತ್ತಿದೆ. ಇದು ಅವರ ಸಿನಿಮಾದ ಮೇಲೆ ನೇರ ಪರಿಣಾಮ ಬೀರಿದೆ.

news18-kannada
Updated:August 4, 2020, 12:16 PM IST
ಬಿಗ್ ಸಿನಿಮಾ ಮೂಲಕ ಕರಣ್ ಜೋಹರ್​ಗೆ ಶಾಕ್ ಕೊಟ್ಟ ನೆಟ್​ಫ್ಲಿಕ್ಸ್
ಕರಣ್​
  • Share this:
ಸಿನಿಮಾ ರಿಲೀಸ್​ ವೇಳೆ ಚಿತ್ರತಂಡದ ಯಾರೊಬ್ಬರು ಕಾಂಟ್ರವರ್ಸಿ ಮಾಡಿಕೊಂಡರೂ ಅದು ಸಿನಿಮಾ ಮೇಲೆ ನೇರ ಪರಿಣಾಮ ಬೀರುತ್ತದೆ. ಚಪಾಕ್​ ಸಿನಿಮಾ ತೆರೆಕಾಣುವ ವೇಳೆ ದೀಪಿಕಾ ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸುವ ಮೂಲಕ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದ್ದರು. ಚಪಾಕ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ ಕಡಿಮೆ ಆಗಲು ಇದು ಕೂಡ ಒಂದು ಕಾರಣವಾಗಿತ್ತು. ಈಗ ಕರಣ್​ ಜೋಹರ್​ ಕೂಡ ತಾವು ಮಾಡಿದ ತಪ್ಪಿನಿಂದ ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಿದ್ದಾರೆ.

ಸುಶಾಂತ್​ ಸಿಂಗ್​ ಸಾವಿನ ನಂತರ ಕರಣ್​ ವಿರುದ್ಧ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಕೇವಲ ಸ್ಟಾರ್​ ಮಕ್ಕಳಿಗೆ ಮಾತ್ರ ಮಣೆ ಹಾಕುವ ಕೆಲಸವನ್ನು ಕರಣ್​ ಮಾಡುತ್ತಿದ್ದಾರೆ. ಯಾವುದೆ ಹಿನ್ನೆಲೆ ಇಲ್ಲದೆ ಬಂದರೆ ಅವರನ್ನು ಕರಣ್​ ತುಳಿಯುತ್ತಾರೆ ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ ರಣ್​ ಸಿನಿಮಾಗಳನ್ನು ಬ್ಯಾನ್​ ಮಾಡುವಂತೆಯೂ ಆಗ್ರಹಿಸಲಾಗುತ್ತಿದೆ. ಇದು ಅವರ ಸಿನಿಮಾದ ಮೇಲೆ ನೇರ ಪರಿಣಾಮ ಬೀರಿದೆ.

ಜಾನ್ವಿ ಕಪೂರ್​, ಗುಂಜನ್ ಸಕ್ಸೇನಾ: ದಿ ಕಾರ್ಗಿಲ್​ ಗರ್ಲ್​ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಇದೇ ಆಗಸ್ಟ್​​ 12ರಂದು ನೆಟ್​ ಫ್ಲಿಕ್ಸ್​ ನಲ್ಲಿ ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್​ ಯೂಟ್ಯೂಬ್​​ನಲ್ಲಿ ರಿಲೀಸ್​ ಆಗಿತ್ತು. ಅಚ್ಚರಿ ಎಂದರೆ, ಈ ಚಿತ್ರದ ನಟ-ನಟಿಯರು, ನಿರ್ಮಾಪಕರು ಹಾಗೂ ನಿರ್ದೇಶಕರ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಯೇ ಇಲ್ಲ. ಇದಕ್ಕೆ ಕರಣ್​ ನೇರ ಕಾರಣವಂತೆ.

ಇದನ್ನೂ ಓದಿ: ಮದುವೆಯಾದ ನಂತರ ಸ್ಟೈಲ್​ ಬದಲಾಯಿಸಿದ ನಿವೇದಿತಾ ಗೌಡ: ವೈರಲ್​ ಆಗುತ್ತಿವೆ ಫೋಟೋಗಳು..!ಕರಣ್​ ವಿರುದ್ಧ ಗುರತರ ಆರೋಪ ಕೇಳಿ ಬಂದ ಬೆನ್ನಲ್ಲೇ ಸಿನಿಮಾದ ಟ್ರೈಲರ್​ನಿಂದ ಕರಣ್​ ಹೆಸರನ್ನು ದೂರ ಇಡುವ ​ನಿರ್ಧಾರಕ್ಕೆ ನೆಟ್​ಫ್ಲಿಕ್ಸ್ ಬಂದಿತ್ತು. ಆದರೆ, ಇದು ಮತ್ತಷ್ಟು ವಿವಾದ ಸೃಷ್ಟಿಸಬಹುದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆಯಂತೆ. ಆಗಸ್ಟ್​ 12ರಂದು ಸಿನಿಮಾ ತೆರೆಗೆ ಬರಲಿದ್ದು, ಅಲ್ಲಾದರೂ ಕರಣ್​ ಹೆಸರು ಇರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published by: Rajesh Duggumane
First published: August 4, 2020, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories