ಕರ್ನಾಟಕ ಹೈಕೋರ್ಟ್ ಆದೇಶ: Crime Stories-India Detectives ಸರಣಿಯ ಮೊದಲ ಕಂತಿನ ಪ್ರಸಾರ ನಿಲ್ಲಿಸಿದ ನೆಟ್‌ಫ್ಲಿಕ್ಸ್‌

Crime Stories-India Detectives ಸರಣಿ ಯ ಮೊದಲ ಸಂಚಿಕೆಯಲ್ಲಿನ ವಿಷಯವನ್ನು ಲಭ್ಯವಾಗದಂತೆ ಮಾಡಲು ಕೋರ್ಟ್‌ ನಿರ್ದೇಶಿಸಿದೆ. ಈ ಡಾಕ್ಯುಮೆಂಟರಿಯ ಮೊದಲ ಎಪಿಸೋಡ್‌ಗೆ ನೆಟ್‌ಫ್ಲಿಕ್ಸ್‌ ‘A Murdered Mother’ ಎಂಬ ಹೆಸರನ್ನಿಟ್ಟಿತ್ತು.

"ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್ಸ್"ನ ಪೋಸ್ಟರ್​

"ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್ಸ್"ನ ಪೋಸ್ಟರ್​

  • Share this:
ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ತನ್ನ ಹೊಸ ಕ್ರೈಂ ಡಾಕ್ಯುಮೆಂಟರಿ ಸರಣಿಯ "ಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟಿವ್ಸ್"ನ ಮೊದಲ ಸಂಚಿಕೆಯನ್ನು ಕರ್ನಾಟಕ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿರ್ಬಂಧಿಸಿದೆ. ಈ ಎಪಿಸೋಡ್‌ ಪ್ರಸಾರದ ವಿರುದ್ಧ ಶ್ರೀಧರ್ ರಾವ್ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಡಾಕ್ಯುಮೆಂಟರಿ ಸರಣಿಯ ಮೊದಲ ಸಂಚಿಕೆಯಲ್ಲಿ ಪ್ರಸಾರವಾದ ಕೊಲೆ ಪ್ರಕರಣದಲ್ಲಿ ರಾವ್‌ ಆರೋಪಿಯಾಗಿದ್ದಾರೆ.   ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ನೇತೃತ್ವದ ಕರ್ನಾಟಕ ಹೈಕೋರ್ಟಿನ ಏಕ ನ್ಯಾಯಾಧೀಶರ ಪೀಠ ತನ್ನ ಮಧ್ಯಂತರ ಆದೇಶದಲ್ಲಿ ಈ ತೀರ್ಪು ನೀಡಿದೆ. ನೆಟ್‌ಫ್ಲಿಕ್ಸ್‌ಗೆ "ಸ್ಟ್ರೀಮಿಂಗ್, ಬ್ರಾಡ್‌ಕ್ಯಾಸ್ಟಿಂಗ್‌, ಪ್ರಸಾರ ನಿರ್ಬಂಧಿಸಲು ಅಥವಾ ಇಲ್ಲದಿದ್ದರೆ ಡಾಕ್ಯುಮೆಂಟರಿಯ ಸರಣಿ ಯ ಮೊದಲ ಸಂಚಿಕೆಯಲ್ಲಿನ  ವಿಷಯವನ್ನು ಲಭ್ಯವಾಗದಂತೆ ಮಾಡಲು ಕೋರ್ಟ್‌ ನಿರ್ದೇಶಿಸಿದೆ. 

‘Crime Stories: India Detectives’ ಎಂಬ ಹೆಸರಿನ ಈ ಡಾಕ್ಯುಮೆಂಟರಿಯ ಮೊದಲ ಎಪಿಸೋಡ್‌ಗೆ ನೆಟ್‌ಫ್ಲಿಕ್ಸ್‌ ‘A Murdered Mother’ ಎಂಬ ಹೆಸರನ್ನಿಟ್ಟಿತ್ತು. ನೆಟ್‌ಫ್ಲಿಕ್ಸ್‌ನ ಕ್ರೈಂ ಡಾಕ್ಯುಮೆಂಟರಿ ಸರಣಿಯ ಮೊದಲ ಕಂತಿನಲ್ಲಿ ಬೆಂಗಳೂರಿನಲ್ಲಿ ತಾಯಿಯೊಬ್ಬರನ್ನು ತನ್ನ ಸ್ವಂತ ಮಗಳೇ ಕೊಲೆ ಮಾಡಿದ್ದಾರೆ ಎಂಬ ಕತೆಯನ್ನು ಒಳಗೊಂಡಿದೆ. ಮಗಳ ಸ್ನೇಹಿತೆಯನ್ನು ಈ ಕೊಲೆ ಪ್ರಕರಣದಲ್ಲಿ ಶಂಕಿತ ಆರೋಪಿ ಎಂದು ತೋರಿಸಲಾಗಿದೆ. ಅಂತಿಮವಾಗಿ ಪೋರ್ಟ್ ಬ್ಲೇರ್‌ನಲ್ಲಿ ಈ ಪ್ರಕರಣದ ಶಂಕಿತರನ್ನು ಬಂಧಿಸಲಾಗುತ್ತದೆ.

After watching the Crime Stories India Detectives series Karnataka state DGP and IG Praveen Sood shared his opinion ae
ಕ್ರೈಂ ಸರಣಿಯ ಪೋಸ್ಟರ್​


ಬೆಂಗಳೂರು ಪೊಲೀಸರು ದಾಖಲಿಸಿದ ಅಪರಾಧದಲ್ಲಿ ಭಾರತೀಯ ದಂಡ ಸಂಹಿತೆ, 1860 ರ ಕಲಂ 302 ಮತ್ತು 307, 212, 201 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ತಾವಿನ್ನೂ ವಿಚಾರಣೆಯಲ್ಲಿರುವುದಾಗಿ ರಾವ್‌ ಹೈಕೋರ್ಟ್‌ಗೆ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂಓದಿ: Sandalwood Actor: ಹಿರಿಯ ನಟ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ..!

ನೆಟ್‌ಫ್ಲಿಕ್ಸ್ ಎಪಿಸೋಡ್‌ನಲ್ಲಿ ಪ್ರಕರಣದ ತನಿಖೆಯ ದೃಶ್ಯಾವಳಿಗಳನ್ನು ಒಳಗೊಂಡಿದೆ ಮತ್ತು ಕೆಲವು ವಿಷಯಗಳು ಅವರ ರಕ್ಷಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಆರೋಪಿ ರಾವ್‌ ಹೈಕೋರ್ಟ್‌ ನ್ಯಾಯಮೂರ್ತಿ  ಎದುರು ಆತಂಕ ವ್ಯಕ್ತಪಡಿಸಿದ್ದಾರೆ.
ತನಿಖೆಯ ಸಮಯದಲ್ಲಿ ದಾಖಲಾದ ಸಂದರ್ಶನ ಮತ್ತು ಹೇಳಲಾದ ತಪ್ಪೊಪ್ಪಿಗೆಯ ವಿಡಿಯೋ ರೆಕಾರ್ಡಿಂಗ್ ಅನ್ನು ಈ ಎಪಿಸೋಡ್‌ ಒಳಗೊಂಡಿದೆ ಎಂದು ಅರ್ಜಿದಾರರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

"ಮುಕ್ತ ಮತ್ತು ನ್ಯಾಯಯುತ ವಿಚಾರಣೆಯ ಅರ್ಜಿದಾರರ ಹಕ್ಕು ತೀವ್ರವಾಗಿ ಪೂರ್ವಾಗ್ರಹಪೀಡಿತವಾಗಿದೆ. ಇದು ಅರ್ಜಿದಾರರ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ. ಜತೆಗೆ, ವಿಷಯವು ಯಾವುದೇ ಸಮರ್ಥನೆಯಿಲ್ಲದೆ, ಅರ್ಜಿದಾರರನ್ನು ಸಾರ್ವಜನಿಕರಿಂದ ಅಪಹಾಸ್ಯ ಮತ್ತು ಕಿರುಕುಳಕ್ಕೆ ಒಳಪಡಿಸುತ್ತದೆ’’ ಎಂದು ರಾವ್ ವಾದಿಸಿದ್ದಾರೆ. ಇನ್ನು, ಹೈಕೋರ್ಟ್‌ಗೂ ಮೊದಲು ರಾವ್‌ ಈ ಎಪಿಸೋಡ್‌ನ ಸ್ಟ್ರೀಮಿಂಗ್ ಅನ್ನು ತಡೆಯಲು ಮಧ್ಯಂತರ ಆದೇಶ ನೀಡಲು ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ, ಸಿವಿಲ್ ನ್ಯಾಯಾಲಯವು ಯಾವುದೇ ಮಧ್ಯಂತರ ಆದೇಶವನ್ನು ನೀಡಲಿಲ್ಲ ಎಂದು ಹೈಕೋರ್ಟ್‌ನಲ್ಲಿ ವಾದಿಸಲಾಯಿತು.

ಇದನ್ನೂ ಓದಿ:  ನೆಟ್​ಫ್ಲಿಕ್ಸ್​ನಲ್ಲಿ Crime Stories: India Detectives ಸರಣಿ ಮೂಲಕ ರೋಚಕ ಕಥೆ ಹೇಳುತ್ತಿರುವ ಬೆಂಗಳೂರು ಪೊಲೀಸರು

ಅರ್ಜಿದಾರರ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ “Crime Stories: India Detectives” ಸರಣಿಯ ಮೊದಲ ಸಂಚಿಕೆಯನ್ನು ಮುಂದಿನ ಆದೇಶದವರೆಗೆ ತಡೆಯುವಂತೆ ಹೇಳಿದೆ.  ಮಿನ್ನೋ ಫಿಲ್ಮ್ಸ್ ನಿರ್ಮಿಸಿದ ಈ ಸರಣಿಯನ್ನು ಎನ್. ಅಮಿತ್ ಮತ್ತು ಜ್ಯಾಕ್ ರಾಂಪ್ಲಿಂಗ್ ಜಂಟಿಯಾಗಿ
ನಿರ್ದೇಶಿಸಿದ್ದು, ಕನ್ನಡದಲ್ಲೇ ನಿರ್ಮಿಸಲಾಗಿದೆ. ಈ ವೆಬ್ ಸರಣಿ ರಿಲೀಸ್​ ಆದಾಗ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್​ ಅವರು ಮಾಧ್ಯಮವೊಂದಕ್ಕೆ ಸಂದರ್ಶ ಕೊಡುವ ಮೂಲಕ ತೆಗೆದುಕೊಳ್ಳಲಾಗಿದ್ದ ಮುನ್ನೆಚ್ಚರಿಕೆ ಹಾಗೂ ಇತರೆ ಮಾಹಿತಿಗಳನ್ನು ಹಂಚಿಕೊಂಡಿದ್ದರು.
Published by:Anitha E
First published: