Premam Poojyam: 25ನೇ ಸಿನಿಮಾದ ಚಿತ್ರೀಕರಣ ಮುಗಿಸಿದ ನಟ ನೆನಪಿರಲಿ ಪ್ರೇಮ್​..!

Nenapirali Prem:

ನಟ ಪ್ರೇಮ್​

ನಟ ಪ್ರೇಮ್​

  • Share this:
ನೆನಪಿರಲಿ ಪ್ರೇಮ್​ ಸದ್ಯ ಸಖತ್ ವಿಭಿನ್ನವಾದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋ ವಿಷಯ ಗೊತ್ತೇ ಇದೆ. ಲಾಕ್​ಡೌನ್​ನಿಂದಾಗಿ ಅವರ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. ಲಾಕ್​ಡೌನ್​ನಿಂದಾಗಿ ಸಿಕ್ಕಿದ್ದ ಸಮಯವನ್ನು ಸೆಲೆಬ್ರಿಟಿಗಳು ತಮಗೆ ಇಷ್ಟವಾದ ರೀತಿಯಲ್ಲಿ ಕಳೆಯುತ್ತರು. ಕೆಲವರಂತೂ ಈ ಸಮಯವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನ ಈ ಹ್ಯಾಂಡ್ಸಮ್​ ಹೀರೋ​ ಲಾಕ್​ಡೌನ್​ನಲ್ಲಿ ತಮಗೆ ತಾವೇ ಚಾಲೆಂಜ್​ ಹಾಕಿಕೊಂಡು ಸಖತ್​ ವರ್ಕೌಟ್​ ಮಾಡುತ್ತಿದ್ದರು. ಆಗಾಗ ತಮ್ಮ ವರ್ಕೌಟ್​ ಫೋಟೋವನ್ನು ಪ್ರೇಮ್​ ಹಂಚಿಕೊಳ್ಳುತ್ತಿದ್ದರು. ಪ್ರೇಮ್ ಲಾಕ್​ಡೌನ್​ನಲ್ಲಿ ಅಷ್ಟೆಲ್ಲ ವರ್ಕೌಟ್​ ಮಾಡಿ ಬಾಡಿ ಬಿಲ್ಡ್​ ಮಾಡಿದ್ದು ಅವರ ಹೊಸ ಸಿನಿಮಾಗಾಗಿ. ಅದೇ ಪ್ರೇಮಂ ಪೂಜ್ಯಂ ಸಿನಿಮಾ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಲಾಕ್​ಡೌನ್​ಗೂ ಮೊದಲೇ ಪ್ರೇಮಂ ಪೂಜ್ಯಂ ಸಿನಿಮಾದ ಮುಹೂರ್ತ ನೆರವೇರಿಸಲಾಗಿತ್ತು. ಚಿತ್ರೀಕರಣ ಸಹ ಆರಂಭವಾಗಿತ್ತು. 

ಕೊರೋನಾ ಭೀತಿಯಿಂದಾಗಿ ಎಲ್ಲೆಡೆ ಲಾಕ್​ಡೌನ್​ ಮಾಡಲಾಗಿತ್ತು. ಈ ಕಾರಣದಿಂದ ಪ್ರೇಮಂಪೂಜ್ಯಂ ಚಿತ್ರದ ಚಿತ್ರೀಕರಣವೂ ನಿಂತಿತ್ತು. ರಾಜ್ಯದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ದೊರೆಯುತ್ತಿದ್ದಂತೆಯೇ ಶೂಟಿಂಗ್​ ಆರಂಭಿಸಿತ್ತು ಚಿತ್ರತಂಡ. ಈಗ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಕುರಿತಾಗಿ ನಾಯಕ ಪ್ರೇಮ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.
View this post on Instagram

Shooting Completed Successfully! @premam.poojyam #STAYLOVELY


A post shared by Prem Nenapirali (@premnenapirali) on

ಪ್ರೇಮಂ ಪೂಜ್ಯಂ ಚಿತ್ರತಂಡದ ಫೋಟೋ ಜೊತೆಗೆ ಶೂಟಿಂಗ್​ ಪೂರ್ಣಗೊಂಡ ವಿಷಯವನ್ನೂ ಹಂಚಿಕೊಂಡಿದ್ದಾರೆ. ಹೊಸ ನಿರ್ದೇಶಕ ರಾಘವೇಂದ್ರ ನಿರ್ದೇಶನದ ಈ ಸಿನಿಮಾ ಪ್ರೇಮ್​ ಅವರ ವೃತ್ತಿ ಬದುಕಿನ 25ನೇ ಚಿತ್ರವಾಗಿದೆ. ಕಳೆದ ಯುಗಾದಿ ಹಬ್ಬದಂದು ಈ ಚಿತ್ರದ ಪೋಸ್ಟರ್​ ರಿಲೀಸ್ ಮಾಡಲಾಗಿತ್ತು.


ಪ್ರೇಮಂ ಪೂಜ್ಯಂ ಸಿನಿಮಾವನ್ನು ಪ್ರಕಟಿಸಿದಾಗ ಈ ಚಿತ್ರದಲ್ಲಿ ಐಂದ್ರಿತಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ನಂತರದಲ್ಲಿ ಬೃಂದಾ ಆಚಾರ್ಯ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಲಾಯಿತು.
ಈ ಸಿನಿಮಾದ ಚಿತ್ರೀಕರಣವನ್ನು ಕೇರಳದ ಹಲವಾರು ಭಾಗಗಳಲ್ಲಿ ಮಾಡಲಾಗಿದೆ. ಇತ್ತೀಚೆಗೆ ಪ್ರೇಮ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಅವರು ಫೋಟೋಳನ್ನು ತೆಗೆದ ಸ್ಥಳದ ಬಗ್ಗೆ ಅಭಿಮಾನಿಗಳು ಕೇಳಲಾರಂಭಿಸಿದ್ದರು. ಪ್ರೇಮ್​ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದರೆ ಸಾಕು, ಸಿನಿಮಾ ಎಷ್ಟು ಕಲರ್​ ಫುಲ್​ ಲೊಕೇಷನ್​ಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಯುತ್ತದೆ.


ನೆನಪಿರಲಿ ಪ್ರೇಮ್​ ಅವರು ಲಾಕ್​ಡೌನ್​ನಲ್ಲಿ ತಮ್ಮ ಕುಟುಂಬದೊಂದಿಗೆ ಸಖತ್​ ಮಜವಾಗಿ ಕಾಲ ಕಳೆದಿದ್ದಾರೆ. ಆಗಾಗ ತಮ್ಮ ಪತ್ನಿ ಜೊತೆ ತೆಗೆಸಿಕೊಂಡ ಹಳೇ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದರು.
Published by:Anitha E
First published: