ನೆನಪಿರಲಿ ಸಿನಿಮಾ ಖ್ಯಾತಿಯ ನಟಿ ವರ್ಷ ಈಗ ಹೇಗಿದ್ದಾರೆ? ಏನು ಮಾಡ್ತಾ ಇದ್ದಾರೆ?; ಇಲ್ಲಿದೆ ಮಾಹಿತಿ

ಡಿ‘ಬಾಸ್’​​ ದರ್ಶನ್​ ನಟನೆಯ ನವಗ್ರಹ 2008ರಲ್ಲಿ ತೆರೆಕಂಡ ಸಿನಿಮಾ. ಈ ಸಿನಿಮಾದ ಬಳಿಕ ವರ್ಷ ನಟನೆಯಿಂದ ದೂರ ಉಳಿದರು

news18-kannada
Updated:September 30, 2020, 10:16 PM IST
ನೆನಪಿರಲಿ ಸಿನಿಮಾ ಖ್ಯಾತಿಯ ನಟಿ ವರ್ಷ ಈಗ ಹೇಗಿದ್ದಾರೆ? ಏನು ಮಾಡ್ತಾ ಇದ್ದಾರೆ?; ಇಲ್ಲಿದೆ ಮಾಹಿತಿ
varsha
  • Share this:
ಪ್ರೇಮ್​ ನಟನೆಯ ನೆನಪಿರಲಿ ಸಿನಿಮಾ 2005ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ನಟ ಪ್ರೇಮ್​ಗೆ ನಾಯಕಿಯಾಗಿ ನಟಿ ವರ್ಷ ಅಭಿನಯಿಸಿದ್ದರು. ಇವರಿಬ್ಬರ ಅದ್ಧುತ ನಟನೆ ಸಿನಿ  ಪ್ರಿಯರನ್ನು ಮನರಂಜಿಸಿತ್ತಲ್ಲದೆ, ಮುಂದಿನ ಸಿನಿಮಾಗೆ ದಾರಿ ಮಾಡಿಕೊಟ್ಟಿತು. ಸಿನಿಮಾದ ದ್ವಿತಿಯಾರ್ಧದಲ್ಲಿ ವರ್ಷ ನಟಿಸಿದ್ದರಾದರು, ಪಾತ್ರಕ್ಕೆ ತಕ್ಕಂತ ಅವರ ಅಭಿನಯ ಅಭಿಮಾನಿಗಳ ಮನಸ್ಸಲ್ಲಿ ಹಾಗೆಯೇ ಉಳಿಯುವಂತೆ ಮಾಡಿತು. ಅದಾದ ಬಳಿಕ ನಟಿ ವರ್ಷ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ನಟನೆಯ ನವಗ್ರಹ ಸಿನಿಮಾದಲ್ಲಿ ನಟಿಸಿದರು. ದರ್ಶನ್​ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ಬಳಿಕ ವರ್ಷ ನಟನೆಯಿಂದ ಕೊಂಚ ದೂರ ಸರಿದರು. ಆದರೀಗ ನಟಿ ವರ್ಷ ಏನು ಮಾಡುತ್ತಿದ್ದಾರೆ ಗೊತ್ತಾ? ಅವರ ಬಗೆಗಿನ ಕುತೂಹಲಕರ ಮಾಹಿತಿ ಇಲ್ಲಿದೆ…

ಡಿ‘ಬಾಸ್’​​ ದರ್ಶನ್​ ನಟನೆಯ ನವಗ್ರಹ 2008ರಲ್ಲಿ ತೆರೆಕಂಡ ಸಿನಿಮಾ. ಈ ಸಿನಿಮಾದ ಬಳಿಕ ವರ್ಷ ನಟನೆಯಿಂದ ದೂರ ಉಳಿದರು. 12 ವರ್ಷಗಳಿಂದ ವರ್ಷ ನಟನೆ ಮತ್ತು ಸಿನಿಮಾ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕಾರಣವೇನು ಎಂದು ಯಾರಿಗೂ ಹೇಳಿಕೊಂಡಿಲ್ಲ. ನಂತರ ಕಾಮೇಶ್​​ ಎಂಬವರನ್ನು ವರ್ಷ ವಿವಾಹವಾದರು. ಸದ್ಯ ವರ್ಷಗೆ ಎರಡು ಗಂಡು ಮಕ್ಕಳಿದ್ದಾರೆ.

ಮತ್ತೆ ನಟನೆಯತ್ತ ನಟಿ ವರ್ಷ!

ಅನೇಕ ವರ್ಷಗಳ ಬಳಿಕ ಎಲ್ಲೂ ಕಾಣಿಸಿಕೊಳ್ಳದ ನಟಿ ವರ್ಷ ಇದೀಗ ಮನರಂಜನಾ ಮಾಧ್ಯಮಕ್ಕೆ ಮತ್ತೆ ವಾಪಾಸ್​ ಆಗಿದ್ದಾರೆ. ಪಾಪಾ ಪಾಂಡು ಧಾರಾವಾಹಿ ಖ್ಯಾತಿಯ ನಟಿ ಶಾಲಿನಿ ಜೊತೆಗೆ ಕೈಜೋಡಿಸಿಕೊಂಡು ಯ್ಯೂಟೂಬ್​ ಸಿರೀಸ್​ ಪ್ರಾರಂಭಿಸಿದ್ದಾರೆ.

ನೆನಪಿರಲಿ


ಹೌದು. ಶಾಲಿನಿ ಮತ್ತು ವರ್ಷ ಶಾಲಿವುಡ್​ ಎಂಬ ಯ್ಯೂಟೂಬ್​ ಚಾನೆಲ್​ ಆರಂಭಿಸಿದ್ದಾರೆ. ಪ್ರತಿವಾರ ಈ ಯ್ಯೂಟೂಬ್​ ಚಾನೆಲ್​ನಲ್ಲಿ ಹಾಸ್ಯಭರಿತ ಸಂಭಾಷಣೆಯನ್ನು ಎಪಿಸೋಡ್​ ಮಾಡುತ್ತಿದ್ದಾರೆ. ತಾಯಿ ಮತ್ತು ಮಗಳ ಪಾತ್ರದಲ್ಲಿ ಇವರಿಬ್ಬರು ಮಿಂಚಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶಾಲಿನಿ ‘ಶಾಲಿವುಡ್’​ ಸಿರೀಸ್​ ವೈರಲ್​ ಆಗಿದ್ದು, ಅನೇಕ ಮೆಚ್ಚುಗೆಗೆ ಪಾತ್ರವಾಗಿದೆ. ಅಂತೂ ಅನೇಕ ವರ್ಷಗಳ ಬಳಿಕ ನಟಿ ವರ್ಷ ಅಭಿಮಾನಿಗಳ ಎದುರು ಕಾಣಿಸಿಕೊಳ್ಳುತ್ತಿದ್ದಾರೆ.
First published: September 30, 2020, 10:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading