Anitha EAnitha E
|
news18-kannada Updated:February 22, 2021, 4:14 PM IST
ಹೀರೋ ಸಿನಿಮಾದಲ್ಲಿ ರಿಷಭ್ ಶೆಟ್ಟಿ
ರಿಷಭ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಹೀರೋ.... ಸದ್ಯಕ್ಕೆ ಸಿನಿಪ್ರಿಯಲ್ಲಿ ಟ್ರೇಲರ್ ಮೂಲಕವೇ ಬೆಟ್ಟದಷ್ಟು ನಿರೀಕ್ಷೆ ಹಾಗೂ ಕುತೂಹಲ ಹುಟ್ಟುಹಾಕಿರುವ ಈ ಸಿನಿಮಾ ಮಾರ್ಚ್ 5ಕ್ಕೆ ರಿಲೀಸ್ ಆಗಲಿದೆ. ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು ಭರತ್ ರಾಜ್ ಎಂ ನಿರ್ದೇಶಿಸಿದ್ದಾರೆ. ಭರತ್ ರಾಜ್ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಇದರಲ್ಲಿ ರಿಷಭ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ನಟಿಸಿದ್ದಾರೆ. ಸಂಕ್ರಾಂತಿ ಹಬ್ಬದಂದು ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿತ್ತು. ಸಿನಿಮಾದಲ್ಲಿ ವಿಲನ್ ಆಗಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದು, ಪ್ರಮೋದ್ ಅವರನ್ನು ಚಕ್ರಾಧಿಪತಿ ರಾವಣನಿಗೆ ಹೋಲಿಕೆ ಮಾಡಲಾಗಿದೆ. ಲಂಕಾಸುರನಂತಿರುವ ಪ್ರಮೋದ್ ಶೆಟ್ಟಿಯ ಅಡಿಯಾಳುಗಳಿಗೆ ಕ್ರೌರ್ಯವೇ ಕರ್ಮ, ನಿಷ್ಠೆಯಿಂದ ಕ್ರೌರ್ಯವನ್ನೇ ಕರ್ಮವನ್ನಾಗಿ ಮಾಡುವ ಅವರಿಗೆ ಬಿಸಿ ನೆತ್ತರು ಮೈ ಸೋಕಿದರೆ ಅವರಿಗೆ ಹಸಿರು. ಇಂತಹ ರಕ್ತಸಿಕ್ತ ಸಸ್ಪೆನ್ಸ್ ಕಥೆಯಲ್ಲಿ ಸೇಡು, ಮೋಸ, ಪ್ರೀತಿ, ದ್ವೇಷ ಎಲ್ಲವೂ ಇದೆ.
ಸ್ವರ್ಣದೋಕುಳಿಲಿರುವ ಲಂಕೆಯಲ್ಲಿನ ರಕ್ತಸಿಕ್ತ ಕಥೆಯೇ ಈ ಹೀರೋ. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಅವುಗಳಲ್ಲಿ ಒಂದನ್ನು ಈಗ ಚಿತ್ರತಂಡ ರಿಲೀಸ್ ಮಾಡಿದೆ. ನಿನ್ನೆಯೇ ಈ ಹಾಡಿನ ಪುಟ್ಟ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು.
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ನೆನಪಿನ ಹುಡುಗಿಯೇ ಹಾಡಿಗೆ ಯೋಗರಾಜ ಭಟ್ ಅವರು ಸಾಹಿತ್ಯ ನೀಡಿದ್ದಾರೆ. ಭಟ್ರು ಸತತ ಮೂರು ಗಂಟೆಗಳ ಕಾಲ ಕುಳಿತು ಈ ಹಾಡನ್ನು ಬರೆದಿದ್ದಾರಂತೆ. ಹೀಗೆಂದು ಕೆಲವೇ ಗಂಟೆಗಳ ಹಿಂದೆಯಷ್ಟೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ರಿಷಭ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಗಾಯಕ ವಿಜಯ ಪ್ರಕಾಶ್ ಅವರು ದನಿಯಾಗಿರುವ ಈ ಲಿರಿಕಲ್ ವಿಡಿಯೋ ಸದ್ಯ ಸಂಗೀತ ಪ್ರಿಯರಿಗೆ ಇಷ್ಟವಾಗುತ್ತಿದೆ.
ಸಿನಿಮಾದಲ್ಲಿರುವ ನಾಲ್ಕು ಹಾಡುಗಳಲ್ಲಿ ಎರಡನ್ನು ಯೋಗರಾಜ್ ಭಟ್ಟರು ಬರೆದಿದ್ದಾರೆ. ಮತ್ತೊಂದನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರಂತೆ. 3 ಗಂಟೆಗಳಲ್ಲಿ ನನೆನಪಿನ ಹುಡುಗಿ... ಹಾಡನ್ನು ಬರೆದ ಯೋಗರಾಜ್ ಭಟ್ ಅವರು, ನಂತರ ಮತ್ತೊಂದು ಹಾಡನ್ನು ಒಂದೇ ಗಂಟೆಯಲ್ಲಿ ಬರೆದಿದ್ದಾರಂತೆ. ಅದು ಮತ್ತಷ್ಟು ಇಂಟೆನ್ಸ್ ಆಗಿ ಮೂಡಿ ಬಂದಿದೆಯಂತೆ. ಸಿನಿಮಾ ರಿಲೀಸ್ಗೆ 4ನಾಲ್ಕು ದಿನಗಳಿರುವಾಗ ಒಂದು ಹಾಡನ್ನು ರಿಲೀಸ್ ಮಾಡಲಿದ್ದಾರಂತೆ ರಿಷಭ್ ಶೆಟ್ಟಿ.
ಸದ್ಯ ರಿಷಭ್ ಶೆಟ್ಟಿ ಹಾಗೂ ಅವರ ಹೀರೋ ಚಿತ್ರತಂಡ ಕೊಚ್ಚಿಯಲ್ಲಿದ್ದಾರೆ. ಹಾಡು ರಿಲೀಸ್ ಆದ ನಂತರ ಬೆಂಗಳೂರಿಗೆ ಬರುತ್ತಿದ್ದೇವೆ ಎಂದಿದ್ದಾರೆ ರಿಷಭ್. ಹೀರೋ ಸಿನಿಮಾದ ಪ್ರಚಾರ ಕಾರ್ಯ ಸಹ ಆರಂಭವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಹೀರೋ ರಿಲೀಸ್ಗೆ ಪ್ಲಾನ್ ಮಾಡಲಾಗುತ್ತಿದೆ.
ಹೀರೋ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟ
ಹಿಂದಿ ಡಬ್ಬಿಂಗ್ ರೈಟ್ಸ್ ಸೇಲಾಗಿದೆಯಂತೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವು ಅಷ್ಟು ಸುಲಭವಲ್ಲ. ಅದಕ್ಕೆ ದೊಡ್ಡ ಮಟ್ಟದ ಪ್ಲಾನ್ ಬೇಕು. ಇಲ್ಲೇ ಕನ್ನಡ ಸಿನಿಮಾವನ್ನು ಹಿಟ್ ಮಾಡಿ, ಅದು ದೇಶ ಅಲ್ಲ ವಿದೇಶದವರೆಗೂ ತಲುಪಲಿದೆ ಎಂದಿದ್ದಾರೆ ರಿಷಭ್ ಶೆಟ್ಟಿ.
300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಹೀರೋ ಸಿನಿಮಾ
ಜಯಣ್ಣ ಹಾಗೂ ಭುವನ್ ಅವರು ಹೀರೋ ಸಿನಿಮಾದ ವಿತರಕರಾಗಿದ್ದಾರೆ. 75-100 ಸಿಂಗಲ್ ಸ್ಕ್ರೀನ್ ಹಾಗೂ ಎಲ್ಲ ಮಲ್ಟಿಪ್ಲೆಕ್ಸ್ಗಳಲ್ಲಿ ಹೀರೋ ಸಿನಿಮಾ ರಿಲೀಸ್ಗೆ ತಯಾರಿ ನಡೆದಿದೆ. ಒಟ್ಟಾರೆ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ಕನ್ನಡ ಸಿನಿಮಾವನ್ನೇ ದೇಶದ ಬೇರೆ ರಾಜ್ಯಗಳಲ್ಲೂ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆಯಂತೆ.
ಇದನ್ನೂ ಓದಿ: ವಿವಾದದಲ್ಲಿ ಪೊಗರು ಸಿನಿಮಾ: ವಿವಿಧ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ
ರಿಷಭ್ ಶೆಟ್ಟಿ ಅವರ ಕೈಯಲ್ಲಿರುವ ಪ್ರಾಜೆಕ್ಟ್ಗಳ ವಿಷಯಕ್ಕೆ ಬಂದರೆ, ಹೀರೋ ಹೊರತಾಗಿ ಹರಿಕಥೆ ಅಲ್ಲ ಗಿರಿಕಥೆ, ನಾತುರಾಮ್, ಮಹನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ, ಬೆಲ್ ಬಾಟಂ 2 ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಈ ಕೌ ಬಾಯ್ ಕೃಷ್ಣ.
Published by:
Anitha E
First published:
February 22, 2021, 4:14 PM IST