• Home
  • »
  • News
  • »
  • entertainment
  • »
  • Neha Kakkar: ಫಲ್ಗುಣಿ ಪಠಕ್ ಹಾಡನ್ನು ಹಾಳು ಮಾಡಿದ್ರಂತೆ ನೇಹಾ ಕಕ್ಕರ್! ಆನ್​​ಲೈನ್​​ನಲ್ಲಿ ಇದೇ ಚರ್ಚೆ

Neha Kakkar: ಫಲ್ಗುಣಿ ಪಠಕ್ ಹಾಡನ್ನು ಹಾಳು ಮಾಡಿದ್ರಂತೆ ನೇಹಾ ಕಕ್ಕರ್! ಆನ್​​ಲೈನ್​​ನಲ್ಲಿ ಇದೇ ಚರ್ಚೆ

ಫಲ್ಗುಣಿ ಪಾಠಕ್ ಮತ್ತು ನೇಹಾ ಕಕ್ಕರ್

ಫಲ್ಗುಣಿ ಪಾಠಕ್ ಮತ್ತು ನೇಹಾ ಕಕ್ಕರ್

ಫಲ್ಗುಣಿ ಪಠಕ್ ಅವರ ಹಾಡನ್ನು ಇಲ್ಲಿ ಒಬ್ಬ ಗಾಯಕಿ ಹಾಳು ಮಾಡಿದ್ದಾರಂತೆ ಅಥವಾ ಅದನ್ನು ಒಂದು ರೀತಿಯಲ್ಲಿ ಮನರಂಜನೆಯಾಗಿ ಪರಿಗಣಿಸಿ ಅದನ್ನು ಮರುಸೃಷ್ಟಿ ಮಾಡಿ ಮೂಲ ಹಾಡಿಗೆ ಮತ್ತು ಮೂಲ ಗಾಯಕರಿಗೆ ಒಂದು ರೀತಿಯ ಅವಹೇಳನ ಮಾಡಿದಂತಾಗಿದೆ ಅಂತ ಸಾಮಾಜಿಕ ಮಾಧ್ಯಮದಲ್ಲಿ ಆ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ನೋಡಿ.

ಮುಂದೆ ಓದಿ ...
  • Share this:

ನೀವು 1999 ರಲ್ಲಿ ಕಾಲೇಜು ಅಥವಾ ಶಾಲೆಯ ವಿದ್ಯಾರ್ಥಿಯಾಗಿದ್ದರೆ (Students), ನಿಮಗೆ ಆಗ ತಿಂಗಳುಗಟ್ಟಲೆ ಆಗಾಗ್ಗೆ ಟಿವಿಯಲ್ಲಿ ಪ್ರಸಾರವಾದ ತುಂಬಾನೇ ಜನಪ್ರಿಯ ಹಾಡೊಂದು (Famous song) ನಿಮಗೆ ಖಂಡಿತವಾಗಿಯೂ ನೆನಪಿರುತ್ತದೆ. ಆ ಹಾಡು ವಿಶೇಷವಾಗಿ ಕಾಲೇಜಿ ಹೋಗುತ್ತಿದ್ದ ಹುಡುಗ ಮತ್ತು ಹುಡುಗಿಯರ ಅಚ್ಚುಮೆಚ್ಚಿನ ಹಾಡಾಗಿರುತ್ತದೆ. ಹೌದು.. ಅದು ಆಗಿನ ಜನಪ್ರಿಯ ಗಾಯಕಿಯಲ್ಲಿ ಒಬ್ಬರಾದ ಫಲ್ಗುಣಿ ಪಾಠಕ್ (Falguni Pathak) ಅವರ 'ಮೈನೆ ಪಾಯಲ್ ಹೈ ಚಂಕಾಯಿ' ಹಾಡು ಅಂತ ಹೇಳಿದ ತಕ್ಷಣವೇ ಆ ಹಾಡಿನ ಮೊದಲ ಸಾಲು ಮತ್ತು ಆ ಹಾಡಿನ ಮಧುರವಾದ ಸಂಗೀತ ನೆನಪಿಗೆ ಬರುತ್ತದೆ.


ಈ ಹಾಡು ಎಷ್ಟೊಂದು ಹವಾ ಸೃಷ್ಟಿಸಿತ್ತು ಆಗ ಎಂದರೆ ಬಹುತೇಕ ಕಾಲೇಜು ಹೋಗುವ ವಿದ್ಯಾರ್ಥಿಗಳ ಬಾಯಲ್ಲಿ ಇದೇ ಹಾಡು ಇರುತ್ತಿತ್ತು. ಸುಮಾರು 23 ವರ್ಷ ಆದ ನಂತರ ಈ ಹಾಡಿನ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಮನದಲ್ಲಿ ಪ್ರಶ್ನೆಯೊಂದು ಕಾಡಬಹುದು.


ಮೂಲ ಹಾಡನ್ನು ಹಾಳು ಮಾಡಿದ್ದಾರಂತೆ ಈ ಗಾಯಕಿ!
ವಿಷಯ ಇದೆ.. ಈ ಹಾಡನ್ನು ಇಲ್ಲಿ ಒಬ್ಬ ಗಾಯಕಿ ಹಾಳು ಮಾಡಿದ್ದಾರಂತೆ ಅಥವಾ ಅದನ್ನು ಒಂದು ರೀತಿಯಲ್ಲಿ ಮನರಂಜನೆಯಾಗಿ ಪರಿಗಣಿಸಿ ಅದನ್ನು ಮರುಸೃಷ್ಟಿ ಮಾಡಿ ಮೂಲ ಹಾಡಿಗೆ ಮತ್ತು ಮೂಲ ಗಾಯಕರಿಗೆ ಒಂದು ರೀತಿಯ ಅವಹೇಳನ ಮಾಡಿದಂತಾಗಿದೆ ಅಂತ ಸಾಮಾಜಿಕ ಮಾಧ್ಯಮದಲ್ಲಿ ಆ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ನೋಡಿ.


ಇದನ್ನೂ ಓದಿ: Nayanthara: ನಯನತಾರಾ ಗರ್ಭಿಣಿಯಾ? ಪತಿ ವಿಘ್ನೇಶ್ ಪೋಸ್ಟ್ ವೈರಲ್


ಈ ಹಾಡನ್ನು ಹೀಗೆ ಮರುಸೃಷ್ಟಿ ಮಾಡಿ ಹಾಳು ಮಾಡಿರೋರು ಬೇರೆ ಯಾರು ಅಲ್ಲ, ಆ ಗಾಯಕಿ ನೇಹಾ ಕಕ್ಕರ್ ಅಂತ ಹೇಳಲಾಗುತ್ತಿದೆ. ನೆಟ್ಟಿಗರಂತೂ ಗಾಯಕಿ ನೇಹಾ ಕಕ್ಕರ್ ಅವರಿಗೆ 90 ರ ದಶಕದ ಐಕಾನಿಕ್ ಹಾಡಾದ 'ಮೈನೆ ಪಾಯಲ್ ಹೈ ಚಂಕಾಯಿ’ ನೀಡುವ ಮನೋರಂಜನೆಯಿಂದ ಸಂತೋಷವಾಗಿಲ್ಲ ಅಂತ ತೋರುತ್ತದೆ ಅಂತ ಹೇಳಿದ್ದಾರೆ.


ನೆಟ್ಟಿಗರ ಕಾಮೆಂಟ್ ನೋಡಿ..
ಅನೇಕ ಅಭಿಮಾನಿಗಳು ಗಾಯಕಿ ನೇಹಾ ಮೂಲ ಹಾಡನ್ನು ಹಾಳು ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು. 90 ರ ದಶಕದ ಹಿಟ್ ಟ್ರ್ಯಾಕ್ ಅನ್ನು ಮೂಲ ಗಾಯಕಿ ಫಲ್ಗುಣಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಭಿಮಾನಿಗಳ ಪೋಸ್ಟ್ ಗಳನ್ನು ಮರುಹಂಚಿಕೊಂಡಿದ್ದಾರೆ, ಇದು ನೇಹಾ ಅವರ 'ಓ ಸಜನಾ' ಹೆಸರಿನ ಹಾಡಿನ ಬಗ್ಗೆ ಪರೋಕ್ಷವಾಗಿ ಅಸಮ್ಮತಿಯನ್ನು ತೋರಿಸುತ್ತದೆ.


"ನೇಹಾ ಕಕ್ಕರ್ ನೀವು ಇನ್ನೂ ಎಷ್ಟು ಹಳೆಯ ಒಳ್ಳೆಯ ಹಾಡುಗಳನ್ನು ಹೀಗೆ ರೀಮೇಕ್ ಮಾಡಿ ಹಾಳು ಮಾಡಬೇಕೆಂದು ಅಂದುಕೊಂಡಿದ್ದೀರಿ? ನಮಗಾಗಿ ನಮ್ಮ ಹಳೆಯ ಕ್ಲಾಸಿಕ್ ಹಾಡುಗಳನ್ನು ಹಾಳು ಮಾಡುವುದನ್ನು ದಯವಿಟ್ಟು ನಿಲ್ಲಿಸಿ" ಎಂದು ಫಲ್ಗುಣಿ ಅವರ ಇನ್ಸ್ಟಾಗ್ರಾಮ್ ಸ್ಟೋರಿಯ ಪೋಸ್ಟ್ ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.


ಮೂಲ ಹಾಡು 1999 ರಲ್ಲಿ ಬಿಡುಗಡೆಯಾಗಿತ್ತು
ಈ ಮೂಲ ಹಾಡನ್ನು 1999 ರಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು ಈ ಹಾಡಿನಲ್ಲಿ ನಟರಾದ ವಿವಾನ್ ಭಟೆನಾ ಮತ್ತು ನಿಖಿಲಾ ಪಲಟ್ ಅವರು ಕಾಣಿಸಿಕೊಂಡಿದ್ದರು. ಕಾಲೇಜು ಫೆಸ್ಟ್ ವೊಂದರಲ್ಲಿ ಕೈಗೊಂಬೆ ಪ್ರದರ್ಶನವನ್ನು ಮಾಡುವ ಒಂದು ಸಂದರ್ಭವನ್ನು ಆ ವಿಡಿಯೋದಲ್ಲಿ ತೋರಿಸಲಾಗಿತ್ತು. ಈ ಹಾಡು ಆಗ ಭಾರಿ ಹಿಟ್ ಆಗಿತ್ತು. ಇದರ ಹೊಸ ಆವೃತ್ತಿಯನ್ನು ಇತ್ತೀಚೆಗೆ ಹೊರ ತರಲಾಯಿತು.


ಇದನ್ನೂ ಓದಿ:  Ganesh In Kenya Market: ಆಫ್ರಿಕಾ ದೇಶದ ಕೀನ್ಯಾ ಮಾರ್ಕೆಟ್​ ನಲ್ಲಿ ಗೋಲ್ಡನ್ ಗಣಿ ಸಖತ್ ರೋಮಿಂಗೋ ರೋಮಿಂಗ್


ಹೊಸದಾಗಿ ಹೊರ ಬಂದಿರುವ ‘ಓ ಸಜನಾ’ ಮ್ಯೂಸಿಕ್ ವೀಡಿಯೋದಲ್ಲಿ ಪ್ರಿಯಾಂಕ್ ಶರ್ಮಾ ಮತ್ತು ಧನಶ್ರೀ ವರ್ಮಾ ಅವರು ಕಾಣಿಸಿಕೊಂಡಿದ್ದಾರೆ. ಹಳೆಯ ಹಿಟ್ ಹಿಂದಿ ಹಾಡುಗಳನ್ನು ಮರುಸೃಷ್ಟಿಸುವಲ್ಲಿ ಹೆಸರುವಾಸಿಯಾದ ತನಿಷ್ಕ್ ಬಾಗ್ಚಿ ಅವರು 'ಓ ಸಜ್ನಾ' ಅನ್ನು ಸಂಯೋಜಿಸಿದ್ದಾರೆ. ಈ ಹಾಡನ್ನು ನೇಹಾ ಕಕ್ಕರ್ ಅವರು ಹಾಡಿದ್ದಾರೆ.


ಕಾನೂನು ಕ್ರಮದ ಬಗ್ಗೆ ಫಲ್ಗುಣಿ ಹೇಳುವುದೇನು?
ಹೀಗೆ ತಮ್ಮ ಹಾಡನ್ನು ರೀಮೇಕ್ ಮಾಡಿದ್ದಕ್ಕೆ ನೀವು ಕಾನೂನು ಕ್ರಮ ತೆಗೆದು ಕೊಳ್ಳುತ್ತೀರಾ ಅಂತ ಫಲ್ಗುಣಿ ಅವರನ್ನು ಕೇಳಿದಾಗ, "ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೆ, ಆದರೆ ಆ ಹಾಡಿನ ಹಕ್ಕುಗಳು ನನ್ನೊಂದಿಗೆ ಇಲ್ಲ" ಎಂದು ಹೇಳಿದರು.

Published by:Ashwini Prabhu
First published: