News18 India World Cup 2019

ಗುಟ್ಟು ರಟ್ಟಾಯಿತು: ವಿವಾಹಕ್ಕೆ ಮುನ್ನವೇ ಗರ್ಭಿಣಿಯಾಗಿದ ಬಾಲಿವುಡ್​ ನಟಿ ಯಾರು..!

news18
Updated:August 25, 2018, 5:28 PM IST
ಗುಟ್ಟು ರಟ್ಟಾಯಿತು: ವಿವಾಹಕ್ಕೆ ಮುನ್ನವೇ ಗರ್ಭಿಣಿಯಾಗಿದ ಬಾಲಿವುಡ್​ ನಟಿ ಯಾರು..!
news18
Updated: August 25, 2018, 5:28 PM IST
ನ್ಯೂಸ್​​ 18 ಕನ್ನಡ 

ಈ ಸಿನಿಮಾ ರಂಗದಲ್ಲಿ ಲಿವಿಂಗ್​ ರಿಲೇಶನ್​ ಬಗ್ಗೆ ಸಾಕಷ್ಟು ಕೇಳಿದ್ದೀವಿ. ಹಾಗೆಯೇ ಸಾಕಷ್ಟು ಸೆಲೆಬ್ರಿಟಿಗಳು ವಿವಾಹಕ್ಕೆ ಮುನ್ನವೇ ಗರ್ಭ ಧರಿಸಿ, ನಂತರ ವಿವಾಹವಾದರೂ ಇದ್ದಾರೆ. ಈ ಹಿಂದೆ ತಿಳಿದಂತೆ ಶ್ರೀದೇವಿ, ಕೊಂಕಣಾ ಸೇನ್​ ಸಹ ವಿವಾಹಕ್ಕೆ ಮುನ್ನವೇ ಗರ್ಭಿಣಿಯಾಗಿದ್ದವರು. ಈಗ ಈ ಪಟ್ಟಿಗೆ ನೇಹಾ ಸಹ ಸೇರ್ಪಡೆಯಾಗಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೆ ಖಾಸಗಿ ಸಮಾರಂಭದಲ್ಲಿ ವಿವಾಹ ಬಂಧನಕ್ಕೊಳಗಾದ ನಟಿ ನೇಹಾ ಧೂಪಿಯಾ ಹಾಗೂ ಅಂಗದ್​ ಬೇಡಿ ಈಗ ಗುಟ್ಟೊಂದನ್ನು ಬಹಿರಂಗಪಡಿಸಿದ್ದಾರೆ.  ಅದು ಸಹ ವಿವಾಹವಾಗಿ ಕೇವಲ ಮೂರು ತಿಂಗಳು ಕಳೆದಿರುವಾಗಲೇ ಈ ದಂಪತಿ ಪ್ರಗ್ನೆಂಸಿ ಫೋಟೋಶೂಟ್​ ಮಾಡಿಸಿದ್ದಾರೆ.

ಹೌದು ಈ ಜೋಡಿ ಸದ್ದಿಲ್ಲದೆ ವಿವಾಹವಾದಾಗಲೂ ಸಹ ನೇಹಾ ಗರ್ಭಿಣಿಯಾಗಿರುವ ಕಾರಣಕ್ಕೆ ತರಾತುರಿಯಲ್ಲಿ ಈ ವಿವಾಹ ಮಾಡಲಾಯಿತು ಎಂದು ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇದೇ ಗಳಿ ಮಾತು ನಿಜವಾಗಿದೆ.

ನೇಹಾ ಟ್ವಿಟರ್​ನಲ್ಲಿ ಹಾಗೂ ಅಂಗದ್​ ಇನ್​​ಸ್ಟಾಗ್ರಾಂನಲ್ಲಿ ತಾವಿಬ್ಬರು ಸದ್ಯದಲ್ಲೇ ಅಪ್ಪ-ಅಮ್ಮನಾಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಬೇಬಿ ಬಂಪ್​ ಫೋಟೋ ಶೂಟ್​ ಮಾಡಿಸಿಕೊಂಡಿರುವ ಈ ಜೋಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ಈ ಶೀರ್ಷಿಕೆ ನೀಡಿದ್ದಾರೆ. ಹೌದು ವದಂತಿಯಾಗಿದ್ದ ಸುದ್ದಿ ಈಗ ನಿಜವಾಗಿದೆ. ಈಗ ನಾವಿಬ್ಬರು ಮೂವರಾಗಿದ್ದಾರೆ ಎಂದು ಅಂಗದ್​ ಬರೆದುಕೊಂಡಿದ್ದಾರೆ.

Here’s to new beginnings ... #3ofUs .... 🤰👼 #satnamwaheguruੴ pic.twitter.com/60gRk9a1KH
Loading...
 Ha! Turns out this rumor is true.. #3ofus 🤰👼 #satnamwaheguruੴ


A post shared by Angad Bedi (@angadbedi) on


ಈ ಜೋಡಿ ಹಂಚಿಕೊಂಡಿರುವ ಖುಷಿಯ ವಿಷಯಕ್ಕೆ ಬಾಲಿವುಡ್​ ಮಂದಿ ಶುಭ ಕೋರಿದ್ದಾರೆ.  ಕರಣ್​ ಜೋಹರ್​, ಟ್ವಿಂಕಲ್​ ಖನ್ನಾ, ಮಲೈಕಾ ಅರೋರಾ ಖಾನ್​, ವಿಶಾಲ್​ ದದ್ಲಾನಿ, ಮಾನುಷಿ ಚಿಲ್ಲಾರ್​, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
ಮೇ 10ರಂದು 37 ವರ್ಷದ ನೇಹಾ ಹಾಗೂ 35 ವರ್ಷದ ಅಂಗದ್​ ಬೇಡಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...