Neha Dhupia and Angad Bedi: ನೇಹಾ ಧೂಪಿಯಾ, ಅಂಗದ್ ಬೇಡಿ ಮದುವೆ ಪೋಸ್ಟ್​ಗೆ 600 ಸಂದೇಶ! ಅಷ್ಟಕ್ಕೂ ಅವುಗಳಲ್ಲಿ ಇದ್ದಿದ್ದೇನು?

ನಟಿ ನೇಹಾ ಧೂಪಿಯಾ ಅವರು ಅಂಗದ್ ಬೇಡಿ ಅವರನ್ನು ಒಂದು ತೀರಾ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಇವರು ಮಾಡಿದ ಇನ್ಸ್ಟಾಗ್ರಾಮ್ ಪೋಸ್ಟ್ ಗೆ ೬೦೦ ಕಾಮೆಂಟ್ಸ್ ಬಂದಿದೆಯಂತೆ

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ

  • Share this:
ಈ ಬಾಲಿವುಡ್ ನಟ (Bollywood Actor) ಮತ್ತು ನಟಿಯರು (Actress) ಯಾವಾಗ, ಯಾರನ್ನು ಮತ್ತು ಎಲ್ಲಿ ಮದುವೆಯಾಗುತ್ತಾರೆ (Marriage) ಎಂದು ಕೆಲವೊಮ್ಮೆ ಅಭಿಮಾನಿಗಳಿಂದ ಊಹಿಸುವುದ್ದಕ್ಕೂ ಸಾಧ್ಯವಾಗುವುದಿಲ್ಲ. ಏಕೆಂದರೆ ನಟ ಮತ್ತು ನಟಿಯರ ಪ್ರೀತಿ, ಮದುವೆ ವಿಷಯ ಸ್ವಲ್ಪ ಗೊತ್ತಾದರೆ ಸಾಕು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳನ್ನೇ (Social Media) ಬುಡಮೇಲು ಮಾಡಿ ಆ ಸುದ್ದಿಗಳನ್ನು ಹುಡುಕಿ ತೆಗೆಯುತ್ತಾರೆ ಎಂದು ಹೇಳಬಹುದು. ತಮ್ಮ ಜೀವನದ  ಬಗ್ಗೆ ಎಲ್ಲರಿಗೂ ಗೊತ್ತಾಗಿ, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಮತ್ತು ಸುದ್ದಿಗಳನ್ನು ಹರಡಿಸುತ್ತಾರೆ ಎಂದು ನಟ ಮತ್ತು ನಟಿಯರು ಹೆಚ್ಚಾಗಿ ಇಂತಹ ವಿಷಯಗಳನ್ನು ತುಂಬಾನೇ ಗೌಪ್ಯವಾಗಿ ಇರಿಸುತ್ತಾರೆ. ಹೀಗೆ ಅನೇಕ ನಟ ಮತ್ತು ನಟಿಯರು ಮದುವೆಯ ದಿನ ಹತ್ತಿರ ಬರುವ ತನಕವೂ ಸಹ ತುಟಿಬಿಚ್ಚಿ ಇಂತಹದರ ಬಗ್ಗೆ ಮಾತಾಡುವುದಿಲ್ಲ.

ನೇಹಾ ಧೂಪಿಯಾ- ಅಂಗದ್ ಬೇಡಿ ವಿವಾಹ
ಇಲ್ಲೊಬ್ಬ ಬಾಲಿವುಡ್ ನಟಿ ಸಹ ಹೀಗೆ ಯಾರಿಗೂ ಹೇಳದೇ ಕೇವಲ ಎರಡೇ ದಿನಗಳಲ್ಲಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಮದುವೆ ಆಗಿದ್ದರು ಎಂದು ಹೇಳಬಹುದು. ಮೇ 10, 2018 ರಂದು ನಟಿ ನೇಹಾ ಧೂಪಿಯಾ ಅವರು ಅಂಗದ್ ಬೇಡಿ ಅವರನ್ನು ಒಂದು ತೀರಾ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ವಿವಾಹವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿರುತ್ತದೆ.

ಇನ್‌ಸ್ಟಾಗ್ರಾಮ್ ಪೋಸ್ಟ್​ಗೆ 600 ಸಂದೇಶಗಳು
ಒಂದು ಸಂದರ್ಶನದಲ್ಲಿ ನೇಹಾ ಅವರು "ನಾನು ಮದುವೆಯಾಗಿದ್ದೇನೆ ಎಂಬ ವಿಚಾರವನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ನಂತರ ನಾನು ನನ್ನ ಫೋನ್ ಅನ್ನು ಪರಿಶೀಲಿಸಿದಾಗ, ನನ್ನ ಪೋನ್ ಗೆ ಸುಮಾರು 600 ಸಂದೇಶಗಳು ಬಂದಿದ್ದವು, ಅದು 'ಮದುವೆಯ ಅಭಿನಂದನೆಗಳ' ಬದಲಿಗೆ 'ಏನಿದು’ ಎಂದು ಕೇಳುವ ರೀತಿಯಲ್ಲಿ ‘ವಾಟ್ ದಿ ಫ..ಕ್' ಎಂದು ಬರೆಯಲಾಗಿತ್ತು” ಎಂದು ಹೇಳಿ ಕೊಂಡಿದ್ದರು.

ಈ ನಟಿಯ ಮದುವೆ ಸಮಾರಂಭದ ವಿಷಯ ಕೇವಲ ಈಕೆಯ ಅಭಿಮಾನಿಗಳಿಗಷ್ಟೇ ಅಲ್ಲದೆ, ಅನೇಕ ಸ್ನೇಹಿತರನ್ನು ಸಹ ಈ ವಿಷಯ ಆಶ್ಚರ್ಯಚಕಿತಗೊಳಿಸಿತು ಮತ್ತು ಕೆಲವರಂತೂ ಇವರ ಮೇಲೆ ತುಂಬಾನೇ ಕೋಪಗೊಂಡರು. ನಟಿ ನೇಹಾ ತನ್ನ ಮನಸ್ಸನ್ನು ಬದಲಾಯಿಸುವುದು ಅಂಗದ್ ಗೆ ಇಷ್ಟವಿಲ್ಲದ ಕಾರಣ ದಂಪತಿಗಳು ಕೇವಲ ಎರಡು ದಿನಗಳಲ್ಲಿಯೇ ಮದುವೆಗೆ ಬೇಕಾದ ಎಲ್ಲವನ್ನೂ ತಯಾರಿ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.


View this post on Instagram


A post shared by ANGAD BEDI (@angadbedi)
ಇವರಿಬ್ಬರು ದೆಹಲಿಯ ಗುರುದ್ವಾರದಲ್ಲಿ ಸಾಂಪ್ರದಾಯಿಕವಾಗಿ ಆನಂದ್ ಕರಜ್ ಸಮಾರಂಭದಲ್ಲಿ ವಿವಾಹವಾದರು. ನಿನ್ನೆಗೆ ಎಂದರೆ ಮಂಗಳವಾರಕ್ಕೆ, ಈ ದಂಪತಿಗಳು ಮದುವೆಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದ ಹಾಗೆ ಆಯ್ತು. ಇವರಿಬ್ಬರ ಪ್ರೇಮ ಕಥೆಯು ಕಾಲಾನಂತರದಲ್ಲಿ ಹೇಗೆ ಹೊರ ಹೊಮ್ಮಿತು ಎಂಬುದನ್ನು ನಾವು ಇಲ್ಲಿ ತಿಳಿದು ಕೊಳ್ಳಬಹುದು.

ಅಂಗದ್ ಅವರು ನೇಹಾರನ್ನು ಮೊದಲ ಬಾರಿ ನೋಡಿದ್ದೆಲ್ಲಿ?
ನಟಿ ನೇಹಾ ಅವರ ಪ್ರಕಾರ, ಅಂಗದ್ ಅವರೇ ನೇಹಾ ಅವರನ್ನು ಮೊದಲ ಬಾರಿಗೆ ದೆಹಲಿಯ ಒಂದು ಜಿಮ್ ನಲ್ಲಿ ನೋಡಿದರಂತೆ ಮತ್ತು ನಂತರವಷ್ಟೇ ಅವರು 'ನಾನು ಒಂದು ದಿನ ಅವಳ ಬಗ್ಗೆ ತಿಳಿದು ಕೊಳ್ಳುತ್ತೇನೆ' ಎಂದು ನಿರ್ಧರಿಸಿದ್ದರಂತೆ ಎಂದು ಹೇಳಿದರು.

ನಂತರ, ಈ ಇಬ್ಬರೂ ಪರಸ್ಪರ ಸ್ನೇಹಿತರ ಪಾರ್ಟಿಯಲ್ಲಿ ಭೇಟಿಯಾದರು. "ನಾವು ಬಾಲ್ಕನಿಯಲ್ಲಿ ನಿಂತಿದ್ದೆವು ಅಷ್ಟೆ. ನಾನು ಅವನ ವಿಭಿನ್ನ ಮುಖವನ್ನು ನೋಡಿದೆ, ಆತ ತಮಾಷೆ ಮತ್ತು ಬುದ್ಧಿವಂತಿಕೆಯನ್ನು ಮೀರಿ ಸಂವೇದನಾಶೀಲ ವ್ಯಕ್ತಿಯಾಗಿದ್ದನ್ನು ನಾನು ಅರಿತುಕೊಂಡೇ" ಎಂದು ಸಂದರ್ಶನವೊಂದರಲ್ಲಿ ಅಂಗದ್ ಅವರನ್ನು ಭೇಟಿಯಾದ ಬಗ್ಗೆ ನೇಹಾ ಹೇಳಿ ಕೊಂಡಿದ್ದರು.

ಇದನ್ನೂ ಓದಿ: Viral Bride: ತಮಾಷೆ ಮಾಡೋಕೆ ಹೋಗಿ ಗಂಡನಿಗೆ ಹೀಗೆ ಮಾಡೋದಾ ಈ ವಧು? ವಿಡಿಯೋ ವೈರಲ್

ಅಂತಿಮವಾಗಿ, ಈ ಇಬ್ಬರು ಒಂದು ದಿನ ಒಳ್ಳೆಯ ಸ್ನೇಹಿತರಾದರು ಮತ್ತು ಅಂಗದ್ ಅವರಿಗೆ ಮನೆಯ ಊಟ ಮಾಡಬೇಕು ಎಂದೆನಿಸಿದಾಗಲೆಲ್ಲಾ ನಟಿ ನೇಹಾ ಅವರ ಮನೆಗೆ ಹೋಗುತ್ತಿದ್ದರು. ತನ್ನೊಂದಿಗೆ ಸಮಯ ಕಳೆಯಲು ಅಂಗದ್ ಏನು ಬೇಕಾದರೂ ಮಾಡಬಹುದು ಎಂದು ನೇಹಾ ಸಂದರ್ಶನದಲ್ಲಿ ಹೇಳಿ ಕೊಂಡಿದ್ದರು.

ಅಂಗದ್ ಮದುವೆ ಪ್ರಸ್ತಾಪ ಹೇಗಿತ್ತು ಗೊತ್ತೇ?
ಅಂಗದ್ ಮಾಡಿದ ಮದುವೆಯ ಪ್ರಸ್ತಾಪವು ತುಂಬಾನೇ ವಿಭಿನ್ನವಾಗಿತ್ತು, ನೇಹಾಗೆ ಪ್ರಪೋಸ್ ಮಾಡುವ ಬದಲು, ಅಂಗದ್ ನೇರವಾಗಿ ಅವಳ ಮನೆಗೆ ಹೋಗಿ ಅವಳನ್ನು ಮದುವೆಯಾಗಲು ಬಯಸುತ್ತೇನೆ ಎಂದು ಅವಳ ಹೆತ್ತವರಿಗೆ ತಿಳಿಸಿದ್ದರಂತೆ. "ನನಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ, ಆಗ ನಾನು ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೆ ಮತ್ತು ಅಂಗದ್ ನನ್ನ ಗೆಳೆಯನನ್ನು ಭೇಟಿಯಾದಾಗ, ಅವನು ಅವನೊಂದಿಗೆ ಚೆನ್ನಾಗಿಯೇ ಇರುತ್ತಿದ್ದ ಮತ್ತು ಎಂದಿಗೂ ಅಂಗದ್ ತನ್ನನ್ನು ಇಷ್ಟ ಪಡುತ್ತಿದ್ದೇನೆ ಎಂದು ನನ್ನ ಮೇಲಿನ ಅವನ ಪ್ರೀತಿಯ ಬಗ್ಗೆ ನನ್ನ ಬಳಿ ಹೇಳಿ ಕೊಂಡಿರಲಿಲ್ಲ" ಎಂದು ನೇಹಾ ಹೇಳಿದ್ದಾರೆ.

ನೇಹಾ ಪೋಷಕರು ಒಪ್ಪಿದ ನಂತರ, ಈ ಇಬ್ಬರು ತಮ್ಮ ಮದುವೆಗಾಗಿ ದೆಹಲಿಗೆ ಹೋದರು. ಇವರ ವಿವಾಹದಲ್ಲಿ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಅವರು ತಮ್ಮ ಮದುವೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ ನಂತರವೇ ಅದು ಚಲನಚಿತ್ರೋದ್ಯಮದ ಅವರ ಸ್ನೇಹಿತರಿಗೆ ಆಘಾತವನ್ನುಂಟು ಮಾಡಿತು ಎಂದು ಹೇಳಬಹುದು.

ಸಿಂಪಲ್ ಆಗಿ ನಡೆದ ಮದುವೆ
ದಂಪತಿಗಳು ತಮ್ಮ ಮದುವೆಯನ್ನು ಘೋಷಿಸಿದಾಗ ಇವರಿಗೆ ಬರೀ ಶುಭ ಹಾರೈಕೆಗಳಷ್ಟೇ ಬಂದಿರಲಿಲ್ಲ, ಬದಲಾಗಿ ಇವರಿಗೆ ಸ್ವಲ್ಪ ಅಭಿಮಾನಿಗಳು ಕಾಲೆಳದದ್ದು ಉಂಟು. ಇಷ್ಟು ತಡವಾಗಿ ಮದುವೆಯಾಗಿದ್ದೀರಿ ಎಂದು ನೇಹಾ ಅವರನ್ನು ಅಭಿಮಾನಿಯೊಬ್ಬರು ಪ್ರಶ್ನಿಸಿದಾಗ ಜನರ ಪ್ರತಿಕ್ರಿಯೆಗಳ ವೀಡಿಯೋವೊಂದನ್ನು ಇವರು ನೆನಪಿಸಿಕೊಂಡಿದ್ದರು. ಅವರು "ನಾವು ತುಂಬಾನೇ ಸಿಂಪಲ್ ಆಗಿ ಮದುವೆ ಮಾಡಿಕೊಂಡೆವು ಮತ್ತು ಅದು ಬಹಳಷ್ಟು ಅನುಮಾನಗಳಿಗೆ ಆಹ್ವಾನವಾಗಿತ್ತು. "ಹುಡುಗಿ ತುಂಬಾ ತಡವಾಗಿ ಮದುವೆಯಾದಳು', 'ವರ ಈ ವಧುಗಿಂತಲೂ ವಯಸ್ಸಿನಲ್ಲಿ ಚಿಕ್ಕವನು' ಈ ರೀತಿಯ ಮಾತುಗಳು ಕೇಳಲು ಸಿಕ್ಕವು” ಎಂದು ನೇಹಾ ಹೇಳಿದರು.

ಇದನ್ನೂ ಓದಿ: Weight Loss Story: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?

ನೇಹಾ ಮತ್ತು ಅಂಗದ್ ಈಗ ಇಬ್ಬರು ಮಕ್ಕಳ ಪೋಷಕರು. ನವೆಂಬರ್ 18, 2018 ರಂದು ಅವರು ತಮ್ಮ ಮಗಳು ಮೆಹರ್ ಧೂಪಿಯಾ ಬೇಡಿ ಅವರನ್ನು ಸ್ವಾಗತಿಸಿದರು. ಅವರ ಮಗ ಗುರಿಕ್ ಧೂಪಿಯಾ ಬೇಡಿ ಅಕ್ಟೋಬರ್ 3, 2021 ರಂದು ಜನಿಸಿದರು.

ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಗದ್ ಹೇಳಿದ್ದೇನು?
ಮಂಗಳವಾರ, ಅಂಗದ್ ನೇಹಾ ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮತ್ತು ಅವರ ಸ್ನೇಹಿತರು ಶುಭ ಹಾರೈಸಿದರು. ತಮ್ಮ ಮದುವೆಯ ದಿನದ ಕೆಲವು ಫೋಟೋಗಳನ್ನು ಹಂಚಿಕೊಂಡ ಅಂಗದ್, ತುಮ್ಹಾರಿ ಸುಲು ನಟಿಯೊಂದಿಗೆ ಜೀವನವು ಉತ್ತಮವಾಗಿದೆ ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ, ಆದರೆ ಅವರು ಸಾಕಷ್ಟು ಹಣವನ್ನು ಖರ್ಚು ಮಾಡುವ ಬಗ್ಗೆ ಸಹ ತಮಾಷೆ ಮಾಡಿದ್ದಾರೆ.

ಅಂಗದ್ ಅವರು ಪಂಜಾಬಿ ಭಾಷೆಯಲ್ಲಿ ನೇಹಾ ಅವರಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಅಂಗದ್ ಅವರು ನೇಹಾ ಬಗ್ಗೆ ತುಂಬಾ ಗಂಭೀರವಾಗಿ ಕೆಲವು ಮಾತುಗಳನ್ನು ಸಹ ಈ ಪೋಸ್ಟ್ ನಲ್ಲಿ ಹಂಚಿ ಕೊಂಡಿದ್ದಾರೆ ಎಂದು ಹೇಳಬಹುದು.

“ನೀನು ನನಗೆ ತುಂಬಾನೇ ನೀಡಿರುವೆ. ನಿನ್ನೊಂದಿಗೆ ಸಮಯ ಕಳೆಯುವುದು ಯಾವಾಗಲೂ ಅತ್ಯಂತ ವಿಶೇಷ ಭಾವನೆಯಾಗಿದೆ. ಹೋರಾಟ.. ಕಿರುಚಾಟ.. ಅಳು.. ಅಲ್ಲಿ ಎಲ್ಲವೂ ಇದೆ. ಕಠಿಣ ಪರಿಸ್ಥಿತಿಯಲ್ಲಿ ನೀನು ನನಗೆ ಮತ್ತು ನಾನು ನಿನಗೆ ಸದಾ ಜೊತೆಯಾಗಿರುತ್ತೇವೆ ಎಂದು ನನಗೆ ತಿಳಿದಿದೆ. ಒಟ್ಟಿನಲ್ಲಿ ಹೇಳುವುದಾದರೆ ನಾವು ನೀರಿನಂತೆ ಇರೋಣ ಮತ್ತು ನಮ್ಮದೇ ಆದ ಆಕಾರ ಮತ್ತು ರೂಪವನ್ನು ಕಂಡು ಕೊಳ್ಳೋಣ. ಇಲ್ಲಿ ಈ ಜೀವನವನ್ನು ನಾವಿಬ್ಬರೂ ಸಂಪೂರ್ಣವಾಗಿ ಜೀವಿಸೋಣ" ಎಂದು ಬರೆದಿದ್ದಾರೆ.

ಇದನ್ನೂ ಓದಿ: Children name: ಆಗ್ಲೇ ತಮ್ಮ ಮಕ್ಕಳಿಗೆ ಏನು ಹೆಸರಿಡೋದು ಅಂತ ದೊಡ್ಡ ಲಿಸ್ಟ್ ರೆಡಿ ಇಟ್ಕೊಂಡಿದಾರೆ ರಣ್ವೀರ್ ಸಿಂಗ್! ಯಾವಾಗ ಸಿಹಿಸುದ್ದಿ?

ಪತಿಯ ಶುಭಾಶಯದ ಪೋಸ್ಟ್ ಗೆ ಪತ್ನಿ ನೇಹಾ ರಿಪ್ಲಯ್
ತನ್ನ ಪತಿಯ ಶುಭಾಶಯದ ಪೋಸ್ಟ್ ಗೆ ಪತ್ನಿ ನೇಹಾ ತಮ್ಮ ನಾಲ್ಕು ವರ್ಷಗಳ ವೈವಾಹಿಕ ಜೀವನದ ಹಲವಾರು ಫೋಟೋಗಳನ್ನು ಸೇರಿಸಿ ಒಂದು ಮುದ್ದಾದ ಕೊಲಾಜ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, "ನಾಲ್ಕು ವರ್ಷಗಳು... ಇಬ್ಬರು ಮಕ್ಕಳು ಮತ್ತು ನಿಮ್ಮ ಜೊತೆಗೆ ಜೀವನ ಪೂರ್ತಿ ಒಟ್ಟಿಗೆ ಇರುವುದು. ನನ್ನ ಪ್ರೀತಿಯ ಅಂಗದ್ ಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಹೇಳಿ ಬರೆದು ಇದರ ಜೊತೆಗೆ ಹೃದಯದ ಎಮೋಜೀಯನ್ನು ಸಹ ಪೋಸ್ಟ್ ನ ಶೀರ್ಷಿಕೆಯಲ್ಲಿ ಹಾಕಿ ಕೊಂಡಿದ್ದಾರೆ.
Published by:Ashwini Prabhu
First published: