Video: ವೈರಲ್​ ಆಯಿತು ಐಟಂ ರಾಣಿ ನೀತು ಶೆಟ್ಟಿಯ ಈ ವಿಡಿಯೋ..!

news18
Updated:August 28, 2018, 4:00 PM IST
Video: ವೈರಲ್​ ಆಯಿತು ಐಟಂ ರಾಣಿ ನೀತು ಶೆಟ್ಟಿಯ ಈ ವಿಡಿಯೋ..!
news18
Updated: August 28, 2018, 4:00 PM IST
ನ್ಯೂಸ್​ 18 ಕನ್ನಡ

'ಗಾಳಿಪಟ' ಸಿನಿಮಾದಲ್ಲಿ ದೂಧ್​ಪೇಡ ದಿಗಂತ್​ಗೆ ಜೋಡಿಯಾಗಿ ಅಭಿನಯಿಸಿದ್ದ ನೀತು ಯಾರಿಗೆ ತಾನೆ ಗೊತ್ತಿಲ್ಲ. ನಾಯಕಿಯಾಗಿ, ಪೋಷಕ ನಟಿಯಾಗಿ ಅಭಿನಯಿಸಿರುವ ನೀತು ಐಟಂ ಹಾಡಿಗೆ ಈ ಹಿಂದೆಯೇ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು.

ಹೌದು ಅದೇ ಗಾಳಿಪಟದ ಗಂಡುಬೀರಿ ಹುಡುಗಿ ನೀತು ಶೆಟ್ಟಿ ಈಗ ಕನ್ನಡ ಮತ್ತೊಂದು ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಮಣಿ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ .ಡಿ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ 'ಹ್ಯಾಂಗೋವರ್' ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ನೀತು ಹೆಜ್ಜೆ ಹಾಕಿರುವ ಬಿಡುಗಡೆಯಾಗಿ 24 ಗಂಟೆಗಳಲ್ಲೇ ಸುಮಾರು 3 ಲಕ್ಷಕ್ಕೂ ಮೇಲೆ ವೀಕ್ಷಣೆಯಾಗಿದೆ. ಹಾಡುನ್ನು ಕೇಳಿದವರೆಲ್ಲ ಮೆಚ್ಚಿಕೊಳ್ಳುತ್ತಿದ್ದಾರೆ.



'ನಾನೆ ರುಕ್ಕು.. ಕೊಡ್ತೀನಿ ಒಂದು ಲುಕ್ಕು.. ನಾನಂದ್ರೆ ಫುಲ್ಲು ಕಿಕ್ಕು...' ಎಂದು ಹೇಳುತ್ತಾ ಹಾಟ್ ಹಾಟ್ ಆಗಿ ನೀತು ಶೆಟ್ಟಿ ಕಾಣಿಸಿಕೊಂಡಿರುವ ಈ ಹಾಡಿಗೆ ವೀರ್​ಸಮರ್ಥ್ ಅವರ ಸಂಗೀತ ಸಂಯೋಜನೆ ಇದ್ದು, ಕೃಷ್ಣ ಅವರ ಸಾಹಿತ್ಯವಿದೆ. ಸಿಪ್ರಿಯಾ ಲೋಹಿತ್ ಅವರು 'ನಿನ್ನೆ ನೋವುಗಳ.. ಮರೆತು ನಾವುಗಳ.. ದೋಸ್ತಿ ಮಾಡೋಣ ಇಲ್ಲಿ ಈಕ್ಷಣ' ಎಂದು ಹಾಡಿದ ಹಾಡಿಗೆ ಕಲೈ ಅವರ ನೃತ್ಯ ಸಂಯೋಜನೆ ಮತ್ತು ಯೋಗಿಯವರ ಛಾಯಾಗ್ರಹಣವಿದೆ.

'ಹ್ಯಾಂಗೋವರ್'ನಲ್ಲಿ ಅಭಿನಯಿಸಿದ ಮೂವರು ಹುಡುಗರು ಮತ್ತು ಮೂವರು ಹುಡುಗಿಯರ ಪರಿಚಯವೂ ಈ ಹಾಡಿನ ಮುಖಾಂತರವೇ ನಡೆಯುತ್ತದೆ. ಈ ಪಾರ್ಟಿಯ ಹ್ಯಾಂಗೋವರೇ ಇಡೀ ಚಿತ್ರದ ಮೂಲ ಕಥೆಗೆ ಕಾರಣವಾಗುತ್ತದೆಯಂತೆ. ಇದನ್ನು ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕ ವಿಠಲ್ ಭಟ್.

ಚಿತ್ರದ ಮೊದಲ ಹಂತದಲ್ಲಿ ಬರುವ ಈ ಹಾಡು ಮೋಜು-ಮಸ್ತಿಯ ಜೊತೆಗೆ 'ಎಲ್ಲ ಕಂಡೋರೇ ಇಲ್ಲಾ.. ಕದ್ದು ತಿನ್ನೋರೇ ಎಲ್ಲ..' ಹೀಗೆ ಒಂದಿಷ್ಟು ಫಿಲಾಸಫಿಯನ್ನೂ ಹೇಳುತ್ತಿದೆ. ನೀತು ಶೆಟ್ಟಿಯವರ ಸಿನಿ ಜೀವನದಲ್ಲಿ ಇದು ದಿ ಬೆಸ್ಟ್ ಡಾನ್ಸ್ ನಂಬರ್ ಎಂದು ಅವರೇ ಹೇಳಿಕೊಂಡಿದ್ದಾರೆ.

ಚಿತ್ರ ಬಿಡುಗಡೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಚಿತ್ರತಂಡ, ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ಎರಡನೇ ವಾರ ಈ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆಯಂತೆ.

 
First published:August 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ